ಐಟಿ ಕಂಪನಿಗಳನ್ನು ಎಐ ಸಂಸ್ಥೆಗಳಾಗಿ ಬದಲಾಯಿಸುತ್ತಿರುದೇಕೆ?

ಬೆಂಗಳೂರು:ಕೃತಕ ಬುದ್ಧಿಮತ್ತೆ (AI) ಪ್ರಭಾವ ಇಂದಿನ ದಿನಮಾಗಳಲ್ಲಿ ಭಾರತೀಯ ಐಟಿ ವಲಯದ ಪ್ರಮುಖ ಮತ್ತು ದೈತ್ಯ ಕಂಪನಿಗಳು ತಮ್ಮನ್ನು ತಾವು AI-ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿಕೊಳ್ಳುತ್ತಿವೆ. ಅಧಿಕ ಬಂಡವಾಳ ಹೂಡಿಕೆ ಮಾಡುವುದು, ಅಧಿಕ ಸಂಶೋಧನೆಗಿಂತ ಎಐ ಅಳವಡಿಕೆ ಉತ್ತಮ ಎಂದು ಭಾವಿಸಿರುವ ಕಂಪನಿಗಳು ಎಐ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿವೆ.

ಪ್ರಮುಖ ಐಟಿ ಕಂಪನಿಗಳಾಗಿರುವ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಕಂಪನಿಗಳು ಹಣಕಾಸು ವರ್ಷ 2025 ವಾರ್ಷಿಕ ವರದಿಗಳ ಅಧ್ಯಯನ ಇದೇ ಮಾಹಿತಿ ಬಹಿರಂಗಪಡಿಸಿವೆ. ವಿಶ್ವಮಟ್ಟದಲ್ಲಿ AI ತಂತ್ರಜ್ಞಾನ ಬೆಳೆಯುತ್ತಿದೆ. ಎಲ್ಲ ಕಂಪನಿಗಳು ಈ ತಂತ್ರಜ್ಞಾನ ಅಳವಡಿಕೆ ಆಗುತ್ತಿದೆ. ಭಾರತದ ಟೆಕ್ ಕಂಪನಿಗಳು ಎಐ ಆವಿಷ್ಕಾರ ವಿರುದ್ಧ ಸ್ಪರ್ಧಿಸದೇ ಎಐಗೆ ಸಂಯೋಜಕರಾಗಲು ಮುಂದಾಗುತ್ತಿವೆ.

ಉದ್ಯೋಗ ಕಡಿತ, ತಂತ್ರಜ್ಞಾನ AI ಅವಳಡಿಕೆಗಾಗಿ ಕೈಗೊಂಡ ಉಪಕ್ರಮಗಳ ಕುರಿತು ವಾರ್ಷಿಕ ವರದಿಗಳಲ್ಲಿ ಬಹಿರಂಗವಾಗಿದೆ. AI ನಿಮ್ಮ ಉದ್ಯಮ ಎಂಬ ಥೀಮ್ನೊಂದಿಗೆ ಇನ್ಫೋಸಿಸ್ ತಂತ್ರಜ್ಞಾನದ ನೇರ ಮಾರ್ಗ ಕಂಡುಕೊಂಡಿದೆ. ವಿಪ್ರೋ ಕ್ಲೈಂಟ್ಗಳು AI-ಚಾಲಿತ ಭವಿಷ್ಯದ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಕೇಂದ್ರೀಕರಿಸಲಾಗಿದೆ. ಇನ್ನೂ ಟೆಕ್ ಮಹೀಂದ್ರಾ ಕಂಪನಿಯು ಎಐ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿದೆ. ಎಲ್ಲ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಕೌಶಲ್ಯ ಹೆಚ್ಚಿಸುತ್ತಿವೆ. ಇದರೊಂದಿಗೆ ಮಾನವ ಸಹಿತ ಕೆಲಸ ಮೇಲೆ ಬಂಡವಾಳಕ್ಕಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ. ಈ ಪ್ರವೃತ್ತಿ ವಿಪ್ರೋ ಹಾಗೂ ಟೆಕ್ ಮಹಿಂದ್ರಾ ಕಂಪನಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ವರದಿ ಆಗಿದೆ.

ಸದ್ಯ ವಿಶ್ವದಲ್ಲಿ ಎಐ ತಂತ್ರಜ್ಞಾನವು ಉದ್ಯೋಗ ಮಾತ್ರವಲ್ಲದೇ ಸಾಕಷ್ಟು ವಿಷಯಗಳಲ್ಲಿ ಅನಿಶ್ಚಿತೆ ಹುಟ್ಟುಹಾಕಿದೆ. ಉದ್ಯೋಗ, ಕೃಷಿ, ವಾಣಿಜ್ಯ, ಮಾಹಿತಿ ಸೇರಿದಂತೆ ಪ್ರತಿ ವ್ಯವಹಾರದ ಪ್ರತಿಯೊಂದು ಅಂಶವು ಎಐ ಅವಲಂಬಿಸುವಷ್ಟರ ಮಟ್ಟಿಗೆ ತಂತ್ರಜ್ಞಾನ ಅಳವಡಿಕೆ ಆಗುತ್ತಿದೆ. ಎಲ್ಲ ರಂಗದಲ್ಲೂ ಎಐ ಕಾಲಿಟ್ಟಿದೆ.
ಎಐ ಅಳವಡಿಕೆ ಬಳಿಕ ಸಂಸ್ಥೆಯ ಎಲ್ಲ ಮಾಹಿತಿ, ದತ್ತಾಂಶವನ್ನು ಸಮಗ್ರ ರೀತಿಯಲ್ಲಿ ಬಳಕೆ ಅನುಕೂಲವಾಗುತ್ತದೆ. ನಾವೀನ್ಯತೆ ಉತ್ತೇಜಿಸಬಹುದಾಗಿದೆ. ಎಐ ಇದು ಜಗತ್ತಿನ ಎಲ್ಲ ಜ್ಞಾನ ಹೊಂದಿದೆ. ಮಾಹಿತಿ, ಸತ್ಯ, ಕಾದಂಬರಿ, ವಿಷಯಗಳನ್ನು ಹೊಂದಿದೆ. ಎಐನಿಂದ ವಿಶೇಷ ಟೆಕ್ ವ್ಯವಹಾರಗಳಿಗೆ ಅಸಾಧಾರಣ ಮೌಲ್ಯ ಸೃಷ್ಟಿಸಬಹುದು ಎಂದು ಉದ್ಯಮಿಗಳು ಹೇಳಿದ್ದಾರೆ.
