ಬೆಂಗಳೂರಿನ ಆಟೋದ ಮೇಲೆ ವೈರಲ್ ಆದ ಸಂದೇಶ: ‘ಹಿಂದಿ ಚಾಲಕರು ಹಿಂತಿರುಗಿ’ ಎಂಬ ಫಲಕದಿಂದ ಭಾರಿ ಚರ್ಚೆ

ಬೆಂಗಳೂರು: ಎಲ್ಲರೂ ಸಮಾನರು, ಎಲ್ಲರಿಗೂ ಪ್ರಾಮಾಣಿಕವಾಗಿ ದುಡಿದು ತಿನ್ನುವ ಸ್ವಾತಂತ್ರ್ಯವಿದೆ. ಆದರೆ ಯಾವುದೇ ಲೈಸೆನ್ಸ್ ಇಲ್ಲದೇ ಆಟೋ ಓಡಿಸುವ ಹಿಂದಿ ಆಟೋ ಚಾಲಕರನ್ನು (Hindi auto driver) ಇಲ್ಲಿಂದ ಹಿಂತಿರುಗಿ ಹೋಗುವಂತೆ ಬೆಂಗಳೂರಿನ ಆಟೋದ ಹಿಂದೆ ಸಂದೇಶವನ್ನು ಬರೆಯಲಾಗಿದೆ. ಇಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ, ಅಕ್ರಮವಾಗಿ ಆಟೋ ಓಡಿಸುವ ಹಿಂದಿ ಆಟೋ ಚಾಲಕರಿಗಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದೆ ಈ ಸಾಲುಗಳು. ಸದ್ಯಕ್ಕೆ ಈ ಪೋಸ್ಟ್ ವೈರಲ್ ಆಗಿದ್ದು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದು ಇಂತಹ ಅನಗತ್ಯ ದ್ವೇಷದಿಂದ ದೂರವಿರಿ ಎಂದಿದ್ದಾರೆ.

nammabengaluru ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಆಟೋದ ಹಿಂಬದಿ ಅಂಟಿಸಲಾದ ಪೋಸ್ಟರ್ ವೊಂದನ್ನು ಕಾಣಬಹುದು. ಈ ಪೋಸ್ಟ್ ಗೆ ಇದನ್ನು ನೋಡಿ ದುಃಖವಾಯಿತು. ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ಕಾನೂನುಬದ್ಧವಾಗಿ ಕೆಲಸ ಮಾಡುವ ಜನರ ಬಗ್ಗೆ ನಾವು ಅಷ್ಟೊಂದು ದ್ವೇಷ ಸಾಧಿಸಬಾರದು” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ
ಆಟೋದ ಹಿಂಬದಿ ಹಿಂತಿರುಗಿ, ಅಕ್ರಮವಾಗಿ ಆಟೋ ಓಡಿಸುತ್ತಿರುವ ಹಿಂದಿಚಾಲಕರೇ ಇಲ್ಲಿಂದ ಹಿಂತಿರುಗಿ. ಪರವಾನಗಿ ಇಲ್ಲ/ ಪೊಲೀಸ್ ಪರಿಶೀಲನೆ ಇಲ್ಲ/ ಪ್ರದರ್ಶನವಿಲ್ಲ/ ಬ್ಯಾಡ್ಜ್ ಇಲ್ಲ/ ಪರವಾನಗಿ ಇಲ್ಲ. ಆದರೂ ಕೆ.ಆರ್. ಪುರಂ ಮತ್ತು ಮಹದೇವಪುರ ವಲಯದಲ್ಲಿ 10,000 ಕ್ಕೂ ಹೆಚ್ಚು ಆಟೋಗಳು ಇವೆ ಎಂದು ಬರೆದಿರುವುದನ್ನು ನೀವು ನೋಡಬಹುದು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಇಂತಹ ಸಂದೇಶ ಗಳು ದ್ವೇಷ ಹಾಗೂ ವಿಭಜನೆಯನ್ನು ಹೆಚ್ಚಿಸುತ್ತವೆ. ಶಾಂತಿಯನ್ನು ಹಾಳು ಮಾಡುತ್ತವೆ ಎಂದಿದ್ದಾರೆ. ಮತ್ತೊಬ್ಬರು, ಇಂತಹ ದ್ವೇಷ ಹಾಗೂ ಅನಗತ್ಯ ದೂಷಣೆಯಿಂದಾಗಿ ಜನರು ಖಾಸಗಿ ವಾಹನಗಳನ್ನು ಬಳಸಲು ಒತ್ತಾಯಿಸಲ್ಪಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸಾಮಾನ್ಯ ಜ್ಞಾನ ಹಾಗೂ ನಾಗರಿಕ ಜಾಗೃತಿ ಕಳೆದು ಹೋಗಿದೆ. ಇದು ಕೇವಲ ಭಾಷೆ ಅಥವಾ ರಾಜ್ಯದ ಸಮಸ್ಯೆಯಲ್ಲ, ಇಡೀ ಸಮಾಜದ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿ ಜನರು ಬೆಂಗಳೂರು, ಭಾರತದ ಭಾಗವಲ್ಲ, ಬದಲಾಗಿ ಬೇರೆ ಯಾವುದೋ ದೇಶದ ಭಾಗ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
