Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ವಿಭಿನ್ನ ಪ್ರಸಾದಗಳು: ವೈನ್, ನೂಡಲ್ಸ್, ಮತ್ತು ಸಿಡಿಗಳನ್ನು ಪ್ರಸಾದವಾಗಿ ನೀಡುವ ದೇವಾಲಯಗಳು

Spread the love

ಭಾರತದ ಈ ದೇವಾಲಯಗಳಲ್ಲಿ ಭಕ್ತರಿಗೆ ಸಿಡಿ, ಡಿವಿಡಿ, ಪುಸ್ತಕ, ಮೀನು, ನೂಡಲ್ಸ್‌, ಫ್ರೈಡ್ ರೈಸ್‌, ವೈನ್‌ನಂತಹ ಪ್ರಸಾದ ನೀಡಲಾಗುತ್ತದೆ. ಅಷ್ಟಕ್ಕೂ ಅಂತಹ ದೇವಾಲಯಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ. ‘

ಭಾರತೀಯ ದೇವಾಲಯಗಳು ಎಷ್ಟು ಜನಪ್ರಿಯವೋ, ಅವುಗಳ ಪ್ರಸಾದಗಳು ಅಷ್ಟೇ ಜನಪ್ರಿಯವಾಗಿವೆ

ಕೆಲವು ದೇವಾಲಯಗಳ ಪ್ರಸಾದ ಎಂದರೆ ಜನರು ತಮಗಾಗಿ ಅಲ್ಲಿಂದ ತರಲು ಕೇಳುತ್ತಾರೆ. ಅಂತಹ ಪ್ರಸಾದಗಳಲ್ಲಿ ತಿರುಪತಿ ಲಡ್ಡು ಕೂಡ ಒಂದು. ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿ ಆಲಯದಲ್ಲಿ ನೀಡುವ ಈ ಲಡ್ಡು ಲಕ್ಷಾಂತರ ಮಂದಿ ಭಕ್ತರಿಗೆ ಅಲ್ಲದೆ, ವಿದೇಶಿಗರಿಗೂ ಫೇವರೆಟ್‌ ಆಗಿದೆ.

ಭಾರತದ ಪ್ರತಿಯೊಂದು ದೇವಾಲಯವು ಭಗವಂತನಿಗೆ ವಿಶೇಷ ಅರ್ಪಣೆಯನ್ನು ಪ್ರಸಾದದ ರೂಪದಲ್ಲಿ ಸಲ್ಲಿಸಲಾಗುತ್ತದೆ. ಒಂದೊಂದು ದೇವಾಲಯಗಳು ಒಂದೊಂದು ಬಗೆಯ ಪ್ರಸಾದಗಳಿಗೆ ಹೆಸರುವಾಸಿಯಾಗಿದೆ. ನಾವು ಈ ಲೇಖನದಲ್ಲಿ ಭಾರತದ ಕೆಲವು ದೇವಾಲಯಗಳು ದೇವರಿಗೆ ಅರ್ಪಿಸುವ ವಿಚಿತ್ರ ಪ್ರಸಾದಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

ಶ್ರೀ ಬಂಕೆ ಬಿಹಾರಿ, ವೃಂದಾವನ

ವೃಂದಾವನದಲ್ಲಿರುವ ಅತ್ಯಂತ ಪ್ರಸಿದ್ಧ ಶ್ರೀ ಕೃಷ್ಣನಿಗೆ ಅರ್ಪಿತವಾದ ದೇವಾಲಯವೆಂದರೆ ಅದು ಶ್ರೀ ಬಂಕೆ ಬಿಹಾರಿ ಮಂದಿರ. ಈ ದೇವಾಲಯದಲ್ಲಿ ಶುದ್ಧ ಹಸುವಿನ ಹಾಲಿನಿಂದ ತಯಾರಿಸಿದ ಪೇಡಾವನ್ನು ದೇವರಿಗೆ ಪ್ರಸಾದವಾಗಿ ಸಮರ್ಪಿಸುತ್ತಾರೆ.

ಇಲ್ಲಿ ಶ್ರೀಕೃಷ್ಣನಿಗೆ ನೈವೇದ್ಯವಾಗಿ ಇರುವ ಪ್ರಸಾದವನ್ನು ಮೊದಲ ಭೋಗ್ ಎನ್ನುತ್ತಾರೆ. ಇದನ್ನು ‘ಬಾಲ್ ಭೋಗ್’ ಎಂದು ಕರೆಯಲಾಗುತ್ತದೆ. ಅದರಲ್ಲಿ ಕಚೋರಿ, ಸುಖಿ ಆಲೂ ಕಿ ಸಬ್ಜಿ ಮತ್ತು ಬೇಸನ್ ಲಡ್ಡೂಗಳನ್ನು ದೇವರಿಗೆ ಪ್ರಸಾದದ ರೂಪದಲ್ಲಿ ನೈವೇದ್ಯ ಮಾಡಲಾಗುತ್ತದೆ.

ಬೈದ್ಯನಾಥ ದೇವಸ್ಥಾನ, ದಿಯೋಘರ್

ದಿಯೋಘರ್‌ನಲ್ಲಿರುವ ಈ ಬೈದ್ಯನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ಆಲಯಗಳಲ್ಲಿ ಒಂದಾಗಿದೆ. ಈ ಅಲಯದಲ್ಲಿ ದೇವರಿಗೆ ಪ್ರಸಾದವಾಗಿ ಚಪ್ಪಟೆಯಾದ ಅಕ್ಕಿ, ಏಲಕ್ಕಿ ಮತ್ತು ಪೇಡಾಗಳ ಮಿಶ್ರಣವನ್ನು ಇಡಲಾಗುತ್ತದೆ. ಈ ದಿಯೋಘರ್ ನಗರವು ಏಲಕ್ಕಿ, ಕೇಸರ್ ಮತ್ತು ಬೀಜಗಳಿಂದ ತಯಾರಿಸಲ್ಪಟ್ಟ ವಿವಿಧ ರೀತಿಯ ಪೇಡಾಗಳಿಗೆ ಬಹಳ ಜನಪ್ರಿಯವಾಗಿದೆ.

ಜಗನ್ನಾಥ ದೇವಸ್ಥಾನ, ಪುರಿ
ಪುರಿ ಜಗನ್ನಾಥ ದೇವಾಲಯದ ಪ್ರಸಾದವನ್ನು ವಿಶೇಷವಾಗಿ ‘ಮಹಾಪ್ರಸಾದ’ ಎಂದೇ ಕರೆಯುತ್ತಾರೆ. ಜಗನ್ನಾಥನಿಗೆ 56 ಆಹಾರ ಪದಾರ್ಥಗಳನ್ನು ಪ್ರಸಾದದ ರೂಪದಲ್ಲಿ ಅರ್ಪಿಸಲಾಗುತ್ತದೆ. ಈ ಕಾರಣದಿಂದಲೇ ಇದನ್ನು ಮಹಾಪ್ರಸಾದ ಎಂದು ಕರೆಯಲಾಗುತ್ತದೆ. ಒಂದನ್ನು ಸಂಕುಡಿ ಮಹಾಪ್ರಸಾದ ಎಂದು ಕರೆದರೆ, ಇನ್ನೊಂದನ್ನು ಸುಖಿಲಾ ಮಹಾಪ್ರಸಾದ ಎಂದು ಕರೆಯಲಾಗುತ್ತದೆ. ಸಂಕುಡಿ ಮಹಾಪ್ರಸಾದವು ಖಾರವಾಗಿರುವ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ಸುಖಿಲಾ ಮಹಾಪ್ರಸಾದದಲ್ಲಿ ಸಿಹಿಯಾದ ಭಕ್ಷ್ಯಗಳು ಇರುತ್ತವೆ.

ಖಬೀಸ್ ಬಾಬಾ ದೇವಸ್ಥಾನ, ಸೀತಾಪುರ
ಸೀತಾಪುರ ಜಿಲ್ಲೆಯಲ್ಲಿರುವ ಖಬೀಸ್‌ ಬಾಬಾ ದೇವಸ್ಥಾನವು ಉತ್ತರಪ್ರದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ಆಲಯದ ವಿಚಿತ್ರ ಏನೆಂದರೆ, ಇಲ್ಲಿ ದೇವರನ್ನು ಆರಾಧಿಸಲು ಯಾವುದೇ ಅರ್ಚಕ ಇಲ್ಲ. ದೇವರಿಗೆ ಪ್ರಸಾದದ ರೂಪದಲ್ಲಿ ಮದ್ಯವನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ, 150 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಸಂತನಿಗೆ ಮದ್ಯವನ್ನು ಅರ್ಪಿಸಲಾಗುತ್ತಿತ್ತು. ಮತ್ತು ಸಂತನಿಗೆ ಮದ್ಯವನ್ನು ಅರ್ಪಿಸಿದ ನಂತರ, ಭಕ್ತರು ಅದರಲ್ಲಿ ಸ್ವಲ್ಪ ಭಾಗವನ್ನು ಪ್ರಸಾದವಾಗಿ ಸ್ವೀಕರಿಸುತ್ತಿದ್ದರು.

ಚೈನೀಸ್ ಕಾಳಿ ದೇವಸ್ಥಾನ, ಕೋಲ್ಕತ್ತಾ
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅತ್ಯಂತ ಪ್ರಸಿದ್ಧ ಚೈನೀಸ್‌ ಕಾಳಿ ದೇವಾಲಯವಿದೆ. ಈ ಆಲಯದ ತಾಯಿಯನ್ನು ‘ಮಾ ಕಾಳಿ’ ಎಂದೇ ಭಕ್ತರು ಕರೆಯುತ್ತಾರೆ, ಈಕೆಗೆ ನೈವೇದ್ಯವಾಗಿ ಏನೆಲ್ಲಾ ನೀಡ್ತಾರೆ ಗೊತ್ತಾ? ನೂಡಲ್ಸ್, ಚಾಪ್ ಸೂಯಿ ಮತ್ತು ಫ್ರೈಡ್ ರೈಸ್‌!

ಏನು ಕಾಳಿಗೆ ಚೈನೀಸ್‌ ಆಹಾರ ನೀಡ್ತಾರೆಯೇ? ಎಂದು ನೀವು ಕೇಳುತ್ತಿದ್ದರೆ ಹೌದು, ಈ ತಾಯಿಗೆ ಇಂತಹ ನೈವೇದ್ಯವನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ, ಒಬ್ಬ ಚೀನೀ ವಲಸಿಗ ಕಾಳಿಯ ಕನಸನ್ನು ಕಂಡ ನಂತರ ಈ ಆಲಯವನ್ನು ನಿರ್ಮಿಸಿದನು. ನಂತರ ಈ ರೀತಿಯ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ.

ಪರಸ್ಸಿನಿಕಡವು ದೇವಸ್ಥಾನ, ಕಣ್ಣೂರು
ಕೇರಳ ರಾಜ್ಯದ ಕಣ್ಣೂರಿನ ಈ ಪರಸ್ಸಿನಿಕಡವು ದೇವಸ್ಥಾನದಲ್ಲಿ ನೈವೇದ್ಯವಾಗಿ ಮೀನು, ಸೇಂದಿ ಮತ್ತು ಮದ್ಯದ ಬಾಟಲಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಈ ನೈವೇದ್ಯವು ವಿಶ್ವಪ್ರಸಿದ್ಧವಾಗಿದೆ. ದೈನಂದಿನ ಪೂಜೆಯ ನಂತರ, ಈ ಎಲ್ಲಾ ಆಹಾರಗಳನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.

ಮಹಾದೇವ ದೇವಸ್ಥಾನ, ತ್ರಿಶೂರ್
ಕೇರಳ ರಾಜ್ಯದ ತ್ರಿಶೂರ್‌ನಲ್ಲಿರುವ ಈ ಮಹಾದೇವ ದೇವಸ್ಥಾನದಲ್ಲಿ ಭಕ್ತರಿಗೆ ಸಿಡಿಗಳು, ಡಿವಿಡಿಗಳು, ಪಠ್ಯಪುಸ್ತಕಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಕಾಲ ಭೈರವ, ವಾರಣಾಸಿ

ವಾರಣಾಸಿ ಅಥವಾ ಕಾಶಿಯಲ್ಲಿ ಅತ್ಯಂತ ಹಳೆಯ ಶಿವ ದೇವಾಲಯವಿದೆ. ಅದು ಮತ್ಯಾವುದೂ ಅಲ್ಲ, ಕಾಲ ಭೈರವ ಆಲಯವಾಗಿದೆ. ಇಲ್ಲಿ ಬರುವ ಭಕ್ತರಿಗೆ ಸ್ವಲ್ಪ ಡಿಫ್‌ರೆಂಟ್‌ ಆಗಿ ವೈನ್‌ ಅನ್ನು ನೀಡಲಾಗುತ್ತದೆ. ಇದಲ್ಲದೆ, ದೇವರಿಗೂ ವೈನ್‌ ಅನ್ನು ಸಮರ್ಪಿಸುತ್ತಾರೆ. ಒಟ್ಟಾರೆ ಭಾರತದ ಮೋಸ್ಟ್ ಡಿಫ್‌ರೆಂಟ್‌ ಪ್ರಸಾದಗಳಲ್ಲಿ ಇದು ಒಂದಾಗಿದೆ


Spread the love
Share:

administrator

Leave a Reply

Your email address will not be published. Required fields are marked *