ಅಮೆರಿಕದ ಸುಂಕ ಏರಿಕೆ: ಉತ್ಪಾದನೆ ಸ್ಥಗಿತಗೊಳಿಸಿದ ಭಾರತದ ಜವಳಿ ಉದ್ಯಮ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ರಫ್ತಿನ ಮೇಲೆ ಹೇರಿರುವ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವು (Trump Tariffs) ಇಂದಿನಿಂದ ಜಾರಿಗೆ ಬಂದಿದ್ದು, ಇದರ ಬೆನ್ನಲ್ಲೇ ತಿರುಪುರ, ನೋಯ್ಡಾ (Noida) ಮತ್ತು ಸೂರತ್‌ಗಳಲ್ಲಿನ ಜವಳಿ ಮತ್ತು ಉಡುಪು ತಯಾರಕರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ.

ಟ್ರಂಪ್ ನ ಹೆಚ್ಚುವರಿ ಸುಂಕ ನಿಯಮದ ಪ್ರಕಾರ, ಆಗಸ್ಟ್ 27 ರಿಂದ ಜಾರಿಗೆ ಬರುವ ಹಲವು ರಫ್ತು ವಿಭಾಗಗಳ ಮೇಲಿನ ಒಟ್ಟು ಸುಂಕವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ತಿರುಪುರ, ನೋಯ್ಡಾ ಮತ್ತು ಸೂರತ್‌ನಲ್ಲಿ ಜವಳಿ ಮತ್ತು ಉಡುಪು ತಯಾರಕರು ವೆಚ್ಚ ಹದಗೆಡುತ್ತಿರುವ ಹಿನ್ನಲೆ ಉತ್ಪಾದನೆಯನ್ನು ನಿಲ್ಲಿಸಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ಸಾಗಣೆಯಾಗುವ 47-48 ಶತಕೋಟಿ ಡಾಲರ್ ಮೌಲ್ಯದ ಸುಮಾರು ಶೇ. 55 ರಷ್ಟು ಸರಕುಗಳು ಈಗ ಶೇ. 30-35 ರಷ್ಟು ಬೆಲೆಗೆ ಬಂದಿಳಿದೆ. ಇದು ಚೀನಾ, ವಿಯೆಟ್ನಾಂ, ಕಾಂಬೋಡಿಯಾ, ಫಿಲಿಪೈನ್ಸ್ ಮತ್ತು ಇತರ ಆಗ್ನೇಯ ಮತ್ತು ದಕ್ಷಿಣ ಏಷ್ಯಾದ ದೇಶಗಳ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕವಾಗಿಲ್ಲ ಎಂದು ಎಂದು ಎಫ್‌ಐಇಒ ಅಧ್ಯಕ್ಷ ಎಸ್‌ಸಿ ರಾಲ್ಹನ್ ಹೇಳಿದರು.
ವಿವಿಧ ಉತ್ಪನ್ನ ವಿಭಾಗಗಳಲ್ಲಿ, ಭಾರತದ ಪ್ರತಿಸ್ಪರ್ಧಿಗಳಲ್ಲಿ ಮ್ಯಾನ್ಮಾರ್ ಶೇ. 40 US ಸುಂಕವನ್ನು ಹೊಂದಿದೆ, ಥೈಲ್ಯಾಂಡ್ ( ಶೇ.19), ಕಾಂಬೋಡಿಯಾ (ಶೇ.19), ಬಾಂಗ್ಲಾದೇಶ (ಶೇ.20), ಇಂಡೋನೇಷ್ಯಾ (ಶೇ.19), ಚೀನಾ ಮತ್ತು ಶ್ರೀಲಂಕಾ (ಎರಡೂ ಶೇ. 30), ಮಲೇಷ್ಯಾ (ಶೇ.19), ಫಿಲಿಪೈನ್ಸ್ (ಶೇ.19) ಮತ್ತು ವಿಯೆಟ್ನಾಂ (ಶೇ.20) ರಷ್ಟು ಸುಂಕವನ್ನು ಹೊಂದಿದೆ.
ಭಾರತದ ಜವಳಿ ಮತ್ತು ಉಡುಪು ರಫ್ತಿನ ಸುಮಾರು ಮೂರನೇ ಒಂದು ಭಾಗದಷ್ಟು $37 ಬಿಲಿಯನ್ ಯುಎಸ್‌ಗೆ ಹೋಗುತ್ತದೆ. ಇತ್ತೀಚಿನ ಯುಎಸ್ ಸುಂಕ ಹೆಚ್ಚಳವು ₹72,000 ಕೋಟಿ ಭಾರತೀಯ ಜವಳಿ ಮತ್ತು ಉಡುಪು ರಫ್ತನ್ನು ಅಪಾಯಕ್ಕೆ ಸಿಲುಕಿಸಿದೆ, ಇದು ಸ್ಪರ್ಧಾತ್ಮಕ ರಾಷ್ಟ್ರಗಳಿಗೆ ಹೋಲಿಸಿದರೆ ಶೇ. 30-31 ರಷ್ಟು ಸುಂಕದ ಅಂತರವನ್ನು ಸೃಷ್ಟಿಸಿದೆ.
ಹೀಗಾಗಿ ತಿರುಪುರ, ನೋಯ್ಡಾ ಮತ್ತು ಸೂರತ್‌ನಲ್ಲಿ ಜವಳಿ ಮತ್ತು ಉಡುಪು ತಯಾರಕರು ವೆಚ್ಚ ಹದಗೆಡುತ್ತಿರುವ ಹಿನ್ನಲೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಭಾರತದಿಂದ 7.54 ಲಕ್ಷ ಕೋಟಿ ಮೌಲ್ಯದ ಸರಕು ಅಮೆರಿಕಕ್ಕೆ ರಫ್ತು ಮಾಡಲಾಗುತ್ತದೆ. ಆದರೆ ಇದೀಗ ಹೊಸ ಸುಂಕದ ಪರಿಣಾಮ 4.22 ಕೋಟಿ ರೂ. ನಷ್ಟವಾಗಿದೆ.
ಈ ನಡುವೆ ಅಮೆರಿಕದ ಸುಂಕಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಎಷ್ಟೇ ಒತ್ತಡ ಬಂದರೂ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳುತ್ತೇವೆ ಸಣ್ಣ ಉದ್ಯಮಿಗಳು, ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ತಮ್ಮ ಸರ್ಕಾರ ಎಂದಿಗೂ ಹಾನಿಯಾಗಲು ಬಿಡುವುದಿಲ್ಲ ಎಂದು ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ.
ಅಹಮದಾಬಾದ್‌ನ ಮಣ್ಣಿನಿಂದ, ನಾನು ನಿಮಗೆ ಹೇಳಲು ಬಯಸುತ್ತೇನೆ, ಗಾಂಧಿಯವರ ಭೂಮಿಯಿಂದಲೇ ನಿಮಗೆ ಭರವಸೆ ನೀಡುತ್ತೇನೆ, ಸಣ್ಣ ಉದ್ಯಮಿಗಳು, ಅಂಗಡಿಯವರು, ರೈತರು ಮತ್ತು ಜಾನುವಾರು ಸಾಕಣೆದಾರರ ಹಿತಾಸಕ್ತಿಗಳು ನನಗೆ ಅತಿ ಹೆಚ್ಚಿನ ಆದ್ಯತೆಯಾಗಿದೆ. ಎಷ್ಟೇ ಒತ್ತಡ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
