Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೂಢನಂಬಿಕೆಯ ಬಲಿ: ತೆಂಗಿನಕಾಯಿ ವಿಚಾರಕ್ಕೆ ತಮ್ಮನ ಹೆಂಡತಿಯನ್ನು ಕೊಲೆ ಮಾಡಿದ ಅಣ್ಣ

Spread the love

ಕಾರವಾರ : ಹಿರಿಯರ ಕಾಲದ ದೇವರ ತೆಂಗಿನಕಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಮತ್ತು ಅವನ ತಮ್ಮನ ನಡುವೆ ಹಿರಿಯರ ಕಾಲದ ದೇವರ ತೆಂಗಿನಕಾಯಿ ಸಲುವಾಗಿ ಜಗಳವಾಗಿತ್ತು. ಅದು ಇತ್ಯರ್ಥವಾದ ನಂತರವೂ ಕೋಪದಿಂದ ಅಣ್ಣನೊಬ್ಬ ತನ್ನ ತಮ್ಮನ ಹೆಂಡತಿ ಭಾಗ್ಯಶ್ರಿಯನ್ನು ಕಬ್ಬಿಣದ ಪಿಕಾಸಿಯಿಂದ ಹೊಡೆದು ಕೊಂದು ಪರಾರಿಯಾಗಿದ್ದು, ಮೂರು ದಿನಗಳ ನಂತರ ಆರೋಪಿ ದೊಂಡು ವರಕ ಪತ್ನಿ ಮನೆಗೆ ಹೋಗಿ ಊಟ ಮಾಡುತ್ತಿದ್ದ ವೇಳೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ.

ಏನಿದು ತೆಂಗಿನಕಾಯಿ ಕೊಲೆ ಪ್ರಕರಣ?

ಹಿರಿಯರ ಕಾಲದ ದೇವರ ತೆಂಗಿನಕಾಯಿ ನನಗ್ಯಾಕೆ ಕೊಟ್ಟಿಲ್ಲ ಎಂದು ಅಣ್ಣನೊಬ್ಬ ತಮ್ಮನ ಪತ್ನಿಯನ್ನೆ ಕೊಲೆ ಮಾಡಿದ್ದಾನೆ.  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಒಬ್ಬ ದೈವ ಭಕ್ತ. ಗೌಳಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿರುವ ಈ ದೊಂಡು ವರಕ ಸೇರಿದಂತೆ ಒಟ್ಟು ಐವರು ಸಹೋದರರು. ಐವರು ಕೂಡ ತಂದೆಯ ಆಸ್ತಿಯನ್ನ ಭಾಗ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ದೊಂಡು ವರಕನ ಮಗನಿಗೆ ಕಳೆದ ಕೆಲವು ತಿಂಗಳಿನಿಂದ ಆರೋಗ್ಯ ಸಮಸ್ಯೆ ಇತ್ತು. ಹಿರಿಯರ ಕಾಲದಿಂದಲೂ ಪೂಜಿಸುತ್ತಿರುವ ತೆಂಗಿನಕಾಯಿ ಚಿಕ್ಕ ತಮ್ಮನ ಮನೆಯಲ್ಲಿ ಇರುವುದೇ ಇದಕ್ಕೆಲ್ಲಾ ಕಾರಣ ಎಂದು ಭಾವಿಸಿದ ಈತ ತೆಂಗಿನಕಾಯಿಯನ್ನು ತನಗೆ ಕೊಡುವಂತೆ ಕಳೆದ ಒಂದು ವರ್ಷದಿಂದ ಪಟ್ಟು ಹಿಡಿದಿದ್ದ. ಆ ತೆಂಗಿನ ಕಾಯಿ ಬಳಸಿ ತಮ್ಮನ ಹೆಂಡತಿ ಭಾಗ್ಯಶ್ರೀ ನಮ್ಮ ಮೇಲೆ ಮಾಟ ಮಂತ್ರ ಮಾಡಿಸುತ್ತಿದ್ದಾಳೆ ಎಂದು ಊರಿನವರೆಲ್ಲಿರಿಗೂ ಹೇಳುತ್ತಾ ತಿರುಗುತ್ತಿದ್ದ.  ಕಳೆದ ಆರು ತಿಂಗಳ ಹಿಂದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಹಾಗೂ ದೇವರಿಗೆ ಪ್ರಸಾದ ಮಾಡಿದಾಗ ದೈವವಾಣಿಯೂ ಅವನ ಮೂಢನಂಬಿಕೆಗೆ ಸಾಥ್ ಕೊಟ್ಟಿತ್ತು. ಇದರಿಂದಾಗಿಯೇ ಸಿಟ್ಟಿಗೆದ್ದ ಈತ ಭಾಗ್ಯಶ್ರಿಯ ಹತ್ಯೆ ಮಾಡಿದ್ದಾನೆ.

ತಪ್ಪಿಸಿಕೊಂಡು ಓಡಿ ಹೋದವ ಸಿಕ್ಕಿದ್ದು ಹೇಗೆ?

ಕಬ್ಬಿಣದ ವಸ್ತು ತೆಗದುಕೊಂಡು ಗದ್ದೆಗೆ ಹೊರಟಿದ್ದ ಈತ ತನ್ನ ತಮ್ಮನ ಹೆಂಡತಿಯಾದ ಕಬ್ಬಿಣದ ಪಿಕಾಸಿಯಿಂದ ಭಾಗ್ಯಶ್ರಿ ತಲೆಗೆ ಜೋರಾಗಿ ಹೊಡೆದಿದ್ದಾನೆ ಅವಳ ರಕ್ಷಣೆಗೆ ಬಂದ ಸ್ಥಳೀಯರನ್ನು ಆಕೆಯ ಬೆಂಬಲಿಗರೆಂದು ತಿಳಿದು ಅವರ ಮೇಲೆಯೂ ಹಲ್ಲೆಗೆ ಯತ್ನಸಿದ್ದಾನೆ, ಅಷ್ಟೆ ಅಲ್ಲ ಕೈಯಯಲ್ಲಿದ್ದ ಆಯುಧದಿಂದ ತನ್ನ ವೃದ್ಧ ತಾಯಿಯ ಕಾಲಿಗೆ ಬಲವಾಗಿ ಬಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ದೊಂಡು ವರಕ ಸೆಪ್ಟೆಂಬರ್ 11 ರಿಂದ ಕಾಡಿನಲ್ಲಿ ಅವಿತು ಕೊಂಡಿದ್ದ. ಅವನ  ಬಗ್ಗೆ ಪೊಲೀಸರು  ರಾಮನಗರದಿಂದ ಖಾನಾಪೂರದವರೆಗೆ ತೀವ್ರ ಶೋಧ ಕೈಗೊಂಡಿದ್ದರು. ಮೂರು ದಿನಗಳ ಬಳಿಕ ಪತ್ನಿಯ ಮನೆಗೆ ಹೊಗಿ ಊಟ ಮಾಡುತ್ತಿದ್ದ ವಿಷಯ ತಿಳಿದ ಪೊಲೀಸರು ಕೂಡಲೆ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *