ಗೋಧಿ ಲಾರಿ ಪಲ್ಟಿ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಅಪಘಾತ; ಗೋಧಿ ತುಂಬಿಕೊಳ್ಳಲು ಮುಗಿಬಿದ್ದ ಸ್ಥಳೀಯರು!

ತುಮಕೂರು: ಗೋಧಿ (Wheat) ತುಂಬಿದ್ದ ಲಾರಿ (Lorry) ಪಲ್ಟಿಯಾದ ಪರಿಣಾಮ ಗೋಧಿ ತುಂಬಿಕೊಳ್ಳಲು ಜನ ಮುಗಿಬಿದ್ದ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Sira) ತಾಲೂಕಿನ ಹುಯಿಲುದೊರೆ ಗ್ರಾಮದ ಬಳಿ ನಡೆದಿದೆ.

ವೇಗವಾಗಿ ಬಂದ ಲಾರಿ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಪರಿಣಾಮ ರಸ್ತೆ ಮೇಲೆ ಗೋಧಿ ಚೀಲಗಳು ಬಿದ್ದಿವೆ. ರಸ್ತೆ ತುಂಬೆಲ್ಲಾ ಗೋಧಿ ಬಿದ್ದ ಹಿನ್ನೆಲೆ ಗ್ರಾಮಸ್ಥರು ಗೋಧಿ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ಶಿರಾದಿಂದ ಹುಳಿಯಾರು ಕಡೆಗೆ ಬರುತ್ತಿದ್ದ ಗೋಧಿ ತುಂಬಿದ್ದ ಲಾರಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.