Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಪರಮಾಣು ಪರೀಕ್ಷೆ ಪುನರಾರಂಭಿಸಿದ್ದು ನಾವಲ್ಲ’: ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ ಪಾಕಿಸ್ತಾನದ ಹಿರಿಯ ಅಧಿಕಾರಿ

Spread the love

ಇಸ್ಲಾಮಾಬಾದ್‌: ರಷ್ಯಾ, ಚೀನಾ ಜೊತೆಗೆ ಪಾಕಿಸ್ತಾನ ಕೂಡ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸುತ್ತಿದೆ ಎಂಬ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿಕೆಗೆ ಪಾಕಿಸ್ತಾನದ ಹಿರಿಯ ಅಧಿಕಾರಿ (Pakistani official) ಪ್ರತಿಕ್ರಿಯೆ ನೀಡಿದ್ದಾರೆ. ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸಿದ ಮೊದಲಿಗರು ನಾವಲ್ಲ ಎಂದು ಹೇಳಿದ್ದಾರೆ.

ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಪಾಕ್‌ ಅಧಿಕಾರಿಯೊಬ್ಬರು, ಪರಮಾಣು ಪರೀಕ್ಷೆಗಳನ್ನ (Nuclear Testing) ಮೊದಲು ನಡೆಸಿದ್ದು ಪಾಕಿಸ್ತಾನವಲ್ಲ, ಪುನರಾರಂಭಿಸಿದ್ದೂ ನಾವಲ್ಲ ಎಂದು ಕುಟುಕಿದ್ದಾರೆ. ಚೀನಾ ನ್ಯೂಕ್ಲಿಯರ್‌ ಟೆಸ್ಟ್‌ ಆರೋಪವನ್ನ ನಿರಾಕರಿಸಿತು

ಟ್ರಂಪ್‌ ಹೇಳಿದ್ದೇನು?
ಪಾಕಿಸ್ತಾನ (Pakistan), ಚೀನಾ, ರಷ್ಯಾ, ಉತ್ತರ ಕೊರಿಯಾ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ಹೀಗಿರುವಾಗ ಅಮೆರಿಕ ಮಾತ್ರ ಸಂಯಮ ತೋರಿಸುವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ನಾವೂ ಪರಮಾಣು ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು

ವಿಶ್ವದಾದ್ಯಂತ ಅನೇಕ ದೇಶಗಳು ಪರಮಾಣು ಬಾಂಬ್‌ಗಳನ್ನ ಪರೀಕ್ಷಿಸುತ್ತಿವೆ. ರಷ್ಯಾ, ಚೀನಾ, ಉತ್ತರ ಕೊರಿಯಾ, ಪಾಕಿಸ್ತಾನ ಕೂಡ ಈ ಕೆಲಸದಲ್ಲಿ ನಿರತವಾಗಿವೆ. ಆದ್ರೆ ಯಾರೂ ಅದರ ಬಗ್ಗೆ ಮಾತನಾಡ್ತಿಲ್ಲ. ಆದ್ರೆ ನಮ್ಮದು ಮುಕ್ತ ಸಮಾಜ, ಎಲ್ಲವನ್ನೂ ಮಾತನಾಡ್ತೀವಿ. ಅವರೆಲ್ಲರೂ ನ್ಯೂಕ್ಲಿಯರ್‌ ಪರೀಕ್ಷೆ ನಡೆಸುತ್ತಿದ್ದಾರೆ. ಆದ್ರೆ ಇತರ ಎಲ್ಲಾ ದೇಶಗಳಿಗಿಂತ ಅಮೆರಿಕ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿದೆ. ಇಡೀ ಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳನ್ನ ನಾವು ಹೊಂದಿದ್ದೇವೆ. ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್‌ ಇಬ್ಬರೊಂದಿಗೂ ಈ ವಿಷಯ ಚರ್ಚಿಸಿದ್ದೇನೆ. ಆದಾಗ್ಯೂ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಪರಿಸ್ಥಿತಿ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದಿದ್ದಾರೆ ಟ್ರಂಪ್‌ ಎಚ್ಚರಿಸಿದ್ದರು.

1990ರ ದಶಕದಿಂದಲೂ ಪರಮಾಣು ಪರೀಕ್ಷೆ ನಡೆಸಿದ ರಾಷ್ಟ್ರವಾಗಿ ಉತ್ತರ ಕೊರಿಯಾ ಉಳಿದಿದೆ. ಚೀನಾ 1996ರಲ್ಲಿ, ಪಾಕಿಸ್ತಾನ 1998ರಲ್ಲಿ ಕೊನೆಯಬಾರಿಗೆ ಪರಮಾಣು ಪರೀಕ್ಷೆ ನಡೆಸಿದ್ದವು ಎನ್ನುತ್ತಿವೆ ವರದಿಗಳು.


Spread the love
Share:

administrator

Leave a Reply

Your email address will not be published. Required fields are marked *