‘ನಾವು ಬ್ರ್ಯಾಂಡ್ ಹಿಂದೆ ಹೋಗಬಾರದು, ನಾವೇ ಒಂದು ಬ್ರ್ಯಾಂಡ್’: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಖಡಕ್ ಮಾತು

ನಾವು ಯಾವಾಗಲೂ ಬ್ರ್ಯಾಂಡ್ ಹಿಂದೆ ಹೋಗಬಾರದು. ನಾವೇ ಒಂದು ಬ್ರ್ಯಾಂಡ್ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಖಡಕ್ ಆಗಿ ನುಡಿದಿದ್ದಾರೆ.

ಶಿವರಾಜ್ಕುಮಾರ್ ಇತ್ತೀಚೆಗೆ `ಗತವೈಭವ’ (Gatha Vaibhava) ಸಿನಿಮಾದ ಹಾಡು ರಿಲೀಸ್ ಇವೆಂಟ್ಗೆ ಆಗಮಿಸಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಸಿಂಪಲ್ ಸುನಿ ಹಾಗೂ ಅವರ ಕಾಂಬಿನೇಷನ್ನ ಸಿನಿಮಾ ನಿಲ್ಲಲು ಕಾರಣವೇನು ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾವು ಯಾವಾಗಲೂ ಬ್ರ್ಯಾಂಡ್ ಹಿಂದೆ ಹೋಗ್ಬಾರ್ದು, ನಾವೇ ಒಂದು ಬ್ರ್ಯಾಂಡ್ ಎಂದಿದ್ದಾರೆ.
ನನಗೆ ಬಂದಿರೋ ಭಾಗ್ಯ ಅಂದ್ರೆ ಹೊಸ ಹೊಸ ಡೈರೆಕ್ಟರ್ ಬರ್ತಾರೆ. ಹೊಸ ಹೊಸ ಕಥೆಗಳನ್ನ ಹೇಳ್ತಾರೆ. ಹೊಸಬರು ಬಂದು ಸಿನಿಮಾ ಮಾಡ್ಬೇಕು ಅಂತಾರೆ ಅದೇನು ಆಗುತ್ತೋ, ಬಿಡುತ್ತೋ ಗೊತ್ತಿಲ್ಲ. ಹೊಸಬರ ಮೇಲೆ ನಂಬಿಕೆ ಇಡ್ಬೇಕು. ನಾವು ಬ್ರ್ಯಾಂಡ್ ಹಿಂದೆ ಹೋಗೋದು ಬಿಡ್ಬೇಕು. ನಾವೇ ಒಂದು ಬ್ರ್ಯಾಂಡ್. ನಾವ್ಯಾಕೆ ಬ್ರ್ಯಾಂಡ್ ಹಿಂದೆ ಹೋಗ್ಬೇಕು? ಬ್ರ್ಯಾಂಡ್ ಅದಾಗೇ ಆಗುತ್ತೆ. ನಂಬಿಕೆ ಇಡಬೇಕು ಎಂದಿದ್ದಾರೆ ಶಿವಣ್ಣ.
ಸಿಂಪಲ್ ಸುನಿ (Simple Suni) ನಿರ್ದೇಶನದ `ಗತವೈಭವ’ ಸಿನಿಮಾದ ಸಾಂಗ್ ಲಾಂಚ್ ಇವೆಂಟ್ಗೆ ಅತಿಥಿಯಾಗಿ ಶಿವಣ್ಣ ಬಂದಿದ್ದರು. ಸಿಂಪಲ್ ಸುನಿ ಹಾಗೂ ಶಿವರಾಜ್ಕುಮಾರ್ ಕಾಂಬಿನೇಷನ್ನ ಮನಮೋಹಕ ಸಿನಿಮಾ ಸೆಟ್ಟೇರದಿರಲು ಕಾರಣವನ್ನ ಬಿಚ್ಚಿಟ್ಟಿದ್ದಾರೆ.