ಯುಪಿಐ ವಹಿವಾಟು: ಹಾವೇರಿ ತರಕಾರಿ ವ್ಯಾಪಾರಿಗೆ ₹29 ಲಕ್ಷ ಜಿಎಸ್‌ಟಿ ನೋಟಿಸ್!

ಹಾವೇರಿ : ಈ ಘಟನೆ ರಾಜ್ಯದ ಹಾವೇರಿಯಲ್ಲಿ ನಡೆದಿದೆ. ತರಕಾರಿ ವ್ಯಾಪಾರಿ ಶಂಕರಗೌಡ ಕಳೆದ ನಾಲ್ಕು ವರ್ಷಗಳಿಂದ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಬಳಿ ಸಣ್ಣ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರ ಹೆಚ್ಚಿನ ಗ್ರಾಹಕರು ಯುಪಿಐ ಅಥವಾ ಇತರ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಹಣ ಪಾವತಿಸುವ ಮೂಲಕ ಅವರಿಂದ ತರಕಾರಿಗಳನ್ನು ಖರೀದಿಸುತ್ತಾರೆ.

ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ 1.63 ಕೋಟಿ ರೂ.ಗಳ ವಹಿವಾಟಿಗೆ ಜಿಎಸ್‌ಟಿ ಅಧಿಕಾರಿಯೊಬ್ಬರು ಶಂಕರಗೌಡ ಅವರಿಗೆ 29 ಲಕ್ಷ ರೂ.ಗಳನ್ನು ಪಾವತಿಸುವಂತೆ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ವ್ಯಾಪಾರಿ ಶಂಕರ್ ಗೌಡ ರೈತರಿಂದ ನೇರವಾಗಿ ತಾಜಾ ತರಕಾರಿಗಳನ್ನು ಖರೀದಿಸಿ ತಮ್ಮ ಸಣ್ಣ ಅಂಗಡಿಯಲ್ಲಿ ಮಾರಾಟ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮಗೆ ಹೆಚ್ಚಿನ ಗ್ರಾಹಕರು ಯುಪಿಐ ಮೂಲಕ ಹಣ ಪಾವತಿಸುತ್ತಾರೆ ಅಂತ ತಿಳಿಸಿದ್ದಾರೆ. ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರ ಜೊತೆಗೆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಡುವುದಾಗಿ ತಿಳಿಸಿದ್ದಾರೆ.
ಕ್ಲಿಯರ್ ಟ್ಯಾಕ್ಸ್ ಪ್ರಕಾರ, ತಾಜಾ ತರಕಾರಿಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ತರಕಾರಿ ಮಾರಾಟಗಾರರು ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ ಯಾವುದೇ ಸಂಸ್ಕರಣೆಯಿಲ್ಲದೆ ಮಾರಾಟ ಮಾಡಿದರೆ, ಅವರು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಎಕನಾಮಿಕ್ ಟೈಮ್ಸ್ ಪ್ರಕಾರ, ಇತ್ತೀಚೆಗೆ ಕರ್ನಾಟಕ ಜಿಎಸ್ಟಿ ಇಲಾಖೆಯು ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವ ಅಂತಹ ಉದ್ಯಮಿಗಳ ಮೇಲೆ ನಿಗಾ ಇಡುತ್ತಿದೆ ಎಂದು ಹೇಳಿದೆ. ವಹಿವಾಟು ಮಿತಿಯನ್ನು ಮೀರಿದವರಿಗೆ ಜಿಎಸ್ಟಿ ನೋಂದಣಿಗಾಗಿ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಿದೆ..
