ತುರ್ತಾಗಿ ನಗದು ಬೇಕೆಂದವರಿಗೆ ಗೂಗಲ್ ಪೇ ಮಾಡಿದರೆ ಸಂಕಷ್ಟ

ತೀರ್ಥಹಳ್ಳಿ:ತುರ್ತಾಗಿ ನಗದು ಬೇಕಿದ್ದು ಗೂಗಲ್ ಪೇ ಮಾಡುವುದಾಗಿ ಅಂಗಡಿ ಮಾಲೀಕನಿಗೆ ನಂಬಿಸಿ ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕು ತೂದುರಿನ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ

ಜೂನ್ 27ರಂದು ಮಧ್ಯಾಹ್ನ ಕೆಂಪು ಕಾರಿನಲ್ಲಿ ಬಂದ ಗ್ರಾಹಕನೊಬ್ಬ ಬಟ್ಟೆ ಅಂಗಡಿಯಲ್ಲಿ ₹1100 ಬೆಲೆಯ ಒಳ ಉಡುಪು ಖರೀದಿಸಿದ್ದ.
ತನಗೆ ₹20 ಸಾವಿರ ನಗದು ಅವಶ್ಯಕತೆ ಇದೆ. ಒಳ ಉಡುಪಿನ ದರ ಒಂದು ಸಾವಿರ ರುಪಾಯಿ ಮುರಿದುಕೊಂಡು ₹19 ಸಾವಿರ ನಗದು ಕೊಡಿ. ತಾನು ₹20 ಸಾವಿರ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದ.
ಆತ ಹೇಳಿದಂತೆ ಅಂಗಡಿ ಮಾಲೀಕ (ಹೆಸರು ಗೌಪ್ಯ) ₹19 ಸಾವಿರ ನಗದನ್ನು ಆ ವ್ಯಕ್ತಿಗೆ ನೀಡಿದ್ದರು. ಆತ ₹20 ಸಾವಿರ ಗೂಗಲ್ ಪೇ ಮಾಡಿರುವುದಾಗಿ ತಿಳಿಸಿ ಅಂಗಡಿಯಿಂದ ಹೋಗಿದ್ದ. ಬಳಿಕ ಅಂಗಡಿ ಮಾಲೀಕ ತನ್ನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಬಂದಿರಲಿಲ್ಲ. ಆತನಿಗಾಗಿ ಹುಡುಕಾಡಿದ ಅಂಗಡಿ ಮಾಲೀಕ ತಡವಾಗಿ ದೂರು ನೀಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.