Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ಲಡ್ ಬ್ಯಾಂಕ್‌ಗಳಲ್ಲೂ ಅಪಾಯದ ಎಚ್ಚರಿಕೆ – ಎಚ್‌ಐವಿ, ಸಿಫಿಲಿಸ್ ಸೇರಿ ಸೋಂಕಿತ ರಕ್ತ ಪತ್ತೆ

Spread the love

ಬೆಂಗಳೂರು: ಆಹಾರ ಮತ್ತು ಆರೋಗ್ಯ ಇಲಾಖೆ ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲು ಮುಂದಾಗಿದೆ. ಅಪಾಯಕಾರಿಯಾದ ಕೃತಕ ಬಣ್ಣ ನಿಷೇಧ, ರಾಸಾಯನಿಕಗಳ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಮಧ್ಯೆ, ಆರೋಗ್ಯ ಇಲಾಖೆ ಮತ್ತೊಂದ್ದು ಪ್ರಯೋಗಕ್ಕೂ ಮುಂದಾಗಿದೆ. ಔಷಧ ನಿಯಂತ್ರಣ ಮಂಡಳಿಗೆ ರಕ್ತ ನಿಧಿ ಘಟಕಗಳ ಬಗ್ಗೆ ಹೆಚ್ಚು ಹಣ ಸೂಲಿಗೆ ಬಗ್ಗೆ ಸಾಲು ಸಾಲು ದೂರುಗಳು ಬಂದ ಕಾರಣ ಬ್ಲಡ್ ಘಟಕಗಳಿಗೆ ಭೇಟಿ ನೀಡಿ ಸ್ಯಾಂಪಲ್ಸ್ ಸಂಗ್ರಹಿಸಲು ಮುಂದಾಗಿದೆ. ಮತ್ತೊಂದೆಡೆ, ರಕ್ತನಿಧಿ ಘಟಕಗಳಿಗೆ ಅಪಾಯಕಾರಿ ಎಚ್​​ಐವಿ ಸೋಂಕಿತ ರಕ್ತ ಬರುತ್ತಿವೆ ಎಂಬ ಆರೋಪಗಳು ಆತಂಕಕ್ಕೆ ಕಾರಣವಾಗಿವೆ.

ರಕ್ತ ನಿಧಿ ಘಟಕಗಳಲ್ಲಿ ಸ್ವಚ್ಛತೆ ಇರುವುದಿಲ್ಲ, ರಕ್ತ ಸಂಗ್ರಹ ಘಟಕದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ, ಕಳ್ಳಾಟ ನಡೆಯುತ್ತಿವೆ ಎಂದು ಇತ್ತೀಚೆಗೆ ದೂರುಗಳು ಬಂದಿದ್ದವು. ಹೀಗಾಗಿ ಆರೋಗ್ಯ ಇಲಾಖೆ ರಕ್ತ ಸಂಗ್ರಹ ಘಟಕಗಳ ತಪಾಸಣೆ ಮಾಡುತ್ತಿದೆ. ಜನರಿಂದ ಕ್ಯಾಂಪ್​ಗಳ ಮೂಲಕ ಸಂಗ್ರಹವಾದ ರಕ್ತ ಎಲ್ಲಿಗೆ ಹೋಗುತ್ತದೆ? ರಕ್ತ ನಿಧಿ ಘಟಕಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ? ಸ್ವಚ್ಛತೆ ಹೇಗಿದೆ ಎಂದು ಪರಿಶೀಲಿಸುವುದರ ಜತೆಗೆ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಗೆ ಒಳಪಡಿಸಲು ಮುಂದಾಗಿದೆ.

ಬ್ಲಡ್ ಬ್ಯಾಂಕ್​ಗಳಲ್ಲಿನ ರಕ್ತ ಪರಿಶೀಲಿಸಿದಾಗ ಕಂಡುಬಂತು ಆಘಾತಕಾರಿ ಅಂಶ

ಇತ್ತೀಚೆಗೆ ರಾಜ್ಯದಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಬ್ಲಡ್ ಬ್ಯಾಂಕ್​​ಗಳಿಗೆ 2024–25ರಲ್ಲಿ ರಾಜ್ಯದ 230 ಕೇಂದ್ರಗಳಿಂದ ಜನರು ರಕ್ತದಾನ ಮಾಡಿದ್ದು, ಲಕ್ಷಂತಾರ ಯುನಿಟ್ ರಕ್ತ ಸಂಗ್ರಹವಾಗಿದೆ . ಈ ಪೈಕಿ 44,776 ಯುನಿಟ್ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ ಕೆಲವು ಮಾದರಿಗಳಲ್ಲಿ ಎಚ್ಐವಿ, ಹೆಪಟೈಟಿಸ್-B, ಹೆಪಟೈಟಿಸ್-C, ಸಿಫಿಲಿಸ್, ಮಲೇರಿಯಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ, ಸಂಗ್ರಹಿತವಾದ 44,776 ಯುನಿಟ್ ರಕ್ತ ಈ ವರ್ಷ ವ್ಯರ್ಥವಾಗಿದೆ. ಈ ವರ್ಷದ ಒಟ್ಟಾರೆ ರಕ್ತದಾನದ ಪೈಕಿ ಮೊದಲ 6 ತಿಂಗಳಲ್ಲಿ ದಾನವಾಗಿ ಬಂದ ಶೇಕಡಾ 12.5 ರಕ್ತದಲ್ಲೇ ಸೋಂಕು ಹೆಚ್ಚಾಗಿ ಪತ್ತೆಯಾಗಿದೆ.

ಸೋಂಕಿತ ರಕ್ತ ಬ್ಲಡ್ ಬ್ಯಾಂಕ್ ಸೇರಲು ಕಾರಣವೇನು?

ರಕ್ತನಿಧಿ ಘಟಕಗಳಲ್ಲಿ ಎಚ್ಐವಿ ಸೋಂಕಿತ ರಕ್ತ ಸೇರ್ಪಡೆಗೆ ಶಿಬಿರಗಳು ಕಾರಣವಾಗುತ್ತಿವೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ, ಮಾರುಕಟ್ಟೆ ಸೇರಿದಂತೆ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ದಾನಿಗಳಿಂದ ರಕ್ತ ಪಡೆಯಲಾಗುತ್ತದೆ. ನಂತರ ಇದನ್ನ ರಕ್ತನಿದಿ ಕೇಂದ್ರಗಳಲ್ಲಿ ತಪಾಷಣೆ ಮಾಡಿದಾಗ ಎಚ್​ಐವಿ ಸೇರಿದಂತೆ ಇತರದ ಸೋಂಕುಗಳು ಇರುವುದು ಕಂಡು ಬರುತ್ತಿದೆ. ಬಳಿಕ ಇತಂಹ ರಕ್ತ ಸಂಗ್ರಹ ಮಾಡದೆ ನಿಷ್ಕ್ರಿಯ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಹೆಚ್ಚು ಎಚ್ಐವಿ, ಹೆಪಟೈಟಿಸ್-B, ಹೆಪಟೈಟಿಸ್-C, ಸಿಫಿಲಿಸ್, ಮಲೇರಿಯಾ ಪಾಸಿಟಿವ್ ಇರುವವರ ರಕ್ತ, ರಕ್ತನಿಧಿಸಂಗ್ರಹ ಘಟಕಕ್ಕೆ ಬಂದಿದೆ.

ಯಾರು ರಕ್ತದಾನ ಮಾಡಬಹುದು?

  • 18 ರಿಂದ 65 ವರ್ಷ ವಯಸ್ಸಿನ, ಕನಿಷ್ಠ 50 ಕೆಜಿ ತೂಕವಿರುವ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು.
  • ಯಾವುದೇ ತೀವ್ರ ರೋಗ ಅಥವಾ ಔಷಧ ಸೇವನೆ ಮಾಡವವರು ನೀಡಬಾರದು.
  • ಮದ್ಯ ಸೇವನೆ ಮಾಡಿದವರು ಅಥವಾ ಸೋಂಕು ಹೊಂದಿರುವವರು ರಕ್ತದಾನ ಮಾಡಬಾರದು.
  • ಎರಡು ರಕ್ತದಾನದ ಮಧ್ಯೆ ಕನಿಷ್ಠ 3 ತಿಂಗಳ ಅಂತರ ಇರಬೇಕು.
  • ಎಚ್​​ಐವಿ , ಕ್ಯಾನ್ಸರ್ ಪೀಡಿತರು ಖಾಯಿಲೆಯಿಂದ ಬಳಲುವವರು ನೀಡಬಾರದು.
  • ಕಿಡ್ನಿ ಅಂಗಾಗ ಸಮಸ್ಯೆಯಿಂದ ಬಳಲುವವರು ನೀಡಬಾರದು.
  • ಟ್ಯಾಟ್ಯೂ ಹಾಕಿಸಿಕೊಂಡವರು ಆರು ತಿಂಗಳ ಕಾಲ ನೀಡಬಾರದು.

ಒಟ್ಟಿನಲ್ಲಿ ಇಷ್ಟು ದಿನ ಕಲಬೆರಕೆ ಆಹಾರ, ಅಪಾಯಕಾರಿಯಾದ ಕಲರ್ ಹಾಗೂ ಕೆಮಿಕಲ್ ಬಳಕೆಯ ಆಹಾರ ತಿಂಡಿಗಳ ಮೇಲೆ ಮೇಗಾ ಅಭಿಯಾನ ಶುರು ಮಾಡಿದ್ದ ಆರೋಗ್ಯ ಇಲಾಖೆ ಈಗ ರಕ್ತ ಸಂಗ್ರಹ ಘಟಕಗಳ ಮೇಲೆ ತಪಾಸಣೆಗೆ ಮುಂದಾಗಿದೆ.


Spread the love
Share:

administrator

Leave a Reply

Your email address will not be published. Required fields are marked *