Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಟ್ಸಪ್ ನಲ್ಲಿ ಬರಲಿದೆ ‘ಥ್ರೆಡ್ಡೆಡ್ ಮೆಸೇಜ್‌ ರಿಪ್ಲೈ ‘ಹೊಸ ಫೀಚರ್

Spread the love

ಬೆಂಗಳೂರು :ವಾಟ್ಸಾಪ್‌ನ ಇತ್ತೀಚಿನ iOS ಬೀಟಾ ಆವೃತ್ತಿ 25.19.10.80, ಟೀಮ್‌ “ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈಸ್‌” ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗಿದೆ. ಹೆಸರೇ ಸೂಚಿಸುವಂತೆ, ಇದು ಮೂಲ ಸಂದೇಶದ ಅಡಿಯಲ್ಲಿ ರಿಪ್ಲೈಗಳನ್ನು ಗ್ರೂಪ್‌ ಮಾಡುತ್ತದೆ, ಆ ಮೂಲಕ ಬ್ಯುಸಿ ಚಾಟ್‌ನಲ್ಲಿ ಸಂದೇಶಗಳನ್ನು ಓದುವುದನ್ನು ಇನ್ನಷ್ಟು ಸುಲಭವಾಗಿಸಲಿದೆ.

ಇದಿನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಯೂಸರ್‌ಗಳು ಸಂಭಾಷಣೆ ಮಾಡುವ ಕೆಲಸದಲ್ಲಿ ದೊಡ್ಡ ಬದಲಾವಣೆಗೆ ಒಳಗಾಗಲಿದ್ದಾರೆ ಎನ್ನುವುದನ್ನು ಸೂಚಿಸಿದೆ.

ಈ ವೈಶಿಷ್ಟ್ಯದೊಂದಿಗೆ, WhatsApp ಚಾಟ್ ಅನುಭವವನ್ನು ಸಂಪೂರ್ಣವಾಗಿ ಅಪ್‌ಡೇಟ್‌ ಮಾಡಲು ಮತ್ತು ಅದನ್ನು ಹೆಚ್ಚು ರಚನಾತ್ಮಕವಾಗಿಸಲು ನೋಡುತ್ತಿದೆ.

ವಾಟ್ಸಾಪ್‌ ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈ: ಏನಿದರ ವಿಶೇಷತೆ

ಮುಂಬರುವ WhatsApp ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈ ಗ್ರೂಪ್‌ ಚಾಟ್‌ಗಳುಗೆ ಸ್ಪಷ್ಟ ರಚನೆಯನ್ನು ನೀಡುವ ಮತ್ತು ಯೂಸರ್‌ ಸಂಭಾಷಣೆಯ ಸಂದರ್ಭವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ. WABetaInfo ವರದಿ ಮಾಡಿರುವ ಪ್ರಕಾರ, ಈ ವೈಶಿಷ್ಟ್ಯವು ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಹೊಸ ವೈಶಿಷ್ಟ್ಯ ಬಂದ ನಂತರ, ಚಾಟ್‌ಗಳಲ್ಲಿನ ಸಂದೇಶ ಬಬಲ್‌ಗಳು ಅದಕ್ಕೆ ಎಷ್ಟು ಪ್ರತ್ಯುತ್ತರಗಳನ್ನು ಲಗತ್ತಿಸಲಾಗಿದೆ ಎಂಬುದನ್ನು ಸೂಚಿಸುವ ಸಣ್ಣ ಬ್ಯಾಡ್ಜ್ ಅನ್ನು ತೋರಿಸುತ್ತವೆ.

ಬ್ಯಾಡ್ಜ್ ಅನ್ನು ಟ್ಯಾಪ್ ಮಾಡುವುದರಿಂದ ಆ ಸಂದೇಶಕ್ಕೆ ಎಲ್ಲಾ ರಿಪ್ಲೈಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶಿಸುವ ಹೊಸ ಪರದೆಯು ತೆರೆಯುತ್ತದೆ. ಬಳಕೆದಾರರು ಥ್ರೆಡ್‌ನೊಳಗಿಂದಲೇ ಓದಲು ಮತ್ತು ಉತ್ತರಿಸಲು ಸಾಧ್ಯವಾಗುತ್ತದೆ.

ರಿಫ್ಲೈ ಥ್ರೆಡ್‌ಗಳು ಸಂಬಂಧಿತ ಚರ್ಚೆಗಳನ್ನು ಒಟ್ಟುಗೂಡಿಸುವ ಮೂಲಕ ಗ್ರೂಪ್‌ ಚಾಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ಯಾರು ಯಾವುದಕ್ಕೆ ಪ್ರತ್ಯುತ್ತರಿಸಿದ್ದಾರೆ ಎಂಬುದನ್ನು ಅನುಸರಿಸಲು ಸುಲಭವಾಗುತ್ತದೆ ಎಂದು ವರದಿ ಹೇಳುತ್ತದೆ.

ವಾಟ್ಸಾಪ್ ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈ ಏಕೆ ಮಹತ್ವದ್ದಾಗಿವೆ?

ಹೆಚ್ಚಿನ ದಟ್ಟಣೆಯ ಗ್ರೂಪ್‌ ಚಾಟ್‌ಗಳಲ್ಲಿ, ರಿಪ್ಲೈಗಳು ಹೆಚ್ಚಾಗಿ ಗದ್ದಲದಲ್ಲಿ ಕಳೆದುಹೋಗುತ್ತವೆ. ಪ್ರತ್ಯುತ್ತರ ಸಂದರ್ಭವನ್ನು ಕಾಪಾಡಿಕೊಳ್ಳುವ ಮೂಲಕ, ಥ್ರೆಡ್ಡೆಡ್‌ ಮೆಸೇಜ್‌ ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ಯೂಸರ್‌ ಮೂಲ ಸಂದೇಶಗಳನ್ನು ಮ್ಯಾನ್ಯುಯೆಲ್‌ ಆಗಿ ಹುಡುಕುವುದನ್ನು ತಡೆಯುತ್ತದೆ.

ಇದೇ ರೀತಿಯ ವೈಶಿಷ್ಟ್ಯವನ್ನು ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಯೂಸರ್‌ಗೂ ಈ ವೈಶಿಷ್ಟ್ಯವನ್ನು ತರುವ ನಿಟ್ಟಿನಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆ ಎಂದು ಸೂಚಿಸುತ್ತದೆ.

ಈ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ, ಆದ್ದರಿಂದ ಬೀಟಾ ಆವೃತ್ತಿಯನ್ನು ಹೊಂದಿರುವ ಯೂಸರ್‌ ಸಹ ಇದನ್ನು ಇನ್ನೂ ನೋಡದೇ ಇರಬಹುದು. ವ್ಯಾಪಕವಾದ ಬೀಟಾ ಬಿಡುಗಡೆಯ ಮೊದಲು WhatsApp ಇದನ್ನು ಆಂತರಿಕವಾಗಿ ಪರೀಕ್ಷಿಸಲಿದೆ ಎಂದು ವರದಿ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *