ಭಾರತದ ಮಾನವೀಯ ನೆರವಿನ ವಿಮಾನದ ಮೇಲೆ ಅಮೆರಿಕ ದಾಳಿ; ಇರಾನ್ ಗಂಭೀರ ಆರೋಪ

ಹೊಸದಿಲ್ಲಿ: ಇರಾನ್ ನ ಮಗ್ಗದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯ ವೇಳೆ ಮಹಾನ್ ಏರ್ ಸಂಸ್ಥೆಗೆ ಸೇರಿದ ವಿಮಾನಕ್ಕೆ ಹಾನಿಯಗಿದೆ. ಭಾರತದಿಂದ ಮಾನವೀಯ ನೆರವಿನ ಸರಕುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಹೊರಟದ್ದ ವಿಮಾನದ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಹೇಳಿಕೆ ನೀಡಿದೆ.
ಇರಾನ್ ಜನತೆಗಾಗಿ ಭಾರತದಿಂದ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ತರುವ ಉದ್ದೇಶದಿಂದ ವಿಮಾನ ಈ ವಾರ ಹೊಸದಿಲ್ಲಿಗೆ ತೆರಳಬೇಕಿತ್ತು. ಆದರೆ ಈ ಹೇಳಿಕೆ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಶ್ವದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಿಂದಾಗಿ ಈ ವಿಮಾನಕ್ಕೆ ಹಾನಿಯಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನ ಏಪ್ರಿಲ್ 1ರಂದು ದೆಹಲಿಗೆ ಬರಬೇಕಿತ್ತು ಎನ್ನಲಾಗಿದೆ.

ಇರಾನ್ ನ ರೆಡ್ ಕ್ರೆಸೆಂಟ್ ಸೊಸೈಟಿ ಮೂಲಕ ಭಾರತ ಮಾರ್ಚ್ 18ರಂದು ವೈದ್ಯಕೀಯ ಸಾಮಗ್ರಿಗಳ ಮೊದಲ ಕಂತನ್ನು ಇರಾನ್ ಗೆ ಕಳುಹಿಸಿಕೊಟ್ಟಿತ್ತು. ಈ ಮಾನವೀಯ ನೆರವಿಗಾಗಿ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಭಾರತದ ಜನತೆಗೆ ಧನ್ಯವಾದ ಹೇಳಿತ್ತು.
ಮಹಾನ್ ಏರ್ ವಿಮಾನ, ಇರಾನ್ ಖಾಸಗಿ ಒಡೆತನದ ವಿಮಾನಯಾನ ಕಂಪನಿಗೆ ಸೇರಿದ್ದಾಗಿದ್ದು, ಪಶ್ಚಿಮ ಏಷ್ಯಾ, ಕೇಂದ್ರ ಏಷ್ಯಾ ದಕ್ಷಿಣ ಏಷ್ಯಾ ಪೂರ್ವ ಏಷ್ಯಾ ಹಾಗೂ ಆನ್ನೇಯ ಏಷ್ಯಾ ಸೇರಿದಂತೆ ಹಲವು ಕಡೆಗಳಿಗೆ ವಿಮಾನಯಾನ ಸೇವೆ ಒದಗಿಸುತ್ತಿದೆ.