ಹಿಂದುತ್ವ ಅಂದರೆ ಏನು.? ನಾಮ ಹಾಕಿದರೆ ಮಾತ್ರ ಹಿಂದುತ್ವವಾ.?-ಕಲ್ಲಡ್ಕ ಪ್ರಭಾಕರ ಭಟ್

ಹಿಂದುತ್ವವೆಂದು ಏನು ಬೇಕಾದರೂ ಮಾತಾನಾಡಬಹುದಾ.? ಸಂಘಟನೆಗೆ ಸೇರಿದ ಮೇಲೆ ಏನು ಮಾತನಾಡಬೇಕು ಎಂಬ ಪ್ರಜ್ಞೆ ಮೈಮೇಲೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರು ಶಾಸಕ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಯತ್ನಾಳ್ ಉಚ್ಚಾಟನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಲ್ಲಡ್ಕ ಪ್ರಭಾಕರ ಭಟ್,’ ಸಂಘಟನೆಯ ವ್ಯಾಪ್ತಿಯೊಳಗೆ ಇದ್ದಾಗ ಗಡಿ ಮೀರಿ ಹೋಗಬಾರದು. ಮಾತನಾಡಲು ಅವಕಾಶ ಇದೆ. ಪಕ್ಷದ ಸಮಿತಿ ಇದೆ. ಆ ಸಮಿತಿಯೊಳಗೆ ಎಷ್ಟು ಬೇಕಾದರೂ ಮಾತನಾಡಬಹುದು. ಹೊರಗೆ ಹೋಗಿ ಮಾತನಾಡುವುದು ಹಿಂದುತ್ವದ ಲಕ್ಷಣ ಅಲ್ಲ” ಎಂದು ಹೇಳಿದ್ದಾರೆ. ಹಿಂದುತ್ವ ಅಂದರೆ ಏನು ಎಂದು ಹೇಳುವುದು.? ನಾಮ ಹಾಕಿದರೆ ಮಾತ್ರ ಹಿಂದುತ್ವವಾ.? ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಮಾತ್ರ ಹಿಂದೂತ್ವ ಆಗುತ್ತದಾ.? ಹಿಂದುತ್ವದಲ್ಲಿ ಒಂದು ಶಿಸ್ತಿದೆ, ಅನುಶಾಸನ ಇದೆ. ಅನುಶಾಸನ ಇಲ್ಲದೆ ಇದ್ದರೆ ಶಿಸ್ತಾಗುವುದಿಲ್ಲ. ಪಕ್ಷದ ಅನುಶಾಸನದಲ್ಲೂ ಇರಬೇಕು ಎಂದರು.