ಯುಪಿಯಲ್ಲಿ ಪೊಲೀಸ್ ಠಾಣೆಯಲ್ಲೇ ಮಣಿಕಟ್ಟು ಕತ್ತರಿಸಿಕೊಂಡ ವಿವಾಹಿತ ಮಹಿಳೆ
ಉತ್ತರ ಪ್ರದೇಶ: ಸೀತಾಪುರದಲ್ಲಿ ನಾಟಕೀಯ ಮತ್ತು ಆಘಾತಕಾರಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಬ್ಬರು ಪೊಲೀಸ್ ಠಾಣೆಯೊಳಗೆ ಬ್ಲೇಡ್‌ನಿಂದ ತಮ್ಮ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರ ಪೂಜಾ ಮಿಶ್ರಾ ಎಂಬ ಮಹಿಳೆಯು (ವಿವಾಹಿತೆ ಮತ್ತು ಇಬ್ಬರು ಮಕ್ಕಳ ತಾಯಿ) ತಮ್ಮ ಪತಿಯ ಸೋದರಳಿಯನಾದ, ತನಗಿಂತ 15 ವರ್ಷ ಚಿಕ್ಕವನಾದ ಅಲೋಕ್ ಮಿಶ್ರಾ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಪೂಜಾ ಮತ್ತು ಅಲೋಕ್ ಸುಮಾರು ಏಳು ತಿಂಗಳು ಒಟ್ಟಿಗೆ ವಾಸಿಸಿದ್ದರು. ಇವರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ, ವಿವಾದವನ್ನು ಇತ್ಯರ್ಥಪಡಿಸಲು ಇಬ್ಬರನ್ನೂ ಸೀತಾಪುರ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ, ಅಲೋಕ್ ಮಿಶ್ರಾ ತಾನು ಇನ್ನು ಮುಂದೆ ಪೂಜಾ ಜೊತೆ ಇರಲು ಬಯಸುವುದಿಲ್ಲ ಎಂದು ಹೇಳಿದನು. ಇದರಿಂದ ಮನನೊಂದ ಪೂಜಾ, ತಕ್ಷಣವೇ ಬ್ಲೇಡ್ ತೆಗೆದುಕೊಂಡು ಪೊಲೀಸ್ ಠಾಣೆಯ ಒಳಗೆ ತಮ್ಮ ಮಣಿಕಟ್ಟನ್ನು ಕತ್ತರಿಸಿಕೊಂಡರು.

ಈ ಘಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಯಿತು. ತೀವ್ರವಾಗಿ ಗಾಯಗೊಂಡ ಪೂಜಾಳನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯಲಾಗಿದೆ.
ಪೊಲೀಸ್ ಠಾಣೆಯಂತಹ ಜಾಗದಲ್ಲಿಯೇ ಈ ರೀತಿಯ ಘಟನೆ ನಡೆದಿರುವುದು ಅಲ್ಲಿನ ಭದ್ರತೆ ಮತ್ತು ಸಂಧಾನ ಪ್ರಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.