ರೈಲು ನಿಲ್ದಾಣಗಳಲ್ಲಿ ಎಐ ಕ್ಯಾಮೆರಾ ತಂತ್ರಜ್ಞಾನದಿಂದ ಏನೆಲ್ಲ ಪ್ರಯೋಜನ?

ಭಾರತ ಸರ್ಕಾರ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಅತ್ಯಾಧುನಿಕ Artificial intelligence (AI) ತಂತ್ರಜ್ಞಾನ ಬಳಕೆ ಮಾಡುತ್ತಿದೆ. ರೈಲು ನಿಲ್ದಾಣಗಳಲ್ಲಿ ಅಪರಾಧ ಚಟುವಟಿಕೆ ತಡೆಯಲು, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಂಡಿದೆ.

ಅದಕ್ಕಾಗಿ ಬೆಂಗಳೂರು ಸೇರಿ ದೇಶ ಏಳು ರೈಲ್ವೆ ನಿಲ್ದಾಣಗಳಲ್ಲಿ ಎಐ ತಂತ್ರಜ್ಞಾನ ಸಂಯೋಜನೆ ಮಾಡಲಾಗುತ್ತದೆ.
ಕರ್ನಾಟಕ ರಾಜಧಾನಿ ಬೆಂಗಳೂರು ಪ್ರಮುಖ ರೈಲ್ವೆ ನಿಲ್ದಾಣ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, (CSMT), ನವದೆಹಲಿ, ಚೆನ್ನೈ, ಹೌರಾ, ಅಹಮದಾಬಾದ್ ಮತ್ತು ಪುಣೆ ಸೇರಿದಂತೆ ಭಾರತದಾದ್ಯಂತದ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅದ್ಯತೆ ಸಿಗುತ್ತದೆ. ಪ್ರಯಾಣಿಕರು ಮತ್ತು ಮಹಿಳೆಯರ ವಿರುದ್ಧದ ಅಪರಾಧ ತಡೆಗೆ ಹಾಗೂ ಅತ್ಯಾಧುನಿಕ AI-ಚಾಲಿತ ಮುಖ ಗುರುತಿಸುವಿಕೆ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತದೆ.
ಸುಪ್ರೀಂ ಕೋರ್ಟ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ತಂತ್ರಜ್ಞಾನ ವ್ಯವಸ್ಥೆಗಳನ್ನು ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ಡೇಟಾಬೇಸ್ನೊಂದಿಗೆ ಸಂಯೋಜಿಸಗುತ್ತದೆ ಎಂದು ತಿಳಿಸಿದೆ. ಸದ್ಯ ಡೇಟಾವು 2 ಮಿಲಿಯನ್ಗಿಂತಲೂ ಹೆಚ್ಚು ಪ್ರೊಫೈಲ್ ಹೊಂದಿದೆ. ಅಪರಾಧ ಪತ್ತೆಗೆ ಈ ತಂತ್ರಜ್ಞಾನ ಹೆಚ್ಚಿನ ಅನುವು ಮಾಡುತ್ತದೆ.
ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ನಂತಹ ಮಹಾನಗರಗಳಲ್ಲಿ AI ಪ್ರಾಯೋಗಿಕವಾಗಿ ನಡೆಸಲಾಗಿದೆ. ಡ್ರೋನ್ ಕಣ್ಗಾವಲು ಮತ್ತು ಸ್ಮಾರ್ಟ್ ಬೆಳಕಿನ ಕಣ್ಗಾವಲು ಇರಲಿದೆ. ಸುಧಾರಿತ AI ಏಕೀಕರಣ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿದೆ. ಮುಂಬೈನ CSMT ರೈಲ್ವೆ ಟರ್ಮಿನಲ್ ದೇಶದ ಅತ್ಯಂತ ಹೆಚ್ಚು ಜನ ಪ್ರಯಾಣಿಕರುವ ನಗರಗಳಲ್ಲಿ ಒಂದಾಗಿದೆ. ನಿತ್ಯ 3 ಮಿಲಿಯನ್ ಗೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ನವದೆಹಲಿ ರೈಲು ನಿಲ್ದಾಣ ನಿತ್ಯ ಐದು ಲಕ್ಷ ಜನರ ಸಾರಿಗೆ ಸಂಚಾರಕ್ಕೆ ಸಾಕ್ಷಿಯಾಗಿದೆ. ಇಂತಹ ಸ್ಥಳಗಳಲ್ಲಿ ಸುರಕ್ಷತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಲಾಗುತ್ತದೆ.
ಏನೆಲ್ಲ ಪ್ರಯೋಜನಗಳು
ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗುವುದು. ಲೈಂಗಿಕ ಅಪರಾಧಿಗಳ ಕುರಿತಾದ ವ್ಯಾಪಕವಾದ ರಾಷ್ಟ್ರೀಯ ಡೇಟಾಬೇಸ್ ವಿರುದ್ಧ ಲೈವ್ ಚಿತ್ರಗಳನ್ನು ಕ್ರಾಸ್-ರೆಫರೆನ್ಸ್ ಮಾಡುವ ಸಾಮರ್ಥ್ಯ ಈ ಎಐ ಕ್ಯಾಮರಾ, ತಂತ್ರಜ್ಞಾಗಳಿಗೆ ಇದೆ. ಸ್ಪಷ್ಟ ಮುಖ ಗುರುತಿಸುವಂತೆ ಸಾಫ್ಟ್ವೇರ್ ಅಪ್ಗ್ರೇಡ್ ಮಾಡಲಾಗಿದೆ. ಅಲ್ಲದೇ ಅನುಮಾನಿತ ವ್ಯಕ್ತಿಗಳನ್ನು ಗುರುತಿಸಬಹುದಾಗಿದೆ. ಕಾಣೆಯಾದ ವ್ಯಕ್ತಿಗಳ ಪತ್ತೆ ಸೇರಿದಂತೆ ಅನೇಕ ಅಪರಾಧ ಕೃತ್ಯತಡೆಯಲು ಸಹಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
