Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಶ್ಚಿಮ ದಂಡೆ: ಮಸೀದಿಗೆ ಬೆಂಕಿ ಹಚ್ಚಿದ ಇಸ್ರೇಲಿ ವಸಾಹತುಗಾರರು; ಉದ್ವಿಗ್ನ ಪರಿಸ್ಥಿತಿ

Spread the love

ರಮಲ್ಲಾ: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಸೀದಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ಇಸ್ರೇಲಿ ವಸಾಹತುಗಾರರು ದಾಂಧಲೆ ನಡೆಸಿ ಬೆಂಕಿ ಹಚ್ಚಿರುವುದಾಗಿ ಫೆಲೆಸ್ತೀನ್ ಪ್ರಾಧಿಕಾರದ ಮೂಲಗಳು ಹೇಳಿವೆ.
ನಬ್ಲೂಸ್ ಬಳಿಯ ಟೆಲ್ಸ್‌ ಪಟ್ಟಣದಲ್ಲಿರುವ ಅಬು ಬಕರ್ ಅಲ್-ಸಿದ್ದಿಕ್ ಮಸೀದಿಯ ಗೋಡೆಯ ಮೇಲೆ ಬಣ್ಣ ಎರಚಿ, ಆಕ್ಷೇಪಾರ್ಹ ಪದಗಳನ್ನು ಬರೆದ ಬಳಿಕ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಬೆಳಿಗ್ಗೆ ಪ್ರಾರ್ಥನೆಗೆ ಬಂದವರು ಮಸೀದಿಯ ಮುಖ್ಯ ದ್ವಾರದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.


ಕೃತ್ಯದಲ್ಲಿ ಮಸೀದಿಯ ಕಿಟಕಿ ಗಾಜು ಮತ್ತು ಬಾಗಿಲಿಗೆ ಹಾನಿಯಾಗಿದೆ. ಇಬ್ಬರು ವ್ಯಕ್ತಿಗಳು ಗ್ಯಾಸೊಲಿನ್ ಮತ್ತು ಸ್ಟೇ ಪೈಂಟ್‌ನ ಕ್ಯಾನಿನೊಂದಿಗೆ ಮಸೀದಿಯತ್ತ ಹೋಗುತ್ತಿರುವುದು ಮತ್ತು ಕೆಲ ಹೊತ್ತಿನ ಬಳಿಕ ಅಲ್ಲಿಂದ ಓಡಿಹೋಗುತ್ತಿರುವುದು ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.


Spread the love
Share:

administrator

Leave a Reply

Your email address will not be published. Required fields are marked *