UPSC ನಾಗರಿಕ ಸೇವಾ ಪರೀಕ್ಷೆ 2025: ಪ್ರಿಲಿಮ್ಸ್ ಫಲಿತಾಂಶ ಶೀಘ್ರದಲ್ಲೇ ಪ್ರಕಟಣೆಯ ನಿರೀಕ್ಷೆ

ಕೇಂದ್ರ ಲೋಕಸೇವಾ ಆಯೋಗ(UPSC) 2025 ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇದರ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಜೂನ್ ಎರಡನೇ ವಾರದೊಳಗೆ ಫಲಿತಾಂಶ ಬಿಡುಗಡೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಯುಪಿಎಸ್‌ಸಿ ಸಾಮಾನ್ಯವಾಗಿ ಪರೀಕ್ಷೆಯ 15 ದಿನಗಳಲ್ಲಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುತ್ತದೆ. ಕಳೆದ ವರ್ಷದ ಬಗ್ಗೆ ಹೇಳುವುದಾದರೆ, ಪರೀಕ್ಷೆಯನ್ನು ಜೂನ್ 16 ರಂದು ನಡೆಸಲಾಯಿತು ಮತ್ತು ಫಲಿತಾಂಶವನ್ನು ಜುಲೈ 1 ರಂದು ಬಿಡುಗಡೆ ಮಾಡಲಾಯಿತು.
ಅದೇ ರೀತಿ, 2023 ರಲ್ಲಿಯೂ ಸಹ UPSC CSE ಪೂರ್ವಭಾವಿ ಪರೀಕ್ಷೆಯನ್ನು ಮೇ 28 ರಂದು ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಜೂನ್ 12 ರಂದು ಘೋಷಿಸಲಾಯಿತು. ಈ ಮಾದರಿಯ ಆಧಾರದ ಮೇಲೆ, ಈ ವರ್ಷ ಪೂರ್ವಭಾವಿ ಫಲಿತಾಂಶವನ್ನು ಜೂನ್ 14 ರೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಫಲಿತಾಂಶವನ್ನು ಪರೀಶಿಲಿಸುವುದು ಹೇಗೆ?
- ಮೊದಲು UPSC ಯ ಅಧಿಕೃತ ವೆಬ್‌ಸೈಟ್ upsconline.gov.in ಗೆ ಹೋಗಿ.
- ನಂತರ ಮುಖಪುಟದಲ್ಲಿ ‘UPSC CSE ಪ್ರಿಲಿಮ್ಸ್ 2025 ಫಲಿತಾಂಶ’ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅದರ ನಂತರ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ PDF ಫೈಲ್ ತೆರೆಯುತ್ತದೆ.ಅದರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ವಿವರ ಇದೆ.
- ಭವಿಷ್ಯದ ಬಳಕೆಗಾಗಿ ಫಲಿತಾಂಶದ PDF ಅನ್ನು ಡೌನ್‌ಲೋಡ್ ಮಾಡಿ
ಪರೀಕ್ಷೆ ಯಾವಾಗ ನಡೆಯಿತು?
UPSC CSE ಪ್ರಿಲಿಮ್ಸ್ ಪರೀಕ್ಷೆಯನ್ನು ಮೇ 25 ರಂದು ಎರಡು ಅವಧಿಗಳಲ್ಲಿ ನಡೆಸಲಾಯಿತು ಮತ್ತು ಪ್ರತಿ ಅವಧಿಯು ಎರಡು ಗಂಟೆಗಳಾಗಿತ್ತು. ಅಭ್ಯರ್ಥಿಗಳು ಈಗ UPSC ಪ್ರಿಲಿಮ್ಸ್ GS ಪೇಪರ್ 1 ಮತ್ತು GS ಪೇಪರ್ 2 ಪಿಡಿಎಫ್ ಅನ್ನು ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಡೌನ್‌ಲೋಡ್ ಮಾಡಬಹುದು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು UPSC ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.