ವಿಜಯ್ ಅಭಿಮಾನಿ ಭೇಟಿಗೆ ಬಾಡಿಗಾರ್ಡ್ ಗನ್ ತೋರಿಸಿದ ಘಟನೆ: ಫ್ಯಾನ್ಸ್ ಗಳಲ್ಲಿ ಆತಂಕ

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ವಿಜಯ್ ಭೇಟಿಗೆ ಬಂದ ಅಭಿಯಾನಿಯತ್ತ ಬಾಡಿಗಾರ್ಡ್ ಗನ್ ಇಟ್ಟಿರುವ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಅಭಿಮಾನಿ ಜೊತೆಗಿನ ವಿಜಯ್ ಬಾಡಿಗಾರ್ಡ್ ವರ್ತನೆ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.

ಕೊಡೈಕೆನಾಲ್‌ನಲ್ಲಿ ಚಿತ್ರೀಕರಣ ಮುಗಿಸಿ ಮಧುರೈ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದರು. ಈ ವೇಳೆ ಅಪಾರ ಸಂಖ್ಯೆ ಫ್ಯಾನ್ಸ್ ಜಮಾಯಿಸಿದ್ದರು. ಅಲ್ಲಿದ್ದ ವಯಸ್ಸಾದ ಅಭಿಮಾನಿಯೊಬ್ಬರು ಬಾಡಿಗಾರ್ಡ್ ಕಣ್ಣು ತಪ್ಪಿಸಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ ಅವರಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಆ ನಂತರ ಬಾಡಿಗಾರ್ಡ್ ಗನ್ ಅನ್ನು ಜೇಬಿಗೆ ಇಳಿಸಿದ್ದಾರೆ.
ಈ ಘಟನೆ ನಡೆದ ಸಂದರ್ಭದಲ್ಲಿ ವಿಜಯ್‌ಗೆ ಗಮನಕ್ಕೆ ಬಂದಿಲ್ಲ. ಹೀಗಾಗಿ ಈ ವಿಡಿಯೋ ನೋಡಿದ ಅಭಿಮಾನಿಗಳು ಬಾಡಿಗಾರ್ಡ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯ್ ಅವರು ಕನ್ನಡದ ಸಂಸ್ಥೆ ಕೆವಿಎನ್ ನಿರ್ಮಿಸುತ್ತಿರುವ ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.9ರಂದು ಚಿತ್ರ ರಿಲೀಸ್ ಆಗಲಿದೆ.
