Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಸ್ಕಾಂನಿಂದ ನವೀಕೃತ ಸೇವೆ: ಈಗ ವಾಟ್ಸಪ್ ಮೂಲಕ ನಿಮ್ಮ ವಿದ್ಯುತ್ ಸಮಸ್ಯೆಗೆ ತಕ್ಷಣ ಪರಿಹಾರ!

Spread the love

ಬೆಂಗಳೂರು, ಮೇ 15: ಹಲವಾರು ಗ್ರಾಹಕ ಸ್ನೇಹಿ ಕ್ರಮಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯತ್ನಿಸುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ (BESCOM) ಇದೀಗ ವಾಟ್ಸ್ಆಯಪ್ ಸಹಾಯವಾಣಿ ಸಂಖ್ಯೆಗಳನ್ನು (Bescom WhatsApp Helpline) ಆರಂಭಿಸಿದೆ.

ಆ ಮೂಲಕ ಗ್ರಾಹಕರ ಸಮಸ್ಯಗಳಿಗೆ ಶೀಘ್ರದಲ್ಲೇ ಸ್ಪಂದಿಸುವ ಭರವಸೆ ನೀಡಿದೆ. ಬೆಸ್ಕಾಂ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ವಾಟ್ಸ್ಆಯಪ್ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದ್ದು, ಆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

‘ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ’ ಎಂದು ಎಕ್ಸ್ ಸಂದೇಶದಲ್ಲಿ ಬೆಸ್ಕಾಂ ಮನವಿ ಮಾಡಿದೆ.
ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗಳಿಗೂ ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿದ್ದು, ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ, ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ ಎಂದು ಬೆಸ್ಕಾಂ ಗ್ರಾಹಕರಿಗೆ ಸಲಹೆ ನೀಡಿದೆ.

ಬೆಸ್ಕಾಂ ವಾಟ್ಸ್ಆಯಪ್ ಸಹಾಯವಾಣಿ ಸಂಖ್ಯೆಗಳ ವಿವರ

ಕೋಲಾರ: 8277884015
ಚಿಕ್ಕಬಳ್ಳಾಪುರ: 8277884016
ಬಿಆರ್ಸಿ: 8277884017
ರಾಮನಗರ: 8277884018
ತುಮಕೂರು: 8277884019
ಚಿತ್ರದುರ್ಗ: 8277884020
ದಾವಣಗೆರೆ: 8277884021
ಬೆಂಗಳೂರು ನಗರ ಬೆಸ್ಕಾಂ ವಾಟ್ಸ್ಆಯಪ್ ಸಹಾಯವಾಣಿ

ದಕ್ಷಿಣ ವೃತ್ತ: 8277884011
ಪಶ್ಚಿಮ ವೃತ್ತ: 8277884012
ಪೂರ್ವ ವೃತ್ತ: 8277884013
ಉತ್ತರ ವೃತ್ತ: 8277884014
ಸೂರ್ಯಘರ್ ಯೋಜನೆ ಸಬ್ಸಿಡಿ ಪಡೆಯಲು ಮನವಿ

ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆಯೂ ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿದೆ. ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಿ ಎಂದು ಬೆಸ್ಕಾಂ ಕೇಳಿಕೊಂಡಿದೆ.

ಸೂರ್ಯಘರ್ ಯೋಜನೆಯ ಸಬ್ಸಿಡಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡುವಂತೆಯೂ ಬೆಸ್ಕಾಂ ಸಲಹೆ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *