ವರುಣ್ ಅಗರ್ವಾಲ್ ಅವರು ಪ್ರಮುಖವಾಗಿ ತಮ್ಮ ಮಾನಸಿಕ ಆರೋಗ್ಯದ ಹೋರಾಟವನ್ನು ವೃತ್ತಿಪರ ಯಶಸ್ಸಿನ ಸನ್ನಿವೇಶ

ಬೆಂಗಳೂರು: ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಾನು ಖಿನ್ನತೆಯಿಂದ ಹೊರಬಂದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಮಾನಸಿಕ ಆರೋಗ್ಯ, ಅದರಿಂದ ಆಗಿರುವ ನಷ್ಟ, ಈ ಖಿನ್ನತೆಯಿಂದ ಹೊರಗೆ ಬರಲು ನಾಲ್ಕು ವರ್ಷಗಳ ಕಾಲ ನಿರಂತರ ಹೋರಾಟದ ಬಗ್ಗೆ ಹಂಚಿಕೊಂಡಿದ್ದಾರೆ. ವರುಣ್ ಅಗರ್ವಾಲ್ ಎಂಬುವವರು ತಮ್ಮ ಜೀವನದಲ್ಲಾದ ಕರಾಳ ಕ್ಷಣವನ್ನು ಹಾಗೂ ಭಯಾನಕತೆಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ತನ್ನ ನೈಜ ಜೀವನದ ಕೊನೆಯ ಕೆಲವು ವರ್ಷಗಳು ನಷ್ಟ ಮತ್ತು ಹತಾಶೆಗಳು ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ನಂತರ ಖಿನ್ನತೆಯಿಂದ ಹೊರ ಬರುಲು ತಾನು ಮಾಡಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಎಕ್ಸ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ, “ಎಲ್ಲರಿಗೂ ನಮಸ್ಕಾರ, ನಾನು ಮತ್ತೆ ಬಂದಿದ್ದೇನೆ, ಕಳೆದ ನಾಲ್ಕರಿಂದ ಐದು ವರ್ಷಗಳು ಕಷ್ಟಕರವಾದ ಜೀವನ ನಡೆಸಿದ್ದೇನೆ. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ, ಅಲ್ಲಿಂದ ತನ್ನ ಜೀವನದಲ್ಲಿ ಹೇಗೆ ಕತ್ತಲು ಆವರಿಸಿತ್ತು ಎಂಬುದನ್ನು ವಿವರವಾಗಿ ಇಲ್ಲಿ ತಿಳಿಸಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ, ನಾನು ನನ್ನ ಕೆಲಸ, ನನ್ನ ಹೆಸರು, ನನ್ನ ಗುರುತು, ನನ್ನ ನೆಟ್‌ವರ್ಕ್ ಅನ್ನು ಕಳೆದುಕೊಂಡೆ. ಇದು ನಾಲ್ಕರಿಂದ ಐದು ವರ್ಷಗಳ ಕಾಲ ಮುಂದುವರಿದಿತ್ತು. ಈ ನೋವಿನ ನಡುವೆ ನನ್ನ ಸಹೋದರನನ್ನು ಕೋವಿಡ್‌ನಿಂದ ಕಳೆದುಕೊಂಡೆ” ಎಂದು ವರುಣ್ ಅಗರ್ವಾಲ್ ಹೇಳಿಕೊಂಡಿದ್ದಾರೆ.
ತನ್ನ ಮಾನಸಿಕ ನೋವಿನ ಕರಾಳತೆ ಎಷ್ಟಿತ್ತು ಎಂಬುದನ್ನು ವಿವರಿಸಿದ್ದಾರೆ. ಖಿನ್ನತೆಯು ನನ್ನ ಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ವಿಷಯಗಳಲ್ಲಿ ಒಂದಾಗಿದೆ. ಹಾಸಿಗೆಯಿಂದ ಏಳುಲು ಕಷ್ಟವಾಗಿತ್ತು. ಯಾವುದೇ ಕೆಲಸ ಮಾಡಲು ಆಗುತ್ತಿರಲಿಲ್ಲ. ಒಂದೇ ಕಡೆ ಇರುವ ಕಾರಣ ಏನೇನೋ ಯೋಚನೆ, ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಎಂಬ ಆಲೋಚನೆ ಕೂಡ ಬಂದಿತ್ತು. ನನಗೆ ಅದು ನರಕದಲ್ಲಿರುವಂತೆ ಅನ್ನಿಸುತ್ತಿತ್ತು. ಈ ನಾಲ್ಕು ವರ್ಷಗಳ ಕಾಲ ಪ್ರತಿ ಸೆಕೆಂಡ್, ಪ್ರತಿ ಗಂಟೆ, ಪ್ರತಿ ದಿನ ಮತ್ತು ಪ್ರತಿ ವಾರ ಇದನ್ನು ಊಹಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಅರುಣ್ ನಂತರದಲ್ಲಿ ತನ್ನ ಜೀವನದಲ್ಲಿ ಆಗಿರುವ ಬದಲಾವಣೆ ಬಗ್ಗೆ ಹಂಚಿಕೊಂಡಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ನಾನು ಅನುಭವಿಸಿದ ನೋವುಗಳಿಂದ ಹೊರ ಬರಲು ಅನೇಕ ರೀತಿಯಲ್ಲಿ ಪ್ರಯತ್ನಪಡಟ್ಟಿದ್ದೇನೆ. ಖಿನ್ನತೆಗೆ ಒಳಗಾಗುವ ಮೊದಲು ನಾನು ಪಡೆದ ಎಲ್ಲವನ್ನು ಈ ಖಿನ್ನತೆಯಿಂದ ಕಳೆದುಕೊಂಡೆ, ಮತ್ತೆ ಅದನ್ನು ಪಡೆಯಲು ಒದ್ದಾಡಿದ್ದೇನೆ ಎಂದು ವರಣ್ ಅವರು ಹೇಳಿಕೊಂಡಿದ್ದಾರೆ
ಆದರೆ ಒಂದು ಮಾತ್ರ ಸತ್ಯ, ನಾನು ಇನ್ನೂ ಜೀವಂತವಾಗಿದ್ದೇನೆ. ಸತ್ತಿಲ್ಲ ಎಂಬುದು ನನಗೆ ಮನವರಿಕೆಯಾಗಿತ್ತು. ಯಾಕೆ ಎಲ್ಲದಕ್ಕೂ ಯೋಚನೆ ಮಾಡಬೇಕು. ಮತ್ತೆ ಅದೇ ಕೆಲಸ ಪಡೆಯಬೇಕು, ನನ್ನವರನ್ನು ಮರಳಿ ಪಡೆಯಬೇಕು ಎಂಬ ಹಂಬಲ ಹೆಚ್ಚಾಯಿತು. ಅಲ್ಲಿಂದ ನನ್ನ ಹೊಸ ಜೀವನ ಆರಂಭವಾಗಿತ್ತು. ಈ ಖಿನ್ನತೆಯಿಂದ ನನ್ನ ಜೀವನ ಇಲ್ಲಿಗೆ ಮುಗಿಯಿತು ಎಂದು ಅನ್ನಿಸಿದ್ದು ನಿಜ, ಯಮ ಬಳಿ ಹೋಗಿ ಬಂತೆ ಅನ್ನಿಸಿತ್ತು. ಆದರೆ ನಾನು ಹೋರಾಟ ಮಾಡಿದೆ. ಜೀವನವನ್ನು ಗೆಲ್ಲಬೇಕು ಎಂಬ ಹಠ ನನಗೆ ಈ ಕಾಯಿಲೆ ನೀಡಿದ ದೊಡ್ಡ ಪಾಠ ಎಂದು ಹೇಳಿದ್ದಾರೆ.
ಇನ್ನು ಈ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ನೀವು ಯಾರೆಂದು ನನಗೆ ತಿಳಿದಿಲ್ಲ, ಆದರೆ ನಿಮ್ಮ ಪೋಸ್ಟ್ ನನ್ನ ಕಣ್ಣಿಗೆ ಬಿತ್ತು. ಪ್ರೀಯ ಅಪರಿಚಿತರೇ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ, ನೀವು ಮತ್ತೆ ಎಲ್ಲವನ್ನು ಪಡೆಯಬೇಕು ಎಂಬುದು ನನ್ನ ಬಯಕೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಹಾಯ್ ವರುಣ್ ಈಗ ಎಲ್ಲವೂ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ನನಗೆ ತಿಂಗಳುಗಟ್ಟಲೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವು, ಹಾಗಾಗಿ ಅದರ ನೋವು ಹೇಗಿರುತ್ತದೆ ಎಂಬುದು ನನಗೆ ತಿಳಿದಿದೆ. ನೀವು ಖಂಡಿತ ಮತ್ತೆ ಮೊದಲಿನಂತೆ ಆಗುತ್ತಿರಿ, ಎಲ್ಲದಕ್ಕೂ ಸಮಯ ಬೇಕು ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.