Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು ಟ್ರಾಫಿಕ್ ತಗ್ಗಿಸಲು SRWA ನಿವಾಸಿಗಳ ವಿಶಿಷ್ಟ ಉಪಾಯ

Spread the love

ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾದರೂ ಹೋಗಬೇಕಾದ್ರೆ ಟ್ರಾಫಿಕ್ ಭಯ. ಅದರಲ್ಲೂ ಮಳೆ ಶುರುವಾದ್ರೆ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳು 1 ಕಿಮೀ ಚಲಿಸಬೇಕಾದ್ರೆ ಕನಿಷ್ಠ 1 ಗಂಟೆಯಾದ್ರು ಬೇಕಾಗುತ್ತದೆ. SRWA ಹೆಸರಿನ ಗ್ರೂಪ್ ಬೆಂಗಳೂರಿನ ಟ್ರಾಫಿಕ್ (Bengaluru Traffic) ಸಮಸ್ಯೆಗೆ ಉಪಾಯವನ್ನು ಕಂಡುಕೊಂಡಿದ್ದಾರೆ.

ಸರ್ಜಾಪುರದ SRWA ನಿವಾಸಿಗಳು ಪಿಂಗ್, ಸಿಂಕ್ ಆಂಡ್ ರೈಡ್ ಎಂಬ ಮಂತ್ರವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಟ್ರಾಫಿಕ್ ನಿಯಂತ್ರಣಕ್ಕಾಗಿ (Traffic Control) ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ. ಸಾರ್ವಜನಿಕ ಸಾರಿಗೆ ಬದಲಾಗಿ ಸರ್ಜಾಪುರ ನಿವಾಸಿಗಳು ತಮ್ಮದೇ ಸ್ವಂತ ವಾಹನಗಳಲ್ಲಿ ಇತರರನ್ನು ಕರೆದುಕೊಂಡು ಹೋಗುತ್ತಾರೆ. ಇದಕ್ಕಾಗಿ Sarjapur Residents’ Welfare Association (SRWA) ಎಂಬ ಗ್ರೂಪ್ ಕಟ್ಟಿಕೊಂಡಿದ್ದಾರೆ.

SRWA ಗ್ರೂಪ್‌ ಅಡಿಯಲ್ಲಿ 125 ಅಪಾರ್ಟ್‌ಮೆಂಟ್‌ ಮತ್ತು ವಿಲ್ಲಾ ನಿವಾಸಿಗಳಿದ್ದಾರೆ. SRWA ಸದಸ್ಯರೆಲ್ಲರೂ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದು, ಇದರಿಂದಾಗಿ ಉಚಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯಾವುದೇ ಅಡೆತಡೆಗಳಿಲ್ಲದೇ ಉಚಿತವಾಗಿ ಪ್ರಯಾಣಿಸುತ್ತಾರೆ. ಅದು ಹೇಗೆ ಎಂದು ನೋಡೋಣ ಬನ್ನಿ.

ಹೇಗೆ ಕೆಲಸ ಮಾಡುತ್ತೆ ಈ ಗ್ರೂಪ್?

SRWA ಗ್ರೂಪ್‌ನ ಸದಸ್ಯರು ತಮ್ಮ ಸ್ವಂತ ವೆಹಿಕಲ್‌ನಲ್ಲಿ ಹೊರಟಿದ್ದರೆ ಸಮಯ, ಮಾರ್ಗ ಮತ್ತು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇದೇ ವೇಳೆ ಈ ಮಾರ್ಗದಿಂದ ತೆರಳುತ್ತಿರೋರು ಮೆಸೇಜ್ ಹಾಕಿದವರನ್ನು ಸಂಪರ್ಕಿಸಬಹುದು. ಇದೆಲ್ಲದರ ಪರಿಣಾಮ ರಸ್ತೆಗೆ ಕಡಿಮೆ ವಾಹನಗಳು ಇಳಿಯುತ್ತವೆ. ಇದರಿಂದ ಟ್ರಾಫಿಕ್ ದಟ್ಟಣೆ ಕಡಿಮೆಯಾಗುತ್ತದೆ.

ಟ್ರಾಫಿಕ್ ದಟ್ಟಣೆ ನಿಯಂತ್ರಣ

ಈ ಕುರಿತು ಮಾತನಾಡಿರುವ SRWA ಗ್ರೂಪ್‌ ಸದಸ್ಯ ಕೃಷ್ಣ ಕುಮಾರ್, ಸರ್ಜಾಪುರ ಮತ್ತು ಬೆಳ್ಳಂದೂರು ಮಾರ್ಗದಲ್ಲಿ ಪ್ರಯಾಣದ ಆಫರ್ ಇದ್ರೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಇದರಿಂದ ಒಂದೇ ಮಾರ್ಗದಲ್ಲಿ ಹೋಗುವ 4 ಕಾರ್ ಬದಲಾಗಿ 1 ಕಾರ್ ಹೋಗುತ್ತದೆ. ಇದರಿಂದ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಿದಂತಾಗುತ್ತದೆ. ಒಂದೇ ಭಾಗದಲ್ಲಿ ವಾಸಿಸುವ ಜನರು ಈ ಗ್ರೂಪ್‌ನ ಸದಸ್ಯರಾಗಿರೋ ಕಾರಣ ನಮ್ಮ ನಡುವೆ ಉತ್ತಮ ಒಡನಾಟವೂ ಬೆಳೆಯುತ್ತದೆ. ಈ ಉಪಾಯ ನಮಗೆ ತುಂಬಾ ಸಹಾಯವಾಗಿದೆ ಎಂದು ಹೇಳುತ್ತಾರೆ.

42 ವರ್ಷದ ಎಂ.ಚಿಂತಿಯಾ ಮಾತನಾಡಿ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಒಬ್ಬರೇ ಇದ್ರೆ ಬೇಜಾರು ಆಗುತ್ತದೆ. ಅದೇ ಜೊತೆಯಲ್ಲಿ ಯಾರಾದ್ರು ಇದ್ರೆ ಸಮಯ ಕಳೆಯೋದು ಗೊತ್ತಾಗಲ್ಲ. ಈ ಗ್ರೂಪ್‌ನಿಂದಾಗಿ ಒಂಟಿಯಾಗಿ ಪ್ರಯಾಣ ಮಾಡೋದು ತಪ್ಪಲಿದೆ. ಇದರಿಂದ ಪೆಟ್ರೋಲ್ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಪರಿಸರ ದೃಷ್ಟಿಯಲ್ಲಿಯೂ ಇದು ಒಳ್ಳೆಯ ಬೆಳವಣಿಗೆ ಎಂದು ಹೇಳುತ್ತಾರೆ.

ಈ ಗ್ರೂಪ್ ಹುಟ್ಟಿಕೊಂಡಿದ್ದು ಹೇಗೆ?

SRWA ಕಾರ್ಯದರ್ಶಿಯಾಗಿರುವ ಜಾಯ್ ವಿಆರ್ ಅವರ ಸಾಮಾಜಿಕ ಕಳಕಳಿಯಿಂದಾಗಿ ಈ ಗ್ರೂಪ್ ಹುಟ್ಟಿಕೊಂಡಿದೆ. ಸರ್ಜಾಪುರ ಸುತ್ತಲೂ ಹೆಚ್ಚಿನ ವಾಹನದಟ್ಟಣೆ ಇರೋದನ್ನು ಗಮನಿಸಿದ ಜಾಯ್, ವಾಟ್ಸಪ್ ಗ್ರೂಪ್ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ. ಒಂದೇ ಕಾರ್‌ನಲ್ಲಿ ಒಬ್ಬರೇ ಹೋಗುವುದಕ್ಕಿಂತ ಖಾಲಿ ಆಸನಗಳಲ್ಲಿ ಪರಿಚಯವಿರೋರನ್ನು ಕರೆದುಕೊಂಡು ಹೋಗುವುದರಿಂದ ಸಮಾಜದ ಸ್ವಾಸ್ತ್ಯ ಸಹ ಬೆಳವಣಿಗೆಯಾಗುತ್ತದೆ. ಬೈಕ್ ಟ್ಯಾಕ್ಸಿಗಳು ಮತ್ತು ಅಗ್ರಿಗೇಟರ್ ಕಾರ್‌ಪೂಲಿಂಗ್ ಮೇಲಿನ ನಿರ್ಬಂಧಗಳಿಂದ ನಂತರ ಈ ಗ್ರೂಪ್ ಹುಟ್ಟಿಕೊಂಡಿದೆ. ನಾವು ಪರಸ್ಪರ ಸಹಾಯ ಮಾಡಲು ನಮ್ಮದೇ ಆದ WhatsApp ನೆಟ್‌ವರ್ಕ್ ನಿರ್ಮಿಸಿಕೊಂಡಿದ್ದೇವೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಇದು ಒಳ್ಳೆಯ ಕ್ರಮ ಎಂದು ಜಾಯ್ ವಿಆರ್ ಹೇಳುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *