ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಮೊಬೈಲ್ (Smart phone) ಇವತ್ತು ಎಲ್ಲರ ಅನಿವಾರ್ಯತೆ ಆಗಿದೆ. ಶಾಲೆ, ಕಾಲೇಜುಗಳ ದೈನಂದಿನ ದಿನಚರಿಯಿಂದ ಹಿಡಿದು ಬಹುತೇಕ ಆಫೀಸ್ ಕಾರ್ಯಗಳು (office work in phone) ಇದರಲ್ಲೇ ನಡೆಯುತ್ತದೆ. ಹೀಗಾಗಿ ಮೊಬೈಲ್ ಕಳೆದು ಹೋದರೆ ಅದು ನಮ್ಮ ದೈನಂದಿನ ಬದುಕನ್ನು ಒಂದು ಕ್ಷಣ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ.

ಮೊಬೈಲ್ ಕಳೆದು ಹೋಯಿತಲ್ಲ ಎನ್ನುವ ಚಿಂತೆ ಒಂದೆಡೆಯಾದರೆ ಅದರಲ್ಲಿರುವ ಮಾಹಿತಿಯನ್ನು ಯಾರಾದರೂ ಕದ್ದು (mobile phone theft) ಬಿಟ್ಟರೆ ಎನ್ನುವ ಭಯ ಇನ್ನೊಂದೆಡೆ. ಆದರೆ ಇದಕ್ಕೆಲ್ಲ ಈಗ ರಕ್ಷಣೆ ಇದೆ. ಫೋನ್ ಕಳೆದು ಹೋದರೆ ಸರ್ಕಾರಿ ಅಪ್ಲಿಕೇಶನ್ ಸಹಾಯದಿಂದ ಅದನ್ನು ಮತ್ತೆ ಯಾರೂ ಮರು ಬಳಕೆ ಮಾಡದಂತೆ ತಡೆಯಬಹುದು.
ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಹಚ್ಚುವುದು ಈಗ ಬಹಳ ಸರಳ. ʼಸಂಚಾರ್ ಸಾಥಿʼ ಮತ್ತು ʼಫೈಂಡ್ ಮೈ ಡಿವೈಸ್ʼ ವೆನ್ ಪೋರ್ಟಲ್‌ನಲ್ಲಿ ಸರಳ ಹಂತಗಳನ್ನು ಚಾಲನೆಗೊಲಿಸಿ ಮೊಬೈಲ್ ಟ್ರ್ಯಾಕ್ ಮಾಡಿ ಅದನ್ನು ತ್ವರಿತವಾಗಿ ಮರಳಿ ಪಡೆಯಬಹುದು.
ಕಳವಾದ ಫೋನ್ ಪತ್ತೆ ಹಚ್ಚಲು, ನಿರ್ಬಂಧಿಸಲು ಮತ್ತು ಮರುಪಡೆಯಲು ಇದರಲ್ಲಿ ದಾರಿಗಳಿವೆ. ಟೆಲಿಕಾಂ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼಸಂಚಾರ್ ಸಾಥಿʼ ಪೋರ್ಟಲ್‌ನಲ್ಲಿ ಫೋನ್‌ಗಳ ವಿಶಿಷ್ಟ ಸಂಖ್ಯೆಯನ್ನು ಬಳಸಿಕೊಂಡು ಟ್ರ್ಯಾಕ್ ಮಾಡಬಹುದು.
ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಅಭಿವೃದ್ಧಿಪಡಿಸಿರುವ ʼಸಂಚಾರ್ ಸಾಥಿʼ ಪೋರ್ಟಲ್‌ನಲ್ಲಿ ಫೋನ್‌ಗಳ ವಿಶಿಷ್ಟ ಐಎಂಇಐ ಸಂಖ್ಯೆಗಳನ್ನು ಹಾಕಿ ಮೊಬೈಲ್ ಅನ್ನು ಟ್ರ್ಯಾಕ್ ಮಾಡಬಹುದು.
ಹೇಗೆ ಪತ್ತೆ ಹಚ್ಚುವುದು?
ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಹಚ್ಚಲು ʼಸಂಚಾರ್ ಸಾಥಿʼ ಪೋರ್ಟಲ್ ಪೊಲೀಸರು, ಸೈಬರ್ ಅಪರಾಧ ಘಟಕಗಳು ಮತ್ತು ಟೆಲಿಕಾಂ ಆಪರೇಟರ್‌ಗಳಿಗೆ ಸಹಾಯ ಮಾಡುತ್ತದೆ. ಇದು ಪ್ರಾರಂಭವಾದಾಗಿನಿಂದ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಸಾಧನಗಳನ್ನು ಸ್ಥಗಿತಗೊಳಿಸಿದೆ. ನಾಲ್ಕು ಲಕ್ಷಕ್ಕೂ ಅಧಿಕ ಫೋನ್ ಅವುಗಳ ಮಾಲೀಕರಿಗೆ ಮರಳಿ ಸಿಗುವಂತೆ ಮಾಡಿದೆ. ಫೋನ್ ಕಳೆದುಕೊಂಡ ತಕ್ಷಣ ಟೆಲಿಕಾಂ ಪೂರೈಕೆದಾರರಿಂದ ನಕಲಿ ಸಿಮ್ ಕಾರ್ಡ್ ಪಡೆಯಬೇಕು. ಬಳಿಕ ಫೋನ್ ಕಳೆದುಕೊಂಡಿರುವ ಬಗ್ಗೆ ಪೊಲೀಸಾರಿಗೆ ದೂರು ಸಲ್ಲಿಸಬೇಕು.
ಇದಾದ ಬಳಿಕ https://www.ceir.gov.in/ನಲ್ಲಿ ʼಸಂಚಾರ್ ಸಾಥಿʼ ವೆಬ್‌ಸೈಟ್‌ಗೆ ಭೇಟಿ ನೀಡಿ “ಬ್ಲಾಕ್/ಸ್ಟೋಲನ್ ಮೊಬೈಲ್” ಎಂದು ಆಯ್ಕೆ ಮಾಡಿ ಕಳೆದುಕೊಂಡಿರುವ ಫೋನ್‌ನ IMEI ಸಂಖ್ಯೆ, ದೂರು ವಿವರಗಳು, ಆಧಾರ್ ಲಿಂಕ್ ಮಾಡಲಾದ ವಿಳಾಸ ಮತ್ತು ಪರ್ಯಾಯ ಸಂಪರ್ಕ ಸಂಖ್ಯೆಯನ್ನು ದಾಖಲಿಸಿ ಮಾಹಿತಿಯನ್ನು ಸಲ್ಲಿಸಬೇಕು.
ಇಲ್ಲಿ ನೋಂದಣಿಯಾದ ಬಳಿಕ ಸಿಸ್ಟಮ್ ತಕ್ಷಣವೇ ಸಂಬಂಧಿತ ಅಧಿಕಾರಿಗಳು ಮತ್ತು ನಿರ್ವಾಹಕರಿಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ. ಯಾರಾದರೂ ನೀವು ಕಳೆದುಕೊಂಡಿರುವ ಫೋನ್ ಅನ್ನು ಬಳಸಲು ಪ್ರಯತ್ನಿಸಿದರೆ ಅದು ಮೂಲ ಅಥವಾ ಹೊಸ ಸಿಮ್‌ನೊಂದಿಗೆ ಸಾಧನವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಫೋನ್ ಬೇರೆಯವರಿಗೆ ಸೇರುವ ಮುನ್ನವೇ ಇದನ್ನು ಪತ್ತೆ ಹಚ್ಚಬಹುದು.
ಇನ್ನು ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಲು ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮತ್ತು ಕೆಲವೊಂದು ಪ್ಲಾಟ್‌ಫಾರ್ಮ್‌ಗಳು ಸಹಾಯ ಮಾಡುತ್ತವೆ. ಗೂಗಲ್‌ನ Find My Device ಅಪ್ಲಿಕೇಶನ್ ಈ ನಿಟ್ಟಿನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದರಲ್ಲಿ ಬಳಕೆದಾರರು ನೋಂದಾಯಿಸಿದ ಆಂಡ್ರಾಯ್ಡ್ ಸಾಧನಗಳನ್ನು ನಕ್ಷೆಯ ಮೂಲಕ ನೋಡಬಹುದು. ಇದು ಕಳೆದು ಹೋದ ಫೋನ್‌ಗೆ ರಿಂಗ್ ಮಾಡಲು, ದೂರದಿಂದಲೇ ಲಾಕ್ ಮಾಡಲು, ಪರದೆಯ ಮೇಲೆ ಸಂದೇಶಗಳನ್ನು ಪ್ರದರ್ಶಿಸಲು ಅಥವಾ ಮಾಹಿತಿಯನ್ನು ರಕ್ಷಿಸಲು ಡೇಟಾವನ್ನು ಡಿಲೀಟ್ ಮಾಡಲು ಸಹಾಯ ಮಾಡುತ್ತದೆ.
ಸ್ಯಾಮ್‌ಸಂಗ್‌ನ Find My Mobileನಲ್ಲಿ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್, ಲಾಕ್ ಮತ್ತು ಡೇಟಾ ಡಿಲೀಟ್ ಮಾಡಬಹುದು.
