ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿದ ನಂತರ 30 ವಾಹನ ಕೆಟ್ಟು ನಿಂತಿದ್ದೇಕೆ?

ಘಾಜಿಯಾಬಾದ್: ಇದೇ ಪೆಟ್ರೋಲ್ ಬಂಕ್, ಇದೇ ಪೆಟ್ರೋಲ್ ಎಂದು ಮುತುವರ್ಜಿ ವಹಿಸುವವರ ಸಂಖ್ಯೆ ಕಡಿಮೆ. ಎಲ್ಲಿ ವಾಹನದ ಇಂಧನ ಖಾಲಿಯಾಗುತ್ತೋ, ಅದರ ಸಮೀಪದ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ತುಂಬಿಸಿಕೊಳ್ಳುವುದು ಬಹುತೇಕರ ವಾಡಿಕೆ. ಹೀಗೆ ವಾಹನಕ್ಕೆ ಇಂಧನ ತುಂಬಿ ಕೆಲವೇ ಗಂಟೆಗಳಲ್ಲಿ ವಾಹನ ಕೆಟ್ಟು ನಿಂತಿದಿದೆ.

ಬರೋಬ್ಬರಿ 30ಕ್ಕೂ ಹೆಚ್ಚು ಕಾರುಗಳ ಮಾಲೀಕರಿಗೆ ಇದೇ ರೀತಿ ಅನುಭವಾಗಿದೆ. ಶೋ ರೂಂ ಸರ್ವೀಸ್ ಕೇಂದ್ರದಲ್ಲಿ ಪರಿಶೀಲಿಸಿದಾಗ ಇಂಧನ ಸಮಸ್ಯೆಯಿಂದ ಆಗಿದೆ ಅನ್ನೋ ಬಯಲಾಗಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಬಂಕ್‌ಗೆ ವಾಹನ ಮಾಲೀಕರು ಮುತ್ತಿಗೆ ಹಾಕಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಡೀಸೆಲ್ ಹಾಕಿದ ಮಾಲೀಕರಿಗೆ ತಲೆನೋವು
ಘಾಜಿಯಾಬಾದ್‌ನ ಬಜಾಜ್ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಉತ್ತಮ ಇಂಧನ ಮಾರಾಟ ಮಾಡಿಲ್ಲ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಡೀಸೆಲ್‌ಗೆ ಮಿಶ್ರಣ ಮಾಡಿ ಹಣ ಮಾಡುವ ಉದ್ದೇಶದಿಂದ ಕಳಪೆ ಗುಣಮಟ್ಟದ ಇಂಧನ ವಿತರಣೆ ಮಾಡಲಾಗಿದೆ. ಆಗಸ್ಟ್ 26 ರಿಂದ 29 ರವರೆಗೆ ಹಾಕಿದ ಇಂಧನದಿಂದ ಈ ಸಮಸ್ಯೆಯಾಗಿದೆ ಅನ್ನೋದು ಬಯಲಾಗಿದೆ. ಈ ಅವಧಿಯಲ್ಲಿ ಕಾರಿಗೆ ಡೀಸೆಲ್ ಹಾಕಿದ ಮಾಲೀಕರಿಗೆ ಸಮಸ್ಯೆಯಾಗಿದೆ.
ದುಬಾರಿ ಕಾರುಗಳಿಗೂ ಸಮಸ್ಯೆ
ಕಿಯಾ ಸೋನೆಟ್, ಕಿಯಾ ಸೆಲ್ಟೋಸ್, ಫಾರ್ಚುನರ್, ಸ್ಕಾರ್ಪಿಯೋ ಇನ್ನೋವಾ ಸೇರಿದಂತೆ ಹಲವು ಕಾರುಗಳ ಮಾಲೀಕರು ಇದೀಗ ಪೆಟ್ರೋಲ್ ಬಂಕ್ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಇಂಧು ತುಂಬಿಸಿಕೊಂಡು 40 ಕಿಲೋಮೀಟರ್ ಪ್ರಯಾಣ ಮಾಡಿದ ಕಿಯೋ ಸೆಲ್ಟೋಸ್ ಮಾಲೀಕನ ಕಾರು ಬಳಿಕ ಸ್ಟಾರ್ಟ್ ಆಗಿಲ್ಲ. ಏನೇ ಮಾಡಿದರೂ ವಾಹನ ಸ್ಟಾರ್ಟ್ ಆಗಿಲ್ಲ. ಹೀಗಾಗಿ ಶೋ ರೂಂಗೆ ಕರೆ ಮಾಡಲಾಗಿದೆ. ಶೋ ರೂಂ ಸಿಬ್ಬಂದಿಗಳು ಕಾರು ಟೋ ಮಾಡಿದ್ದಾರೆ. ಶೋ ರೂಂ ಸರ್ವೀಸ್ ಸೆಂಟರ್‌ನಲ್ಲಿ ಪರಿಶೀಲಿಸಿದಾಗ ಕಳಪೆ ಗುಣಮಟ್ಟದ ಇಂಧನದಿಂದ ಕಾರಿನ ಎಂಜಿನ್‌ಗೆ ಸಮಸ್ಸೆಯಾಗಿದೆ ಅನ್ನೋದು ಬಯಲಾಗಿದೆ.ರಿಪೇರಿಗೆ ಬರೋಬ್ಬರಿ 3.5 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಶೋ ರೂಂ ಸಿಬ್ಬಂಧಿಗಳು ಸೂಚಿಸಿದ್ದಾರೆ.
ಉಡಾಫೆ ಉತ್ತರಕ್ಕೆ ರೊಚ್ಚಿಗೆದ್ದ ಮಾಲೀಕರು
ಇದೇ ರೀತಿ ಹಲವು ಕಾರು ಮಾಲೀಕರಿಗೆ ಸಮಸ್ಯೆಯಾಗಿದೆ. ಪೆಟ್ರೋಲ್ ಬಂಕ್‌ಗೆ ತೆರಳಿ ಮಾಲೀಕರು ವಿಚಾರಿಸಿದಾಗ ಉಡಾಫೆ ಉತ್ತರ ನೀಡಿದ್ದಾರೆ. ಕಾರು ಕೆಟ್ಟು ನಿಂತರೆ ತಾನು ಜವಾಬ್ದಾರನಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕ ಉತ್ತರಿಸಿದ್ದಾರೆ. ರೊಚ್ಚಿಗೆದ್ದ ವಾಹನ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಗ್ರಾಹಕರ ವೇದಿಕೆ ಮೂಲಕ ಕಾನೂನು ಹೋರಾಟಕ್ಕೆ ಮಂದಾಗಿದ್ದಾರೆ.
ಹೆಚ್ಚಿನ ವಾಹನಗಳಿಗೆ ಆಗಿದೆ ಸಮಸ್ಯೆ
30ಕ್ಕೂ ಹೆಚ್ಚು ಮಂದಿ ಮಾಲೀಕರು ದೂರು ನೀಡಿದ್ದಾರೆ. ಆದರೆ ಕಡಿಮೆ ಪ್ರಮಾಣದಲ್ಲಿ ಇಂಧನ ತುಂಬಿಸಿಕೊಂಡವರಿಗೂ ಸಮಸ್ಯೆಯಾಗಿದೆ. ಹಲವರು ಈ ಕುರಿತು ಪರಿಶೀಲನೆ ಮಾಡಿಲ್ಲ. ಆದರೆ ಸ್ಥಳೀಯರ ಪ್ರಕಾರ, ಹಲವರು ಈ ಪೆಟ್ರೋಲ್ ಬಂಕ್‌ನಿಂದ ಇಂಧನ ತುಂಬಿಸಿಕೊಳ್ಳುತ್ತಾರೆ. ಈ ಪೈಕಿ ಸ್ಥಳೀಯರು ಇದ್ದಾರೆ. ಅವರ ವಾಹನಗಳಿಗೂ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ. ಪೆಟ್ರೋಲ್ ಬಂಕ್ ವಿರುದ್ಧ ದೂರು ದಾಖಲಾಗಿದ್ದು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಲವರು ಪೆಟ್ರೋಲ್ ಬಂಕ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕಳಪೆ ಗುಣಮಟ್ಟದ ಇಂಧನ ನೀಡುತ್ತಿದ್ದಾರೆ. ಈ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಇತ್ತ ಘಾಜಿಯಾಬಾದ್ ಪೆಟ್ರೋಲ್ ಬಂಕ್‌ನಿಂದ ಇಂಧನ ತುಂಬಿಸಿಕೊಂಡ ವಾಹನ ಮಾಲೀಕರು ಕಂಗಾಲಾಗಿದ್ದಾರೆ.
