ಹಸಿವಿನಿಂದ ಬಳಲುವವರಿಗೆ ಮೀಸಲಾಗಿದ್ದ ₹8,600 ಕೋಟಿ ಮೌಲ್ಯದ ಆಹಾರ ನಾಶಪಡಿಸಲು ಅಮೆರಿಕ ನಿರ್ಧಾರ!

ವಾಷಿಂಗ್ಟನ್: ವಿಶ್ವಾದ್ಯಂತ ಹಸಿವಿನಿಂದ ಬಳಲುತ್ತಿರುವವರಿಗಾಗಿ ಹಂಚಲು ಶೇಖರಿಸಿದ್ದ 500 ಮೆಟ್ರಿಕ್ ಟನ್‌ಗಳಷ್ಟು ತುರ್ತು ಆಹಾರ ಪದಾರ್ಥವನ್ನು ನಾಶ ಪಡಿಸಲು ಅಮೆರಿಕ ಮುಂದಾಗಿದೆ. ದುಬಾೖಯ ಗೋದಾ ಮು ಒಂದರಲ್ಲಿ ಹಲವು ತಿಂಗಳಿನಿಂದ ಸಂಗ್ರಹಿಸಿಡಲಾದ ಬಿಸ್ಕೆಟ್ ಬಳಕೆ ಅವಧಿ (ಎಕ್ಸ್‌ಪೈರಿ ದಿನಾಂಕ) ಮುಗಿದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೌಷ್ಟಿಕಾಂಶಭರಿತ ಈ ಬಿಸ್ಕೆಟ್‌ಗಳ ಒಟ್ಟು ಮೌಲ್ಯ 8,600 ಕೋಟಿ ರೂ.ಗೂ ಹೆಚ್ಚಿದ್ದು, ಅಮೆರಿಕ ಸರಕಾರದ ದತ್ತಿ ಸಂಸ್ಥೆ ಯುಎಸ್‌ಏಡ್‌ನಡಿ ತೆರಿಗೆ ಹಣದಲ್ಲಿ ಖರೀ ದಿಸಿ ಸಂಗ್ರಹಿಸಿಡಲಾಗಿತ್ತು. ಇದೀಗ ಬಿಸ್ಕತ್ತುಗಳನ್ನು ಸುಟ್ಟು ನಾಶಪಡಿಸಲು ಹೆಚ್ಚುವರಿ ಯಾಗಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಯುಎಸ್‌ಏಡ್‌ನ ಕಾರ್ಯಚಟುವಟಿಕೆ ಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಿವಾಣ ಹಾಕಿದ್ದು, ಬಿಸ್ಕೆಟ್‌ಗಳ ಪೂರೈಕೆಗೆ ತೊಡಕಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಯೊಬ್ಬರು ಹೇಳಿದ್ದಾರೆ. ಗಾಜಾ ಹಾಗೂ ಆಫ್ರಿಕಾದ ಕ್ಷಾಮಪೀಡಿತ ಪ್ರದೇಶಗಳಿಗೆ ಇವನ್ನು ಪೂರೈಸಬಹುದಿತ್ತು ಎಂದು ಅವರು ಬೇಸರ ಹೊರಹಾಕಿದ್ದಾರೆ.ವಾಷಿಂಗ್ಟನ್: ವಿಶ್ವಾದ್ಯಂತ ಹಸಿವಿನಿಂದ ಬಳಲುತ್ತಿರುವವರಿಗಾಗಿ ಹಂಚಲು ಶೇಖರಿಸಿದ್ದ 500 ಮೆಟ್ರಿಕ್ ಟನ್‌ಗಳಷ್ಟು ತುರ್ತು ಆಹಾರ ಪದಾರ್ಥವನ್ನು ನಾಶ ಪಡಿಸಲು ಅಮೆರಿಕ ಮುಂದಾಗಿದೆ. ದುಬಾೖಯ ಗೋದಾ ಮು ಒಂದರಲ್ಲಿ ಹಲವು ತಿಂಗಳಿನಿಂದ ಸಂಗ್ರಹಿಸಿಡಲಾದ ಬಿಸ್ಕೆಟ್ ಬಳಕೆ ಅವಧಿ (ಎಕ್ಸ್‌ಪೈರಿ ದಿನಾಂಕ) ಮುಗಿದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೌಷ್ಟಿಕಾಂಶಭರಿತ ಈ ಬಿಸ್ಕೆಟ್‌ಗಳ ಒಟ್ಟು ಮೌಲ್ಯ 8,600 ಕೋಟಿ ರೂ.ಗೂ ಹೆಚ್ಚಿದ್ದು, ಅಮೆರಿಕ ಸರಕಾರದ ದತ್ತಿ ಸಂಸ್ಥೆ ಯುಎಸ್‌ಏಡ್‌ನಡಿ ತೆರಿಗೆ ಹಣದಲ್ಲಿ ಖರೀ ದಿಸಿ ಸಂಗ್ರಹಿಸಿಡಲಾಗಿತ್ತು. ಇದೀಗ ಬಿಸ್ಕತ್ತುಗಳನ್ನು ಸುಟ್ಟು ನಾಶಪಡಿಸಲು ಹೆಚ್ಚುವರಿ ಯಾಗಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಯುಎಸ್‌ಏಡ್‌ನ ಕಾರ್ಯಚಟುವಟಿಕೆ ಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಿವಾಣ ಹಾಕಿದ್ದು, ಬಿಸ್ಕೆಟ್‌ಗಳ ಪೂರೈಕೆಗೆ ತೊಡಕಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಯೊಬ್ಬರು ಹೇಳಿದ್ದಾರೆ. ಗಾಜಾ ಹಾಗೂ ಆಫ್ರಿಕಾದ ಕ್ಷಾಮಪೀಡಿತ ಪ್ರದೇಶಗಳಿಗೆ ಇವನ್ನು ಪೂರೈಸಬಹುದಿತ್ತು ಎಂದು ಅವರು ಬೇಸರ ಹೊರಹಾಕಿದ್ದಾರೆ.
