ವನಗೂರು ಗ್ರಾಮದಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಹೊರಟಿದ್ದ ವ್ಯಾನ್ ದುರಂತ; 3 ಜನರ ಸ್ಥಿತಿ ಚಿಂತಾಜನಕ

ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆಘಾಟ್ ನಲ್ಲಿ ಮದುವೆಗೆ ಹೊರಟಿದ್ದ ವ್ಯಾನ್ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ವನಗೂರು ಗ್ರಾಮದಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ವ್ಯಾನ್ ಹೊರಟಿತ್ತು. ರಾಜ್ಯ ಹೆದ್ದಾರಿಯ 20 ಅಡಿ ಎತ್ತರದಿಂದ ವ್ಯಾನ್ ಉರುಳಿಬಿದ್ದಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಕಲೇಶಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.