ಮಾತ್ರೆ ಸೇವಿಸಿ ಮಲಗಿದ್ದ ಉತ್ತರ ಪ್ರದೇಶ ಮೂಲದ ಯುವಕ ಸಾವು

ಮಲ್ಪೆ: ಮಾತ್ರೆ ಸೇವಿಸಿ ಮಲಗಿದ ವ್ಯಕ್ತಿ ಅಲ್ಲೇ ಸಾವನ್ನಪ್ಪಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಪರಿಸರದಲ್ಲಿ ಕೆಲವು ವರ್ಷಗಳಿಂದ ಕಟ್ಟಡಗಳ ಒಳಾಂಗಣ ಅಲಂಕಾರ ಕೆಲಸ ಮಾಡಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಸಂತೋಷ್ ಕುಮಾರ್ (24) ಮೃತಪಟ್ಟವರು.
ಅವರು ಆ. 6ರಂದು ಬೆಳಗ್ಗೆ ಕೆಲಸದ ನಿಮಿತ್ತ ಬಡಾನಿಡಿಯೂರು ಗ್ರಾಮದ ಹಂಪನಕಟ್ಟೆಗೆ ಬಂದಿದ್ದರು. ಜತೆಯಲ್ಲಿದ್ದ ಇಬ್ಬರಿಗೆ ಕೆಲಸ ತೋರಿಸಿ “ನೀವು ಕೆಲಸ ಮುಂದುವರಿಸಿ; ನನಗೆ ಕುತ್ತಿಗೆ ಮತ್ತು ಎದೆಯಲ್ಲಿ ಉರಿಯಾಗುತ್ತಿದ್ದು, ಮಾತ್ರೆ ತೆಗೆದುಕೊಂಡು ಮಲಗುತ್ತೇನೆ’ ಎಂದು ಹೇಳಿ ಮಾತ್ರೆ ಸೇವನೆ ಮಾಡಿದ್ದರು. ಬಳಿಕ ಅವರಿಗೆ ತಿಂಡಿ ಕೊಡಲು ಹೋಗಿ ಎಬ್ಬಿಸಿದಾಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದನ್ನು ಕಂಡು ತತ್‌ಕ್ಷಣ ಉಡುಪಿಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಪರೀಕ್ಷಿಸಿದ ವೈದ್ಯರು ಸಂತೋಷ್ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೃತನ ಸಹೋದರ ಪರ್ಕಳದಲ್ಲಿ ದರ್ಜಿ ಕೆಲಸ ಮಾಡುತ್ತಿರುವ ಬೈರಾಗಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
