ಅಮೆರಿಕದ $2.2 ಬಿಲಿಯನ್ ವೆಚ್ಚದ ಬೃಹತ್ ‘ಇವಾನ್ಪಾಹ್ ಸೌರ ವಿದ್ಯುತ್ ಘಟಕ’ ಸ್ಥಗಿತಕ್ಕೆ ನಿರ್ಧಾರ

ನವದೆಹಲಿ: ಹತ್ತು ವರ್ಷದ ಹಿಂದೆ ಇಡೀ ವಿಶ್ವವೇ ಬೆರಗುಗೊಳಿಸುವ ರೀತಿಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾಗಿತ್ತು ಇವಾನ್ಪಾಹ್ ಪ್ರಾಜೆಕ್ಟ್ (Ivanpah solar facility). ಇಡೀ ರಾಜ್ಯದ ವಿದ್ಯುತ್ ಅಗತ್ಯಗಳಿಗೆ ಇದೊಂದೇ ಪರಿಹಾರ ಕೊಡಬಲ್ಲುದು.

ಬೇರೆ ರಾಜ್ಯಗಳಿಗೂ ಇದು ಮಾದರಿಯಾಗಬಲ್ಲುದು ಎಂದೇ ಎಲ್ಲರೂ ಭಾವಿಸಿದ್ದರು. 2.2 ಬಿಲಿಯನ್ ಡಾಲರ್ (ಸುಮಾರು 19,500 ಕೋಟಿ ರೂ) ವೆಚ್ಚದಲ್ಲಿ ತಯಾರಾಗಿದ್ದ ಈ ಸೌರ ಘಟಕ ಇದೀಗ ಮುಚ್ಚುತ್ತಿದೆ.
ಅಪಾರ ನಿರೀಕ್ಷೆಗಳೊಂದಿಗೆ ತಯಾರಾಗಿದ್ದ ಈ ಸೌರ ವಿದ್ಯುತ್ ಘಟಕದಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿರಲಿಲ್ಲ. ಅದರ ನಿರ್ಮಾಣ ಆರಂಭವಾದಾಗ ಹೊಸ ಟೆಕ್ನಾಲಜಿ. ಆದರೆ, ಅದಾದ ನಂತರ ಹೊಸ ಹೊಸ ಸೌರ ತಂತ್ರಜ್ಞಾನಗಳು ಆಗಮಿಸಿ, ಕ್ಯಾಲಿಫೋರ್ನಿಯಾ ಪ್ರಾಜೆಕ್ಟ್ ನಿರುಪಯುಕ್ತ ಎನಿಸಿಹೋಗಿತ್ತು. ಹೀಗಾಗಿ, ಇದನ್ನು ನಿಲ್ಲಿಸಲು ಅಮೆರಿಕ ಸರ್ಕಾರ ತೀರ್ಮಾನಿಸಿದೆ. 2026ಕ್ಕೆ ಪ್ರಾಜೆಕ್ಟ್ಗೆ ತಿಲಾಂಜಲಿ ಹಾಡಲಾಗುತ್ತದೆ.
ಸುಮಾರು ಆರೇಳು ಚದರ ಕಿಮೀ ವಿಸ್ತೀರ್ಣದಲ್ಲಿ ಮೂರು ಬೃಹತ್ ಟವರ್ಗಳು ಹಾಗೂ 1.74 ಲಕ್ಷ ಹೀಲಿಯೋಸ್ಟಾಟ್ಗಳನ್ನು ನಿರ್ಮಿಸಲಾಗಿತ್ತು. ಕ್ಯಾಲಿಫೋರ್ನಿಯಾದ ವಿದ್ಯುತ್ ಬೇಡಿಕೆ ಪೂರೈಸಬಹುದು ಎಂದು ನಂಬಲಾಗಿತ್ತು. ಆದರೆ, ವಾಸ್ತವದಲ್ಲಿ ಇದರಿಂದ ವಿದ್ಯುತ್ ತಯಾರಿಕೆ ಆಗುತ್ತಿರುವುದು ತೀರಾ ಕಡಿಮೆ. ಈ ಪ್ರಾಜೆಕ್ಟ್ ಮುಂದುವರಿಸುವುದು ನಿರರ್ಥಕ ಎಂದು ಸರ್ಕಾರ ಭಾವಿಸಿದೆ. ಹೀಗಾಗಿ, ಯೋಜನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಸೋಲಾರ್ ವಿದ್ಯುತ್ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿವೆ. ಫೋಟೋವೋಲ್ಟಾಯಿಕ್ ಟೆಕ್ನಾಲಜಿ ಬಂದು ಸಂಚಲವನ್ನೇ ಸೃಷ್ಟಿಸಿವೆ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸೋಲಾರ್ ಪವರ್ ಸೃಷ್ಟಿಸಲು ಸಾಧ್ಯವಾಗಿದೆ