Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು – ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭ: ಪ್ರಯಾಣದ ದರ ದುಬಾರಿ

Spread the love

ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಬೆಳಗಾವಿ ಪ್ರಯಾಣಿಕರು ಕಾಣುತ್ತಿದ್ದ ಕನಸು ಕೊನೆಗೂ ಕೈಗೂಡಿದೆ. ಪದೇಪದೇ ತಾಂತ್ರಿಕ ಕಾರಣ ನೀಡಿ ‘ಮುಂದೂಡಿದ್ದ’ ವಂದೇ ಭಾರತ್‌ ರೈಲು ಈಗ ಬೆಳಗಾವಿಗೂ ಬರಲಿದೆ. ಸಾಮಾನ್ಯ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕಿಂತ ಎರಡೂವರೆ ತಾಸು ಅವಧಿಯನ್ನು ಮಾತ್ರ ಇದು ಉಳಿಸಲಿದೆ.

ಆದರೆ, ಪ್ರಯಾಣದರ ಮಾತ್ರ ಹಲವು ಪಟ್ಟು ಹೆಚ್ಚು!

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸದ್ಯ ಈ ಜಾಣ ರೈಲಿನ ಓಟದ ಅವಧಿ 8 ತಾಸು 30 ನಿಮಿಷವಿದೆ. ಮೊದಲಿನಿಂದಲೂ ಸಂಚರಿಸುತ್ತಿರುವ ಬೆಳಗಾವಿ- ಬೆಂಗಳೂರು ಸ್ಪೆಷಲ್‌ ರೈಲು 10 ತಾಸು 15 ನಿಮಿಷಕ್ಕೆ ಸಮಯ ತೆಗೆದುಕೊಳ್ಳಲಿದೆ. ಅಂದರೆ; ವಂದೇ ಭಾರತ್‌ಗಿಂತ 1 ತಾಸು 45 ನಿಮಿಷ ಮಾತ್ರ ಉಳಿತಾಯ ಮಾಡಲಿದೆ.

ಅಲ್ಲದೇ, ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ 11 ತಾಸು 50 ನಿಮಿಷ, ವಿಶ್ವ ಮಾನವ ಎಕ್ಸ್‌ಪ್ರೆಸ್‌ 11 ತಾಸು 15 ನಿಮಿಷ, ವಾರದ ವಿಶೇಷ ಸೂಪರ್‌ಫಾಸ್ಟ್‌ ರೈಲುಗಳು 11 ತಾಸು ಸಮಯದಲ್ಲಿ ಓಡಿ ಮುಟ್ಟುತ್ತವೆ. ಅಂದರೆ; ಹೆಚ್ಚೂಕಡಿಮೆ ಎರಡೂವರೆ ತಾಸು ಮಾತ್ರ ವಂದೇ ಭಾರತ್‌ ಉಳಿತಾಯ ಮಾಡಲಿದೆ.

ರೈಲಿನ ವಿಶೇಷತೆ ಏನು?: ಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡಿರುವ ಈ ರೈಲಿನಲ್ಲಿ 8 ಕೋಚ್‌ಗಳಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ, ಇನ್ಫೋಟೆಕ್‌ ವ್ಯವಸ್ಥೆ ಇದೆ. ಜಿಪಿಎಸ್ ವ್ಯವಸ್ಥೆ ಇರುವ ಕಾರಣ, ಪ್ರಸ್ತುತ ರೈಲು ಯಾವ ಸ್ಥಳದಲ್ಲಿದೆ ಎಂಬುದನ್ನು ತಿಳಿಸುತ್ತದೆ.

ಇದರಲ್ಲಿ 4 ಮೋಟರ್ ಕಾರ್‌ಗಳು, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್ /ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್‌ಗಳು ಇರಲಿವೆ. ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಿಶ್ವ ದರ್ಜೆಯ ಸೌಲಭ್ಯ ಹೊಂದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಫ್ಲ್ಯಾಟ್‌ಫಾರ್ಮ್‌ ಗಳು ತುಂಬ ಗಿಜಿಗುಡುತ್ತಿರುವುದೇ ಇದಕ್ಕೆ ಕಾರಣ ಎಂಬುದು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ.

ವಾರದ ಆರು ದಿನ ಸಂಚಾರ:

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣ ಮತ್ತು ಬೆಳಗಾವಿ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳ (26752/ 26751) ಅರೆ ವೇಗದ ಸೇವೆಯು ಬುಧವಾರ ಹೊರತುಪಡಿಸಿ, ವಾರದ ಆರು ದಿನಗಳು ಇರಲಿದೆ.

ವಿಶೇಷ ರೈಲು (06575) ಬೆಂಗಳೂರಿನಿಂದ 11.15ಕ್ಕೆ ಹೊರಟು, ಯಶವಂತಪುರ, ತುಮಕೂರು, ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆಯಾಗಿ, ರಾತ್ರಿ 8 ಗಂಟೆಗೆ ಬೆಳಗಾವಿ ತಲುಪಲಿದೆ.

ರೈಲುಗಳ ನಿಯಮಿತ ಸಂಚಾರ ಆ.11ರಿಂದ ಪ್ರಾರಂಭವಾಗಲಿದೆ. ಬೆಳಗಾವಿ- ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26751) ರೈಲು ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು, ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ಧಾರವಾಡ (ಬೆಳಿಗ್ಗೆ 7.08/7:10), ಎಸ್‌ಎಸ್‌ಎಸ್ ಹುಬ್ಬಳ್ಳಿ (7.30/7.35), ಎಸ್‌ಎಂಎಂ ಹಾವೇರಿ (8.35/8.37), ದಾವಣಗೆರೆ (9.25/9.27), ತುಮಕೂರು (ಮಧ್ಯಾಹ್ನ 12.15/12.17) ಯಶವಂತಪುರ (1.03/1.05) ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 2.20ಕ್ಕೆ ಹೊರಡುವ ರೈಲು (26752), ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ. ಯಶವಂತಪುರ (ಮಧ್ಯಾಹ್ನ 2.28/2.30), ತುಮಕೂರು (3.03/3.05), ದಾವಣಗೆರೆ (5.48/5.50), ಎಸ್‌ಎಂಎಂ ಹಾವೇರಿ (6.48/6.50), ಎಸ್‌ಎಸ್‌ಎಸ್ ಹುಬ್ಬಳ್ಳಿ (ರಾತ್ರಿ 8/8.05) ಮತ್ತು ಧಾರವಾಡ (8.25/8.27) ನಿಲ್ದಾಣಗಳಲ್ಲಿ ನಿಲುಗಡೆ ಆಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿಮಾನ ದರಕ್ಕಿಂತ ರೈಲೇ ದುಬಾರಿ..!

ಸದ್ಯ ಬೆಳಗಾವಿಯಿಂದ ಬೆಂಗಳೂರಿಗೆ ಹವಾನಿಯಂತ್ರಣವಲ್ಲದ ಸ್ಲೀಪರ್‌ ಕೋಚ್‌ನ ರೈಲು ಪ್ರಯಾಣ ದರ ₹380 ಇದೆ. ಫಸ್ಟ್‌ ಎಸಿ ₹2,350, ಸೆಕೆಂಡ್ ಎಸಿ ₹1,450, ಥರ್ಡ್‌ ಎಸಿ ₹1,010 ದರವಿದೆ. ಆದರೆ, ವಂದೇ ಭಾರತ್ ಕನಿಷ್ಠ ₹1,810 ರಿಂದ ಗರಿಷ್ಠ ₹2,955 ದರವಿದೆ.

ಅಚ್ಚರಿಯೆಂದರೆ ಸ್ಟಾರ್‌ಏರ್‌ ಸಂಸ್ಥೆಯ ವಿಮಾನದ ದರ ₹3,694 ಇದೆ. ಬೆಳಗಾವಿಯಿಂದ ಹಾರಿದ ಒಂದೇ ತಾಸಿಗೆ ಬೆಂಗಳೂರಿನಲ್ಲಿ ಇಳಿಸುತ್ತದೆ. ಹಾಗಿದ್ದರೆ ವಂದೇ ಭಾರತ್‌ಗೆ ₹2,955 ಕೊಟ್ಟು ಎಂಟೂವರೆ ತಾಸು ಪ್ರಯಾಣಿಸಲು ಪ್ರಯಾಣಿಕ ಇಷ್ಟ‍ಪಡುತ್ತಾನೆಯೇ ಎಂಬುದೇ ಪ್ರಶ್ನೆ.


Spread the love
Share:

administrator

Leave a Reply

Your email address will not be published. Required fields are marked *