ಸೈಫ್ ಅಲಿ ಖಾನ್ ಮೇಲೆ ದಾಳಿಯ ನಂತರ ಕರೀನಾ ಕಪೂರ್ ಮೇಲು ದಾಳಿ ನಡೆಯಿತಾ?

ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ವ್ಯಕ್ತಿಯೋರ್ವ ಹಲ್ಲೆ ಮಾಡಿದ ಸುದ್ದಿ ಇನ್ನೂ ಹಸಿಯಾಗೇ ಇದೆ. ಹೀಗಿರುವಾಗಲೇ ಒಂದು ಶಾಕಿಂಗ್ ವಿಚಾರ ಹೊರ ಬಿದ್ದಿದೆ. ಸೈಫ್ ಮಾತ್ರವಲ್ಲ ಕರೀನಾ ಕಪೂರ್ (Kareena Kapoor) ಮೇಲೂ ದಾಳಿ ಆಗಿತ್ತು ಎಂಬ ವಿಚಾರ ಈಗ ರಿವೀಲ್ ಆಗಿದೆ. ಈ ವಿಚಾರವನ್ನು ಕರೀನಾ ಕುಟುಂಬದ ಆಪ್ತ ರೋನಿತ್ ರಾಯ್ ಹೇಳಿದ್ದಾರೆ. ಈ ದಂಪತಿಗೆ ಕಷ್ಟಕಾಲ ಎಂದು ಅನೇಕರು ಹೇಳಿದ್ದಾರೆ.

ಈ ವರ್ಷ ಜನವರಿ 16ರಂದು ಸೈಫ್ ಅಲಿ ಖಾನ್ ಅವರು ಮುಂಬೈ ನಿವಾಸದಲ್ಲಿ ಮಲಗಿದ್ದರು. ಈ ವೇಳೆ ಬಂದ ಅನಾಮಧೇಯ ವ್ಯಕ್ತಿ ಸೈಫ್ ಮೇಲೆ ಹಲ್ಲೆ ಮಾಡಿದ. ಅಲ್ಲದೆ, ಚಾಕುವಿನಿಂದ ಇರಿದ. ಇದರಿಂದ ಸೈಫ್ ಸಾಕಷ್ಟು ರಕ್ತಸ್ರಾವ ಎದುರಿಸಿದರು. ಸೈಫ್ ಅಲಿ ಖಾನ್ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಮರಳಿದರು. ಈ ರೀತಿ ಮರಳುವಾಗ ಕರೀನಾ ಮೇಲೆ ದಾಳಿಯ ಪ್ರಯತ್ನ ನಡೆದಿತ್ತು.
‘ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಮನೆಗೆ ಬರುವವರಿದ್ದರು. ಈ ವೇಳೆ ಸಾಕಷ್ಟು ಜನರು ಸೇರಿದ್ದರು. ಮಾಧ್ಯಮದವರು ಕೂಡ ಇದ್ದರು. ಕರೀನಾ ಆಸ್ಪತ್ರೆಯಿಂದ ಮತ್ತೊಂದು ಕಾರಲ್ಲಿ ಮೊದಲು ತೆರಳಿದ್ದರು. ಅವರ ಕಾರು ಅಟ್ಯಾಕ್ ಆಯಿತು. ಅವರಿಗೆ ಭಯ ಆಯಿತು’ ಎಂದಿದ್ದಾರೆ ರೋನಿತ್.
‘ಹೊರಗೆ ಜನರು ಹೆಚ್ಚಿದ್ದರಿಂದ ಕರೀನಾ ಕಾರು ಅಲ್ಲಾಡಿತು. ಹೀಗಾಗಿ, ಸೈಫ್ನ ಮನೆಗೆ ಕರೆ ತರುವಂತೆ ಅವರು ನನಗೆ ಹೇಳಿದರು. ಮನೆಗೆ ತಲುಪುವ ವೇಳೆಗೆ ಎಲ್ಲ ಕಡೆಗಳಲ್ಲಿ ಪೊಲೀಸರು ಇದ್ದರು. ಪೊಲೀಸರಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಈಗ ಎಲ್ಲವೂ ಚೆನ್ನಾಗಿಯೇ ಇದೆ’ ಎಂದಿದ್ದಾರೆ ರೋನಿತ್.
ಸೈಫ್ ಅಲಿ ಖಾನ್ ಅವರು ಈ ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಈಗ ಅವರ ಮನೆಯ ಭದ್ರತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಯಾರೊಬ್ಬರೂ ಅವರ ಮನೆಯನ್ನು ಒಪ್ಪಿಗೆ ಇಲ್ಲದೆ ಪ್ರವೇಶಿಸುವಂತೆ ಇಲ್ಲ. ಅಲ್ಲದೆ, ಫ್ಲ್ಯಾಟ್ನ ಎದುರು ಸಾಕಷ್ಟು ಭದ್ರತೆಯನ್ನು ಕೂಡ ಒದಗಿಸಲಾಗಿದೆ. ಇತ್ತೀಚೆಗೆ ಕರೀನಾ ಕಪೂರ್ ಅವರು ವಿದೇಶಕ್ಕೆ ಟ್ರಿಪ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.
