ಅಕ್ಕನ ಮಗನ ಹಣ ಕಾಟಕ್ಕೆ ಬೇಸತ್ತ ಮಾವ: ಆನ್‌ಲೈನ್ ಗೇಮ್ ವ್ಯಸನದ ಬಾಲಕನ ಹ*ತ್ಯೆ

ಬೆಂಗಳೂರು: ಆನ್‌ಲೈನ್ ಗೇಮ್ ಆಡಲು ಹಣ ನೀಡುವಂತೆ ಕಾಟ ಕೊಡುತ್ತಿದ್ದ ಅಕ್ಕನ ಮಗನನ್ನೇ ಮಾವ ಕೊಲೆ ಮಾಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.

ಅಮೋಘ ಕೀರ್ತಿ (14) ಕೊಲೆಯಾದ ಬಾಲಕ. ನಾಗಪ್ರಸಾದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.ಕೊಲೆಯಾದ ಬಾಲಕನು ನಾಗಪ್ರಸಾದ್‌ನ ಸಹೋದರಿಯ ಮಗನಾಗಿದ್ದ. ಮೃತ ಬಾಲಕ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಆತ ಫ್ರೀಫೈರ್ ಆನ್‌ಲೈನ್ ಗೇಮಿಂಗ್‌ನ ಚಟಕ್ಕೆ ಬಿದ್ದು, ನಿತ್ಯ ಹಣ ಕೊಡುವಂತೆ ಮಾವ ನಾಗಪ್ರಸಾದ್‌ಗೆ ಕಾಟ ಕೊಡುತ್ತಿದ್ದ. ಬಾಲಕನ ಕಾಟಕ್ಕೆ ನಾಗಪ್ರಸಾದ್ ರೋಸಿಹೋಗಿದ್ದ.
ಒಂದು ವಾರದ ಹಿಂದೆ ಮಾವ ನಾಗಪ್ರಸಾದ್ ಬಳಿ ಹಣ ಕೊಡುವಂತೆ ಹೇಳಿ ಬಾಲಕ ಹಲ್ಲೆ ನಡೆಸಿದ್ದ. ಇದರಿಂದ ಮನನೊಂದಿದ್ದ ನಾಗಪ್ರಸಾದ್ ಸೋಮವಾರ ಮುಂಜಾನೆ 4:30ರ ಸುಮಾರಿಗೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ್ದ.
ಇದೀಗ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಿದ್ದಾರೆ.
