Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಾಸ್ ಏಂಜಲೀಸ್ ಹಿಂಸಾಚಾರ: ಭಾರತೀಯ ಸಮುದಾಯದ ಮೇಲೆ ಅಪಪ್ರಚಾರ

Spread the love

ನವದೆಹಲಿ:ಅಮೆರಿಕದ ಲಾಸ್ ಏಂಜಲಿಸ್​​ನಲ್ಲಿ ತೀವ್ರ ಹಿಂಸಾಚಾರ ಮತ್ತು ಪ್ರತಿಭಟನೆಗಳು ಸಂಭವಿಸಿದವು. ವಲಸಿಗರನ್ನು ನಿರ್ಬಂಧಿಸುವ ಸರ್ಕಾರದ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಅದಾದ ಬೆನ್ನಲ್ಲೇ ಎಲ್ಲಾ ವಲಸಿಗ ಸಮುದಾಯಗಳನ್ನು ಒಂದೇ ತಕ್ಕಡಿಯಲ್ಲಿ ಇಡುವ ಪ್ರಯತ್ನ ನಡೆದಿದೆ.

ಭಾರತೀಯ ಸಮುದಾಯದವರನ್ನೂ ಹಿಂಸಾಚಾರಿಗಳೆಂದು ಹೀಯ್ಯಾಳಿಸಲಾಗುತ್ತಿದೆ. ಇದನ್ನು ಅಲ್ಲಗಳೆಯುವ ಎಕ್ಸ್ ಪೋಸ್ಟ್​ವೊಂದು ವೈರಲ್ ಆಗಿದೆ. ಭಾರತೀಯ ಸಮುದಾಯದವರು ದೊಂಬಿ ನಡೆಸಲ್ಲ, ಕೆಲಸ ಮಾಡುತ್ತಾರೆ ಎಂದು ಈ ಪೋಸ್ಟ್ ಹೇಳುತ್ತದೆ.

‘ಭಾರತೀಯರು ಅಮೆರಿಕಕ್ಕೆ ಬರುವದು ಕಷ್ಟಪಟ್ಟು ದುಡಿಯಲೇ ಹೊರತು ದೊಂಬಿ ನಡೆಸಲು ಅಲ್ಲ. ಕಾರು ಸುಡುವುದು, ಮಳಿಗೆ ದೋಚುವುದು, ನಗರ ಹಾಳು ಮಾಡುವುದು ಈ ಕೆಲಸಗಳನ್ನು ಯಾವ ಭಾರತೀಯರೂ ಮಾಡುವುದಿಲ್ಲ. ಪ್ಯಾಲೆಸ್ಟೀನ್, ಸೊಮಾಲಿಯಾ, ಪಾಕಿಸ್ತಾನ ಮತ್ತಿತರ ಮುಸ್ಲಿಂ ದೇಶಗಳಿಂದ ಬಂದ ಆಯಕ್ಟಿವಿಸ್ಟ್​​​ಗಳು ಹಾಗು ಕೆಲ ಮೆಕ್ಸಿಕನ್ನರು ಹಿಂದಾಚಾರ, ದೊಂಬಿ, ಗಲಾಟೆಗಳಲ್ಲಿ ತೊಡಗುತ್ತಾರೆ’ ಎಂದು ಡೊನಾಲ್ಡೋ ಟ್ರಂಪೋ ಅಪ್​ಡೇಟ್ ಎನ್ನುವ ಎಕ್ಸ್ ಅಕೌಂಟ್​ನಿಂದ ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ 11 ಲಕ್ಷ ವೀಕ್ಷಣೆ ಪಡೆದಿದೆ. ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಬಹಳ ಜನರು ಈ ಪೋಸ್ಟ್​​ಗೆ ಬೆಂಬಲ ನೀಡಿದ್ದಾರೆ. ಭಾರತೀಯ ಸಮುದಾಯದವರು ಶ್ರಮ ಜೀವಿಗಳೆನ್ನುವ ಅಭಿಪ್ರಾಯಕ್ಕೆ ಹೆಚ್ಚಿನ ಜನರು ಸಹಮತ ವ್ಯಕ್ತಪಡಿಸಿದ್ದಾರೆ.
ಹೊರ ದೇಶಗಳಲ್ಲಿರುವ ಬಹುತೇಕ ಭಾರತೀಯರು ಪರಿಶ್ರಮದಿಂದ ಕೆಲಸ ಮಾಡಲು, ತಮ್ಮ ಕುಟುಂಬಕ್ಕೆ ಬೆಂಬಲ ನೀಡಲು, ಶಾಂತಿಯಿಂದ ಜೀವನ ನಡೆಸಲು ಆದ್ಯತೆ ಕೊಡುತ್ತಾರೆ. ಇನೊಬ್ಬರಿಗೆ ತೊಂದರೆ ಕೊಡಬಾರದು, ಇನ್ನೊಬ್ಬರಿಂದ ತೊಂದರೆಗೆ ಸಿಲುಕಬಾರದು ಎನ್ನುವ ಮೌಲ್ಯಗಳೊಂದಿಗೆ ತಾವು ಬೆಳೆದಿದ್ದೇವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

2023ರ ಅಂಕಿ ಅಂಶದ ಪ್ರಕಾರ, ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರ ಸಂಖ್ಯೆ 52 ಲಕ್ಷ ಇದೆ. ಈಗ ಇನ್ನೂ ಹೆಚ್ಚಿರಬಹುದು. ಅಮೆರಿಕದಲ್ಲಿರುವ ಅತಿಹೆಚ್ಚು ಏಷ್ಯನ್ ಮೂಲದವರಲ್ಲಿ ಚೀನಾ ಬಿಟ್ಟರೆ ಭಾರತದವರೇ ಹೆಚ್ಚು. ಅಮೆರಿಕ ಜನಸಂಖ್ಯೆಯ ಶೇ. 1.5ರಷ್ಟಿದ್ದರೂ ಅಮೆರಿಕದ ಆದಾಯ ತೆರಿಗೆಯಲ್ಲಿ ಶೇ. 5-6ರಷ್ಟನ್ನು ಭಾರತೀಯರೇ ಪಾವತಿಸುತ್ತಾರೆ.

ಅಮೆರಿಕದ ಶೇ. 60ರಷ್ಟು ಹೋಟೆಲ್​ಗಳನ್ನು ಭಾರತೀಯರು ನಡೆಸುತ್ತಾರೆ. ಅಮೆರಿಕದ 16 ಫಾರ್ಚೂನ್-500 ಕಂಪನಿಗಳಿಗೆ ಭಾರತೀಯರು ಸಿಇಒಗಳಾಗಿದ್ದಾರೆ. ಓದಲು ಬರುವ ವಿದೇಶೀ ವಿದ್ಯಾರ್ಥಿಗಳಲ್ಲಿ ಶೇ. 25ರಷ್ಟು ಭಾರತೀಯರೇ ಇದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *