ಪಾಕ್ ಜನರಲ್ಲಿ ಭಯದ ಸೆಳೆತ: ನಕ್ಷತ್ರವನ್ನೇ ಕ್ಷಿಪಣಿಯಾಗಿ ಭಾವಿಸಿದ ಪಾಕ್ ಜನ

ಜಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿ ತಿರುಗೇಟು ನೀಡಿದೆ. ಪಾಕಿಸ್ತಾನ ದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು ಈ ದಾಳಿಯಿಂದ ಪಾಕಿಸ್ತಾನದ ಜನರು ಬೆಚ್ಚಿ ಬಿದಿದ್ದಾರೆ. ಈಗಾಗಲೇ ಪಾಕಿಸ್ತಾನದಲ್ಲಿ ಭಯದ ವಾತಾವರಣ ಹೇಗೆ ನಿರ್ಮಾಣವಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಭಾರತದ ಕ್ಷಿಪಣಿ ದಾಳಿಯಿಂದ ನಕ್ಷತ್ರ ಕೂಡ ಕ್ಷಿಪಣಿಯಂತೆ ಕಾಣುತ್ತಿದ್ದು ಪಾಕ್ ಜನರು ಭಯಭೀತರಾಗಿದ್ದಾರೆ. ನಕ್ಷತ್ರವನ್ನು ಕಂಡು ಹೆದರುವ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಭಾರತವು ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕ್ ಜನರು ಭಯಭೀತರಾಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರೂ ನಾವು ಮನೆಯ ಛಾವಣಿ ಮೇಲೆ ನಿಂತಿದ್ದೇವೆ. ಆಕಾಶದಲ್ಲಿ ಏನೋ ಹೊಳೆಯುತ್ತಿದೆ. ಅದು ನಮ್ಮ ಕಡೆಗೆ ಬರುತ್ತಿದೆ ಎನ್ನುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಪಾಕ್ ಜನರು ನಕ್ಷತ್ರ ಕಂಡರೂ ಕೂಡ ಅದು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ.
ಈ ವಿಡಿಯೋವೊಂದು ಈಗಾಗಲೇ ಒಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ‘ಪಾಕ್ ಜನರು ಭಯದಲ್ಲೇ ಬದುಕುವಂತಾಗಿದೆ. ನಕ್ಷತ್ರ ನೋಡಿ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ನೋಡಿ’ ಎಂದಿದ್ದಾರೆ. ಇನ್ನೊಬ್ಬರು, ‘ಭಾರತೀಯರ ತಂಟೆಗೆ ಬಂದರೆ ಹೀಗೆ ಆಗುವುದು ಭಾರತೀಯರು ಸದಾ ಸತ್ಯದ ಪರವೇ ಇರುತ್ತಾರೆ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಜನರು ಎಷ್ಟು ಹುಚ್ಚರು ನೋಡಿ, ಇವರಿಗೆ ನಕ್ಷತ್ರ ಕೂಡ ಕ್ಷಿಪಣಿಯಂತೆ ತೋರುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.