Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸನಾ ಸಾ*ವು ಕ್ಷಯರೋಗಕ್ಕೋ ಅಥವಾ ಕೊಲೆಯೋ? ಉರಿಯುವ ಚಿತೆ ನಂದಿಸಿ ಮಗಳ ಶವ ಹೊರತೆಗೆದ ಪೋಷಕರು!

Spread the love

ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್‌ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್‌ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಜಿತ್ ಮತ್ತು ಸನಾ

ಅಜಿತ್ ಮತ್ತು ಸನಾ ಇಬ್ಬರು ಪ್ರೀತಿಸುತ್ತಿದ್ದರು. ಹುಡುಗ ಅನ್ಯಕೋಮಿನವನಾಗಿದ್ದರಿಂದ ಸನಾ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ವಿರೋಧದ ನಡುವೆಯೂ ಅಜಿತ್ ಜೊತೆ 21 ವರ್ಷದ ಸನಾ ಮದುವೆಯಾಗಿದ್ದಳು. ಮದುವೆ ಬಳಿಕ ಮಗಳಿಂದ ಪೋಷಕರು ಅಂತರ ಕಾಯ್ದುಕೊಂಡಿದ್ದರು. ಇದೀಗ ಸನಾ ಸಾವನ್ನಪ್ಪಿದ್ದು, ಪೋಷಕರು ಇದನ್ನು ಕೊ*ಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿರೋಧದ ನಡುವೆ ಮದುವೆ

ಅಜಿತ್ ಮತ್ತು ಸನಾ ಇಬ್ಬರು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಜೋಡಿ ನಾಲ್ಕು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದರು. ಅಜಿತ್ ಹಣಕಾಸಿನ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದನು. ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸನಾ ಸಾವನ್ನಪ್ಪಿದ್ದಾಳೆ.

ಚಿತೆಯಲ್ಲಿ ಸುಡುತ್ತಿತ್ತು ಸನಾ ಶವ

ಮಗಳ ಸಾವಿನ ಸುದ್ದಿ ಪೋಷಕರಿಗೆ ತಿಳಿದಿದೆ. ಬುಧವಾರ ಸಂಜೆ ಮಗಳ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿರುವ ವಿಷಯ ತಿಳಿದ ಸನಾ ಪೋಷಕರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಹೊರಗೆ ತೆಗೆದಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಅಜಿತ್ ಪೊಲೀಸರ ವಶಕ್ಕೆ

ಸನಾ ಕ್ಷಯರೋಗದಿಂದ ಬಳಲುತ್ತಿದ್ದಳು. ಬುಧವಾರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವುಂಟಾಗಿ ಪತ್ನಿ ಮೃತಳಾಗಿದ್ದಾಳೆ ಎಂದು ಅಜಿತ್ ಹೇಳಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಅಜಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶದ ಕಿರಾವಲಿ ಪ್ರದೇಶದ ಬಿಜೌ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸನಾ ಪೋಷಕರು ಹೇಳೋದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಸನಾ ತಂದೆ ನಿಜಾಮ್, ಸಾಲದ ಹಣ ವಸೂಲಿಗಾಗಿ ಅಜಿತ್ ನಮ್ಮ ಮನೆಗೆ ಬರುತ್ತಿದ್ದನು. ಈ ವೇಳೆ ಮಗಳನ್ನು ಪರಿಚಯಿಸಿಕೊಂಡಿದ್ದನು. ನಂತರ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದನು. ಇದೀಗ ಮಗಳು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳಿವೆ. ನಾವು ಬಂದಾಗ ಚಿತೆ ಉರಿಯುತ್ತಿತ್ತು. ಪೊಲೀಸರು ಕೂಡಲೇ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *