Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಉನ್ನಿಕೃಷ್ಣನ್ ನನಗೆ ಚಿನ್ನ ಕೊಟ್ಟಿದ್ದು ನಿಜ’ – ಬಳ್ಳಾರಿ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್ ಸತ್ಯ ಒಪ್ಪಿಗೆ!

Spread the love

ಬಳ್ಳಾರಿ: ಆರೋಪಿ ಉನ್ನಿಕೃಷ್ಣನ್ ನನಗೆ ಚಿನ್ನ ಕೊಟ್ಟಿದ್ದು ನಿಜ ಎಂದು ಬಳ್ಳಾರಿಯ (Ballari) ರೊದ್ದಂ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್ ಸತ್ಯ ಒಪ್ಪಿಕೊಂಡಿದ್ದಾರೆ.

ಶಬರಿಮಲೆಯ ಚಿನ್ನ (Sabarimala Gold Theft Case) ಬಳ್ಳಾರಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಗೋವರ್ಧನ್, ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶಿಥಿಲವಾಗಿದೆ, ದೇವಸ್ಥಾನದ ಒಳಗೆ ಸರ್ಪಗಳು ಹೋಗುತ್ತಿವೆ ಅಂತಾ ಉನ್ನಿಕೃಷ್ಣನ್ ಹೇಳಿದ್ದರು. ಬಾಗಿಲನ್ನ ದೇಣಿಗೆ ರೀತಿ ನೀಡಿ ಎಂದು ಉನ್ನಿಕೃಷ್ಣನ್ ನನ್ನ ಬಳಿ ಕೇಳಿದ್ದರು. ಅಯ್ಯಪ್ಪ ಸ್ವಾಮಿ ಭಕ್ತ ಆಗಿದ್ದರಿಂದ ನಾನು ಒಪ್ಪಿಕೊಂಡೆ. ಕೇರಳದಲ್ಲಿ ಕಟ್ಟಿಗೆ ಖರೀದಿ ಮಾಡಿ, ಬೆಂಗಳೂರಿನ ಶ್ರೀರಾಂಪುರ ಐಯಪ್ಪ ಸ್ವಾಮಿ ದೇಗುಲದಲ್ಲಿ ಬಾಗಿಲು ನಿರ್ಮಾಣ ಮಾಡಿದ್ದೆವು. ಅಲ್ಲಿಂದ ಬಳ್ಳಾರಿಗೆ ಕಟ್ಟಿಗೆ ಬಾಗಿಲು ತಂದು ಅದಕ್ಕೆ ಚಿನ್ನದ ಲೇಪನ ಮಾಡಿ ಕೊಟ್ಟಿದ್ದೇವೆ. 2019ರಲ್ಲಿ ಬಾಗಿಲನ್ನ ನಿರ್ಮಾಣ ಮಾಡಿಕೊಟ್ಟಿದ್ದು ನಿಜ. ದ್ವಾರಪಾಲಕದ ಬಗ್ಗೆ 4 ಕೆಜಿ ಚಿನ್ನ ಕಡಿಮೆ ತೂಕ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. 

ಎಸ್‌ಐಟಿ (SIT) ಅಧಿಕಾರಿಗಳು ತನಿಖೆ ಮಾಡಿದ್ದು ಸತ್ಯ, ಅವರ ತನಿಖೆಗೆ ಸಹಕಾರ ನೀಡುತ್ತೇವೆ. ನಾನು ಅಯ್ಯಪ್ಪ ಸ್ವಾಮಿ ಭಕ್ತ, ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತದೆ. ಎಸ್‌ಐಟಿ ಅಧಿಕಾರಿಗಳು ನಿನ್ನೆ ಬಳ್ಳಾರಿಗೆ ಬಂದಿದ್ದರು. ನಮ್ಮ ಜ್ಯುವೆಲ್ಲರಿ ಶಾಪ್‌ನಲ್ಲಿ ತನಿಖೆ ಮಾಡಿ ವಿಚಾರಣೆ ಮಾಡಿದರು. 476 ಗ್ರಾಂ ಚಿನ್ನದ ಆರೋಪ ನನ್ನ ಮೇಲೆ ಇದೆ. ಅದು ತನಿಖೆ ನಡಿಯುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೇಳಲು ಆಗಲ್ಲ. ಉನ್ನಿಕೃಷ್ಣನ್ ಅವರಿಂದಲೇ ಬಾಗಿಲು ನಿರ್ಮಾಣಕ್ಕೆ ಆರ್ಡರ್ ಬಂದಿತ್ತು. ಉಳಿದ ವಿಚಾರ ತನಿಖೆ ನಡೆಯುತ್ತಿದೆ, ತನಿಖೆಗೆ ನಾನು ಸಹಕರಿಸುತ್ತೇನೆ ಎಂದು ತಿಳಿಸಿದರು. 

ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಈಗ ಕರ್ನಾಟಕದ ಬೆಂಗಳೂರು, ಬಳ್ಳಾರಿಯ ಲಿಂಕ್ ಸಿಕ್ಕಿದೆ. ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಯನ್ನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಇರಿಸಿ ಈತ ದೇಣಿಗೆ ಸಂಗ್ರಹಿಸಿದ್ದ ಎಂಬ ಆರೋಪವೂ ಇದೆ. ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತರಲಾಗಿದೆ. ಅಲ್ಲದೇ ಕದ್ದ ಚಿನ್ನವನ್ನ ಬಳ್ಳಾರಿಯಲ್ಲಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆ ಬಳ್ಳಾರಿಯಲ್ಲು ತಪಾಸಣೆ ನಡೆಸಿದ್ದು, ಒಂದಿಷ್ಟು ಚಿನ್ನವನ್ನ ರಿಕವರಿ ಮಾಡಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ ಇಬ್ಬರು ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ಬಂದು ದಾಖಲೆ ಕಲೆ ಹಾಕಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *