Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ತೇಲುವ ವಿಡಿಯೋ ವೈರಲ್

Spread the love

ನವದೆಹಲಿ:ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ 20 ದಿನಗಳ ಕಾಲವಿದ್ದು ಬಾಹ್ಯಾಕಾಶ ಪ್ರಯಾಣ ಮುಗಿಸಿ ಬಂದಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಗುರುತ್ವಾಕರ್ಷಣೆ ಬಲ ಇಲ್ಲದ ಅಂತರಿಕ್ಷದಲ್ಲಿ ತೇಲುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾವು ಐಎಸ್‌ಎಸ್‌ಗೆ ತೆರಳಿದ್ದಾಗ ಅಲ್ಲಿ ಸಮಯ ತಿಳಿಯುವ, ನಮ್ಮ ಗುರಿಗಳನ್ನು ತಲುಪುವ ಮತ್ತು ಸಂಶೋಧನೆಗಳನ್ನು ಮಾಡುವುದರಲ್ಲಿ ಸಂಪೂರ್ಣವಾಗಿ ತೊಡಗಿಗೊಂಡಿದ್ದೆವು. ಆರಂಭದಲ್ಲಿ ಗುರುತ್ವಾಕರ್ಷಣೆ ಇಲ್ಲದೆ ಚಲಿಸುವುದು ಮತ್ತು ಕೇಂದ್ರದ ಬಗ್ಗೆ ತಿಳಿದುಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ನನ್ನ ಚಲನವಲನಗಳ ಬಗ್ಗೆ ನಿಯಂತ್ರಣ ಪಡೆದುಕೊಂಡ ಬಳಿಕದ ವಿಡಿಯೊ ಇದಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ಬಾಹ್ಯಾಕಾಶದಲ್ಲಿ ಯಾವುದೇ ಸಣ್ಣ ಅಡಚಣೆಯೂ ನಿಮ್ಮ ದೇಹವನ್ನು ಚಲಿಸುವಂತೆ ಮಾಡಬಹುದು. ಹೀಗಾಗಿ ಸಂಪೂರ್ಣವಾಗಿ ನಿಶ್ಚಲವಾಗಿರಲು ಕೌಶಲ್ಯ ಬೇಕಾಗುತ್ತದೆ. ಉದಾಹರಣೆಗೆ ಈ ವೇಗವಾಗಿ ಚಲಿಸುವ ಜಗತ್ತಿನಲ್ಲಿ ಮನಸ್ಸನ್ನು ನಿಯಂತ್ರಿಸಲು ಅಗತ್ಯವಿರುವ ಕೌಶಲದಂತೆ. ಕೆಲವೊಮ್ಮೆ ವೇಗವಾಗಿರಲು ನಿಧಾನಗೊಳಿಸುವುದು ಮುಖ್ಯ. ಗುರುತ್ವಾಕರ್ಷಣೆ ಇದ್ದರೂ ಅಥವಾ ಇಲ್ಲದಿದ್ದರೂ ಸ್ಪಷ್ಟವಾಗಿರುವುದು, ನಿಶ್ಚಲವಾಗಿರುವುದು ಒಂದು ಸವಾಲಿನ ಕೆಲಸ’ ಎಂದು ಬರೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *