Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಸುರಕ್ಷಿತ ಔಷಧ ಪಟ್ಟಿ ಬಿಡುಗಡೆ – ಆರೋಗ್ಯ ಇಲಾಖೆ ಎಚ್ಚರಿಕೆ, 15 ಔಷಧಗಳ ಬಳಕೆ ನಿಷೇಧ

Spread the love

ಬೆಂಗಳೂರು: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿದೆ. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ. ಅಸುರಕ್ಷಿತ ಔಷಧಿ ಮತ್ತು ಕಾಂತಿವರ್ಧಕಗಳ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಯಾವೆಲ್ಲ ಔಷಧಿಗಳು ಅಸುರಕ್ಷಿತ

  1. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್​ ಪ್ರೈ. ಲಿಮಿಟೆಡ್​.
  2. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ – ಮೇ. ಟಾಮ್​ ಬ್ರಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  3. ಪೋಮೋಲ್​-650 (ಪ್ಯಾರಾಸಿಟಮೋಲ್​ ಟ್ಯಾಬ್ಲೆಟಸ್​ ಐ.ಪಿ 650 ಎಂಜಿ)- ಮೇ. ಅಬಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್.
  4. ಮಿಟು ಕ್ಯೂ7 ಸಿರಪ್​ – ಮೆ. ಬಯೋನ್​ ಥೆರಾಪ್ಯಾಟಿಕ್ಸ್​ ಇಂಡಿಯಾ ಪ್ರೈ. ಲಿಮಿಟೆಡ್​
  5. ಸ್ಟೈರಲ್​ ಡಿಲ್ಯೈಯಂಟ್​ ಪಾರ್ ರೆಕಾನೋಸ್ಟಿಟಿಶ್ಯೂನ್​ ಆಪ್​ ಎನ್​ಡಿ, ಐಬಿ, ಐಬಿಡಿ ಆ್ಯಂಡ್​ ಕಾಂಬಿನೇಷನ್​ ವ್ಯಾಕ್ಸಿನ್ಸ್​ ಫಾರ್​ ಪೌಲ್ಟ್ರೀ (ವೆಟರ್​ನರಿ) ಮಲ್ಟಿ ಡೋಸ್​ ವಿಲಾ 200 ಎಂಲ್​ – ಮೇ. ಸೇಫ್​ ಪೇರೆಂಟರಲ್ಸ್​ ಪ್ರೈ. ಲಿಮಿಟೆಡ್.
  6. ಸ್ಪಾನ್​ಪ್ಲಾಕ್ಸ್​-ಓಡ್​ ಟ್ಯಾಬ್ಲೆಟ್ಸ್​ (ಓಪ್ಲಾಕ್ಸಸಿನ್​ & ಓರ್ನಿಡಜೋಲ್ ಟ್ಯಾಬ್ಲೆಟ್ಸ್​ ಐಪಿ) – ಮೆ. ಇಂಡೋರಾಮ ಹೇಲ್ತ್​ ಕೇಸ್​ ಪ್ರೈ ಲಿಮಿಟಿಡ್​.
  1. ಪ್ಯಾಂಟೋಕೋಟ್​-ಡಿಎಸ್​ಆರ್​ (ಪ್ಯಾಂಟೋಫ್ರಜೋಲ್​ ಗ್ಯಾಸ್ಟ್ರೋ-ರಿಜಿಸ್ಟೆಂಟ್​ & ಡೋಮ್​ಫೆರಿಡನ್​ ಪ್ರೋಕಾಂಗಡ್​ ರಿಲಿಸ್​​ ಕ್ಯಾಪ್ಸೂಲ್ಸ್​ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  2. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​
  3. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​.
  4. ಅಲ್ಪಾ ಲಿಪೋಯಿಕ್​ ಆಸಿಡ್​, ಪೋಲಿಕ್​ ಆಸಿಡ್​, ಮಿಥೈಲ್​ ಕೋಬಾಲಮಿನ್, ವಿಟಮಿನ್​ ಬಿ6 & ವಿಟಮಿನ್​ ಡಿ3ಟ್ಯಾಬ್ಲೆಟ್ಸ್​ – ಮೇ. ಇಸ್ಟ್​ ಆಪ್ರಿಕನ್​ (ಇಂಡಿಯಾ) ಓವರ್​ಸಿಸ್​.
  5. ಓ ಶಾಂತಿ ಗೋಲ್ಡ್ ಕ್ಲಾಸ್​ ಕುಂಕುಮ್​ – ಮೇ. ಎನ್​. ರಂಗರಾವ್​ & ಸನ್ಸ್​ ಪ್ರೈ ಲಿಮಿಟೆಡ್​.
  6. ಪಿರಾಸಿಡ್​-ಓ ಸಸ್​ಪೆನ್​ಶನ್​ (ಸಲ್ಕ್ರಾಲ್ಫೇಟ್​ & ಆಕ್ಸೆಟಾಕೈನ್​ ಸಸ್​ಪೆನ್​ಶನ್​) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್​ ಪ್ರೈ ಲಿಮಿಟೆಡ್​.
  7. ಗ್ಲಿಮಿಜ್​-2 (ಗ್ಲಿಮಿಫೆರೈಡ್​ ಟ್ಯಾಬ್ಲೆಟ್ಸ್​ ಐಪಿ 2ಎಂಜಿ) – ಮೆ. ಕೆಎನ್​ಎಂ ಫಾರ್ಮಾ ಪ್ರೈ. ಲಿಮಿಟೆಡ್​.
  8. ಐರನ್​ ಸುಕ್ರೋಸ್​ ಇನ್​ಜೆಕ್ಷನ್​ ಯುಎಸ್​ಪಿ 100ಎಂಜಿ (ಐರೋಗೈನ್​) – ಮೆ. ರೀಗೈನ್​ ಲ್ಯಾಬೋರೇಟರಿಸ್​
  9. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್​ ಪಾರ್​ ಇನ್​ಜೆಕ್ಷನ್​ ಆರ್​ಎಲ್​ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್​ ಇಂಡಿಯಾ

ಈ ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಂನವರು ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ


Spread the love
Share:

administrator

Leave a Reply

Your email address will not be published. Required fields are marked *