Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ವಿಗ್ಗಿ ಜೆಪ್ಟೋ ಫುಡ್‌ಅಪ್‌ ವಿರುದ್ಧ ಹೈಕೋರ್ಟ್ ನೋಟಿಸ್ ನೀಡಿದ್ದೇಕೆ?

Spread the love

ದೆಹಲಿ :ದೃಷ್ಟಿಹೀನ ಬಳಕೆದಾರರಿಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ನ್ಯಾವಿಗೇಟ್ ಮಾಡುವುದು ಕಷ್ಟಕರ ಅಥವಾ ಅಸಾಧ್ಯವಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಖ್ಯಾತ ಆಹಾರ ಮತ್ತು ದಿನಸಿ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಜೆಪ್ಟೋ, ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಆದೇಶಿಸಿ ದೆಹಲಿ ಹೈಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ. ಕಾನೂನುಬದ್ಧ ಆದೇಶದ ಹೊರತಾಗಿಯೂ, ಸ್ವಿಗ್ಗಿ ಮತ್ತು ಜೆಪ್ಟೊದ ಅಪ್ಲಿಕೇಶನ್‌ಗಳು ಸ್ಕ್ರೀನ್-ರೀಡರ್ ಸಾಫ್ಟ್‌ವೇರ್‌ನೊಂದಿಗೆ ಹೊಂದಿಕೆಯಾಗುವುದಿಲ್ಲ, ಇದು ದೃಷ್ಟಿಹೀನರಿಗೆ ಉತ್ಪನ್ನಗಳನ್ನು ಹುಡುಕಲು ಅಥವಾ ಆರ್ಡರ್ ಮಾಡಲು ಕಷ್ಟಕರವಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ. ವರದಿಗಳ ಪ್ರಕಾರ, ದಿವ್ಯಾಂಗರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಎನ್‌ಜಿಒ ಮಿಷನ್ ಆಕ್ಸೆಸಿಬಿಲಿಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್ ಈ ಕ್ರಮ ಕೈಗೊಂಡಿದೆ. ಫುಡ್‌ ಡೆಲಿವರಿ ಅಪ್ಲಿಕೇಶನ್‌ಗಳು ದೃಷ್ಟಿಹೀನ ಹಾಗೂ ದಿವ್ಯಾಂಗ ಬಳಕೆದಾರರಿಗೆ ಸುಲಭವಾಗಿ ಆಪರೇಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲದೆ, ಅದು ಅವರ ಕಾನೂನುಬದ್ಧ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂಬುದಾಗಿ ಎನ್‌ಜಿಒ ಸಂಸ್ಥೆ ಹೇಳಿದೆ. ಲೈವ್ ಲಾ ವರದಿಯ ಪ್ರಕಾರ, ಈ ಪ್ರಕರಣವನ್ನು ಬುಧವಾರ ಆಲಿಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರು, ಸ್ವಿಗ್ಗಿ, ಜೆಪ್ಟೋ ಹಾಗೂ ಸಂಬಂಧಿತ ಸಚಿವಾಲಯಗಳಿಗೆ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿ ಮುಂದಿನ ವಿಚಾರಣೆ 2025ರ ಮೇ 28ಕ್ಕೆ ಮುಂದೂಡಿದೆ.

ವಕೀಲ ರಾಹುಲ್ ಬಜಾಜ್ ವಾದ ಮಂಡಿಸಿದರು. ಇವುಗಳಲ್ಲಿ ಲೇಬಲ್ ಮಾಡದೆ ಬಿಟ್ಟಿರುವ ಬಟನ್‌ಗಳು ಹಾಗೂ ಮೆನುಗಳು, ಧ್ವನಿ ಮೂಲಕ ಮಾರ್ಗದರ್ಶನ ಅಥವಾ ಸ್ಕ್ರೀನ್ ರೀಡರ್ ಕೊರತೆ, ಮತ್ತು ಉತ್ಪನ್ನ ವಿವರಗಳನ್ನು ನೀಡದಿರುವುದು ಸೇರಿವೆ. ರಿಟರ್ನ್ ಅಥವಾ ಪಾವತಿಗಳ ವೇಳೆ ಫೋನ್ ಕ್ಯಾಮೆರಾ ಬಳಸಬೇಕಾದ ಸಂದರ್ಭದಲ್ಲಿ ದೃಷ್ಟಿಹೀನ ಬಳಕೆದಾರರು ಎದುರಿಸುವ ಸಮಸ್ಯೆಗಳ ಕಾರಣದಿಂದಾಗಿ ಈ ಪ್ರಕ್ರಿಯೆ ಅಸಾಧ್ಯವಾಗುತ್ತದೆ ಎಂಬುದನ್ನು ಅರ್ಜಿ ಸ್ಪಷ್ಟಪಡಿಸುತ್ತದೆ.

ಅರ್ಜಿಯ ಪ್ರಕಾರ, ಈ ಅಪ್ಲಿಕೇಶನ್‌ಗಳು ಭಾರತದ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016ರ ಸೆಕ್ಷನ್ 40 ಮತ್ತು 46 ಹಾಗೂ ಅದರಡಿ ಜಾರಿಗೆ ಬಂದ 2017ರ ನಿಯಮಗಳ ನಿಯಮ 15 ರಂತೆ ನಿಗದಿಯಾದ ಪ್ರವೇಶಸಾಧ್ಯತೆಯ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ. ಇದಲ್ಲದೆ, ಭಾರತೀಯ ಸಂವಿಧಾನದ ವಿಧಿ 14 (ಸಮಾನತೆ), ವಿಧಿ 19 (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ವಿಧಿ 21 (ಜೀವ ಮತ್ತು ಘನತೆಯ ಹಕ್ಕು) ಸಹ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಮಾನದಂಡಗಳ ಜಾರಿಗೊಳಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೂ ಅರ್ಜಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಮಿಷನ್ ಆಕ್ಸೆಸಿಬಿಲಿಟಿ ಸಂಘಟನೆಯು ಸರ್ಕಾರದಿಂದ ಮಾನ್ಯತೆ ಪಡೆದ ತಜ್ಞರಿಂದ ಈ ಅಪ್ಲಿಕೇಶನ್‌ಗಳ ಸಂಪೂರ್ಣ ಪ್ರವೇಶ ಸಾಧ್ಯತೆ ಕುರಿತು ಪರಿಶೋಧನೆ ನಡೆಸುವಂತೆ ಮನವಿ ಮಾಡಿದ್ದು, ಸ್ವಿಗ್ಗಿ ಮತ್ತು ಜೆಪ್ಟೋ ತಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಆರಾಮವಾಗಿ ಆಪರೇಟ್‌ ಮಾಡುವಂತಹ ನಿಖರ ಮಾರ್ಗಸೂಚಿಗಳನ್ನು ನೀಡಬೇಕೆಂದು ನ್ಯಾಯಾಲಯವನ್ನು ತಿಳಿಸಿದೆ.

ಈ ಮಾರ್ಗಸೂಚಿಗಳಲ್ಲಿ ಧ್ವನಿ ಮಾರ್ಗದರ್ಶನದ ವ್ಯವಸ್ಥೆ, ವಿನ್ಯಾಸದ ದೋಷಗಳನ್ನು ಸರಿಪಡಿಸುವುದು, ಪ್ರತಿಯೊಂದು ನವೀಕರಣವು ಪ್ರವೇಶಸಾಧ್ಯತೆಯ ಮಾನದಂಡಗಳಿಗೆ ಅನುಗುಣವಾಗಿದೆಯೆಂದು ಖಚಿತಪಡಿಸಿಕೊಳ್ಳುವುದು ಮೊದಲಾದವುಗಳನ್ನು ಒಳಗೊಂಡಿವೆ. ಡಿಜಿಟಲ್ ಸೇವೆಗಳನ್ನು ಆರಾಮವಾಗಿ ಆಪರೇಟ್‌ ಮಾಡುವ ರೀತಿಯಲ್ಲಿ ನಿರ್ಮಿಸಲು ಮತ್ತು ನಿರ್ವಹಿಸಲು ಕಂಪನಿಗಳು ತಮ್ಮ ಡೆವಲಪರ್‌ಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂಬುದು ಮತ್ತೊಂದು ಮುಖ್ಯ ಬೇಡಿಕೆ. ಜೊತೆಗೆ ದೃಷ್ಟಿಹೀನ ಬಳಕೆದಾರರಿಗೆ ರಿಟರ್ನ್ ಮತ್ತು ಮರುಪಾವತಿ ಪ್ರಕ್ರಿಯೆಗಳು ಸುಲಭವಾಗಿ ಹಾಗೂ ಸ್ವಯಂಚಾಲಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಅರ್ಜಿಯಲ್ಲಿ ಒತ್ತಡ ಹಾಕಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *