ಅಸುರಕ್ಷಿತ ಹಾಲು ತಯಾರಿ: ಕೋಲಾರದ ಹಾಲು ಘಟಕದಲ್ಲಿ ಪತ್ತೆಯಾದ ಕೆಮಿಕಲ್

ಕೋಲಾರ: ಕೋಲಾರದ ಗಡಿಯಲ್ಲಿ ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಲಿನಲ್ಲಿ ಕೆಮಿಕಲ್ ಅಂಶ ಇರುವುದು ಪತ್ತೆಯಾಗಿದೆ.

ಕೋಲಾರದಲ್ಲಿ ಆಹಾರ ಇಲಾಖೆ ಹಾಗು ಪೊಲೀಸರು ಹಾಲಿಗೆ ಪೌಡರ್ ಮಿಶ್ರಣ ಮಾಡುತ್ತಿದ್ದ ಘಟಕದ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ ಕೆಮಿಕಲ್ ಇರುವುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿದೆ. ಕೆಮಿಕಲ್ ಮಿಶ್ರಿತ ಹಾಲಿನಲ್ಲಿ ಅಸುರಕ್ಷಿತ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಇರುವ ಅಂಶ ಪತ್ತೆಯಾಗಿದೆ. ಕೆಮಿಕಲ್ ಮಿಶ್ರಿತ ಹಾಲು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿದ್ದ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ತಂಡ ಕೆಮಿಕಲ್ ಮಿಶ್ರಿತ ಹಾಲು ಸಂಗ್ರಹ ಮಾಡಿ ಲ್ಯಾಬ್‌ಗೆ ಕಳುಹಿಸಿತ್ತು.
ಸದ್ಯ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಕೆಮಿಕಲ್ ಅಂದ್ರೆ ಜನರು ಉಪಯೋಗಿಸಲು ಅಸುರಕ್ಷಿತ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದೆ ಎಂದು ಕೋಲಾರ ಎಸ್ಪಿ ನಿಖಿಲ್ ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಸವಟೂರು ಗ್ರಾಮದಲ್ಲಿ ನರೇಶ್ ರೆಡ್ಡಿ ಎಂಬವರಿಗೆ ಸೇರಿದ ಹಾಲಿನ ಘಟಕದ ಮೇಲೆ ಕಳೆದ ಜೂನ್ 1ರಂದು ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಕೆಮಿಕಲ್ ಹಾಲು ತಯಾರಿಕೆಗೆ ಬಳಸುತ್ತಿದ್ದ ಕೆಮಿಕಲ್ ಸೇರಿದಂತೆ ಉಪಕರಣಗಳನ್ನ ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಗಡಿ ಭಾಗದಲ್ಲಿ ತಿರುಮಲ ಹಾಲಿನ ಡೈರಿಗೆ ಹಾಲು ಸರಬರಾಜು ಮಾಡುತ್ತಿದ್ದ ನರೇಶ್ ರೆಡ್ಡಿ ಎಂಬವರಿಗೆ ಸೇರಿದ ಘಟಕದಲ್ಲಿ ಕೆಮಿಕಲ್ ಹಾಲು ತಯಾರಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿತ್ತು. ಅದರಂತೆ ಮುಳಬಾಗಿಲು ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿತ್ತು.
ಅಲ್ಲದೇ ಕೆಮಿಕಲ್ ಹಾಲಿನ ಮಾದರಿಯನ್ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಲ್ಯಾಬ್ ವರದಿಯಲ್ಲಿ ಕೆಮಿಕಲ್ ಹಾಲಿನ ಮಾದರಿಯಲ್ಲಿ ಅಸುರಕ್ಷಿತ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದೆ. ಇನ್ನೂ ನಂಗಲಿ ಪೊಲೀಸ್ ಠಾಣೆಯಲ್ಲಿ ಆಹಾರ ಸುರಕ್ಷಿತ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ನರೇಶ್ ರೆಡ್ಡಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
