Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವತಿಗೆ ಹಿಂಸಾತ್ಮಕ ಸ್ಪರ್ಶ ವಿಡಿಯೋ ವೈರಲ್- ಆರೋಪಿಯ ಬಂಧನ

Spread the love

ಬೆಂಗಳೂರು: ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದಿನಿಂದ ಬಂದು ಯುವಕನೋರ್ವ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಏಪ್ರಿಲ್​ 4ರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಕೃತ್ಯದ ಸಿಸಿಟಿವಿ ವಿಡಿಯೋ ಈಗ ವೈರಲ್​ ಆಗಿದೆ. ಸ್ಥಳೀಯ ನಿವಾಸಿ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಗುರುತಿಗಾಗಿ ಪೊಲೀಸರು ಏರಿಯಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ, ಏರಿಯಾದ ಜನರ ಬಳಿಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆ ಬಗ್ಗೆ ಏರಿಯಾ ನಿವಾಸಿ ಮುನಿರಾಜು ಎಂಬುವರು ಮಾತನಾಡಿ, ನಮ್ಮ ಏರಿಯಾದಲ್ಲಿ ಈ ಹಿಂದೆ ಈ ರೀತಿ ಆಗಿರಲಿಲ್ಲ. ಈಗ ಆಗಿರುವುದು ನಮಗೆ ಬೇಸರ ತಂದಿದೆ. ಇಲ್ಲಿ ಪಿಜಿಗಳು ಹೆಚ್ಚಾಗಿವೆ, ಪೊಲೀಸರು ಬೀಟ್ ಜಾಸ್ತಿ ಮಾಡಬೇಕು. ಹುಡುಗಿಯರು ರಾತ್ರಿ ವೇಳೆ ಓಡಾಡಿದ್ದರು. ಹುಡುಗ ಆ ರೀತಿ ಮಾಡಬಾರದಿತ್ತು. ಕೃತ್ಯ ಎಸಗಿದ ವ್ಯಕ್ತಿ ಯಾರು ಅಂತ ಗೊತ್ತಾಗಿಲ್ಲ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಹಿಳಾ ಇನ್​ಫ್ಲುಯೆನ್ಸರ್ ಒಬ್ಬರು ವ್ಲಾಗ್ ಮಾಡುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋದ ಘಟನೆ ಬಿಟಿಎಂ ಲೇಔಟ್​ನಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಘಟನೆ ಮತ್ತೆ ನಗರದಲ್ಲಿ ಸಂಭವಿಸಿದೆ.

ಬೈಕ್​ನಲ್ಲಿ ಬಂದು ಯುವತಿಗೆ ಬ್ಯಾಡ್​ ಟಚ್​​
ಕೆಲ ದಿನಗಳ ಹಿಂದೆ ರಾಮಮೂರ್ತಿ ನಗರದಲ್ಲಿ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್​ನಲ್ಲಿ ಬಂದ ಕಾಮುಕನೊಬ್ಬ ಬ್ಯಾಡ್ ಟಚ್ ಮಾಡಿದ ಘಟನೆ ನಡೆದಿತ್ತು. ಕೃತ್ಯದ ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಘಟನೆ ನಡೆದಿತ್ತು.

ಬೈಕ್ ಸವಾರ ಅರುಣ್ ಎಂಬಾತ ಅಸಭ್ಯ ವರ್ತನೆ ತೋರಿದ್ದು, ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಆರೋಪಿ ಅರುಣ್​ನನ್ನು ಪೊಲೀಸರು ಬಂಧಿಸಿದ್ದರು. ದೂರು ನೀಡಿದ ಎರಡೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *