Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನಕ್ಕಾದ ದಾಳಿಯ ಬಗ್ಗೆ ನ್ಯೂಸ್ ವಿವರಿಸುತ್ತ ಲೈವ್ ನಲ್ಲೇ ಅತ್ತೇಬಿಟ್ಟಳು ಈಕೆ!

Spread the love

ಪಹಲ್ಗಾಮ್​​ ಉಗ್ರರರನ್ನು ಮಟ್ಟಹಾಕಲು ಭಾರತೀಯ ಸೇನೆ ಮಂಗಳವಾರ ಮಧ್ಯರಾತ್ರಿ ಪ್ರತಿಕಾರದ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಒಂಬತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ‘ಆಪರೇಷನ್‌ ಸಿಂಧೂರ’ ಹೆಸರಿನಲ್ಲಿ ಜಂಟಿ ದಾಳಿ ನಡೆಸಿವೆ.

ಈ ದಾಳಿಯಲ್ಲಿ ಪಾಕ್​​ನ 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.

ಆದರೆ ಪಾಕಿಸ್ತಾನ ನ್ಯೂಸ್ ಆಯಂಕರ್ ಒಬ್ಬರು ಆಪರೇಷನ್ ಸಿಂಧೂರ್​​ ನೋಡಿ ಲೈವ್​ನಲ್ಲೇ ಕಣ್ಣೀರಿಟ್ಟಿದ್ದಾಳೆ. ಪಹಲ್ಗಾಮ್​ನಲ್ಲಿ 26 ಭಾರತೀಯ ಪ್ರವಾಸಿಗರನ್ನು ಪಾಕ್​ ಉಗ್ರರು ಹತ್ಯೆಮಾಡಿದಾಗ ಮೌನವಾಗಿದ್ದ ಪಾಕ್ ನ್ಯೂಸ್ ಆಯಂಕರ್​​​ಗಳು ಇಂದು ಕಣ್ಣೀರು ಇಡುವಂತ ಪರಿಸ್ಥಿತಿ ಎದುರಾಗಿದೆ. ಆಗ ಪಾಕ್ ನ್ಯೂಸ್ ನಿರೂಪಕರು ಭಾರತ ಪಾಕಿಸ್ತಾನದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎನ್ನುತ್ತಿದ್ದರು. ಆದರೆ ಇದೀಗ ಸ್ಟುಡಿಯೋದಲ್ಲಿ ಕುಳಿತುಕೊಂಡಿದ್ದ ನ್ಯೂಸ್​ ಆಯಂಕರ್ ಆಪರೇಷನ್‌ ಸಿಂಧೂರದಿಂದಾಗಿ ​ ಕಣ್ಣೀರು ಹಾಕಿದ್ದಾರೆ.

26 ಭಾರತೀಯ ಪ್ರವಾಸಿಗರ ಪ್ರಾಣವನ್ನು ಬಲಿತೆಗೆದುಕೊಂಡ ಉಗ್ರರ ಮಟ್ಟಹಾಕಲು ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *