Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಮಹಿಳೆಯರ ಅನಧಿಕೃತ ವಿಡಿಯೋ ರೆಕಾರ್ಡಿಂಗ್: ‘ಸ್ಟ್ರೀಟ್‌ ಡಿಸಾರ್ಡರ್‌’ ರೀಲ್ಸ್‌ ಮಾಡುವವನ ಬಂಧನ!

Spread the love

ಬೆಂಗಳೂರು :ಅನುಮತಿ ಇಲ್ಲದೇ ಬೆಂಗಳೂರು ಬೀದಿಗಳಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುವ ಬಗ್ಗೆ ಯುವತಿಯೊಬ್ಬಳು ಧ್ವನಿ ಎತ್ತಿದ ಕೂಡಲೇ 26 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರಿನ ಪ್ರತಿಷ್ಠಿತ ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ನಗರದ ಇತರೆ ಭಾಗಗಳಲ್ಲಿ ಯುವತಿಯರು ನಡೆದಾಡುವುದನ್ನು ಅವರ ಅನುಮತಿಯಿಲ್ಲದೇ ವಿಡಿಯೋ ಮಾಡಿ, ಅದನ್ನು ರೀಲ್ಸ್ ರೂಪದಲ್ಲಿ ಹರಿಬಿಡುತ್ತಿರುವ ಬಗ್ಗೆ ಧ್ವನಿಯೇರಿಸಿ, ಕ್ರಮ ಕೈಗೊಳ್ಳಬೇಕೆಂದು ಯುವತಿಯೊಬ್ಬಳು ತನ್ನ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಳು. ಇದಾದ ಕೆಲವೇ ಸಮಯದಲ್ಲಿ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಶಂಕಿತನನ್ನು ಗುರುದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ನಿರುದ್ಯೋಗಿಯಾಗಿರುವ ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರನನ್ನು ಬೆಂಗಳೂರಿನ ಕೆ.ಆರ್. ಪುರಂ ಪ್ರದೇಶದಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿದೆ. ಗುರುದೀಪ್ ತಮ್ಮ ಸಹೋದರನೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಪ್ರಶ್ನೆಯಲ್ಲಿರುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಂಗಳೂರಿನ ಮಧ್ಯಭಾಗದಲ್ಲಿರುವ ಜನಪ್ರಿಯ ವಾಣಿಜ್ಯ ಮತ್ತು ಪಾದಚಾರಿ ಪ್ರದೇಶವಾದ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಾಥಮಿಕವಾಗಿ ಚಿತ್ರೀಕರಿಸಲಾದ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡುತ್ತಿತ್ತು. ಈ ವಿಡಿಯೋಗಳಲ್ಲಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸಲಾಗುತ್ತಿತ್ತು. ಕ್ಯಾಮೆರಾ ಹಿಂದಿರುವ ವ್ಯಕ್ತಿ ‘ಬೀದಿ ಅವ್ಯವಸ್ಥೆ’ಯನ್ನು ದಾಖಲಿಸುವ ನೆಪದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾನೆ.

ತನ್ನ ಒಪ್ಪಿಗೆಯಿಲ್ಲದೆ ತನ್ನನ್ನು ಚಿತ್ರೀಕರಿಸಲಾಗಿದೆ ಎಂದು ಹುಡುಗಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಧ್ವನಿ ಎತ್ತಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ವಿಡಿಯೋ ನೋಡಿದ ಬಳಿಕ ಅದನ್ನು ಡಿಲೀಟ್ ಮಾಡುವಂತೆ ಹಾಗೂ ವಿಡಿಯೋ ಅಪ್ಲೋಡ್ ಮಾಡಿದ ಖಾತೆಯ ವಿರುದ್ಧ ವರದಿ ಮಾಡುವಂತೆ ವಿನಂತಿ ಮಾಡಿದರೂ ಏನೂ ಬದಲಾಗಿಲ್ಲ. ಆ ರೀಲ್‌ನಿಂದಾಗಿ ನನಗೆ ಜನರಿಂದ ಅಶ್ಲೀಲ ಮೆಸೇಜ್ಗಳು ಬರುತ್ತಿವೆ ಎಂದು ಯುವತಿ ಬೇಸರ ಹೊರಹಾಕಿದ್ದಳು.

ಈ ವ್ಯಕ್ತಿ ಚರ್ಚ್ ಸ್ಟ್ರೀಟ್‌ನಲ್ಲಿ ಅವ್ಯವಸ್ಥೆಯನ್ನು ಚಿತ್ರೀಕರಿಸುವಂತೆ ನಟಿಸುತ್ತಾ ಓಡಾಡುತ್ತಾನೆ. ಆದರೆ, ವಾಸ್ತವದಲ್ಲಿ ಆತ ಮಾಡುವುದೆಲ್ಲಾ ಮಹಿಳೆಯರನ್ನು ಹಿಂಬಾಲಿಸಿ ಅವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುವುದು. ಅದು ನನಗೂ ಸಂಭವಿಸಿದೆ ಮತ್ತು ಇತರ ಅನೇಕರನ್ನೂ ಚಿತ್ರೀಕರಿಸಿರುವ ಸಾಧ್ಯತೆ ಇದೆ. ನನ್ನ ಖಾತೆಯು ಸಾರ್ವಜನಿಕವಾಗಿ ಮುಕ್ತವಾಗಿದೆ ಎಂಬ ಕಾರಣಕ್ಕೆ ನಾನು ಸಾರ್ವಜನಿಕವಾಗಿ ಚಿತ್ರೀಕರಿಸಲು ಒಪ್ಪುತ್ತೇನೆ ಎಂದರ್ಥವಲ್ಲ. ನೀವು ವೀಕ್ಷಣೆಗಳನ್ನು ಗಳಿಸುವ ಅಥವಾ ಇನ್ಸ್ಟಾಗ್ರಾಂನಲ್ಲಿ ತೊಡಗಿಸಿಕೊಳ್ಳುವ ವಿಧಾನ ಇದಲ್ಲ. ಈ ವ್ಯಕ್ತಿ ಖಂಡಿತ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆಂದು ನಾನು ಭಾವಿಸುತ್ತೇನೆ ಎಂದು ಯುವತಿ ತನ್ನ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಳು. ಅಲ್ಲದೆ, ಬೆಂಗಳೂರು ಪೊಲೀಸರಿಗೆ ವಿಡಿಯೋವನ್ನು ಟ್ಯಾಗ್ ಸಹ ಮಾಡಿದ್ದಳು. ದಯವಿಟ್ಟು ಈ ವಿಡಿಯೋವನ್ನು ತೆಗೆದುಹಾಕಲು ನನಗೆ ಸಹಾಯ ಮಾಡಿ. ನಾನು ಖಾತೆಯನ್ನು ವರದಿ ಮಾಡಿರುವುದರಿಂದ ಆ ಖಾತೆಯನ್ನು ಉಲ್ಲೇಖಿಸಲು ಅಥವಾ ಟ್ಯಾಗ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಆದರೆ, ಖಾತೆಯ ಬಳಕೆದಾರನ ಹೆಸರು ವಿಡಿಯೋದಲ್ಲಿದೆ ಎಂದು ಯುವತಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಳು.

ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಅಲ್ಲದೆ, ಯುವತಿಯರ ವಿಡಿಯೋಗಳಿರುವ ಇನ್‌ಸ್ಟಾಗ್ರಾಮ್ ಖಾತೆಯನ್ನು ಸ್ಥಗಿತಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂ ವೇದಿಕೆಯ ಆಂತರಿಕ ನೀತಿಗಳಿಂದಾಗಿ ವಿಡಿಯೋ ತೆಗೆಸುವುದು ಸದ್ಯಕ್ಕೆ ಜಟಿಲವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ನ ಪೋಷಕ ಕಂಪನಿಯಾದ ಮೆಟಾ ಬಳಿ ಸದ್ಯ ಪ್ರಶ್ನೆಯಲ್ಲಿರುವ ಖಾತೆಯನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ಕೋರಲು ಪೊಲೀಸರು ಈಗ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಅನಪೇಕ್ಷಿತ ಫೋಟೋಗಳು ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಕುಖ್ಯಾತಿ ಪಡೆದ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯನ್ನು ಒಳಗೊಂಡ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದ ಕೆಲವೇ ವಾರಗಳ ನಂತರ ಈ ಬಂಧನವಾಗಿದೆ. ಈ ಹಿಂದಿನ ಖಾತೆಯ ಹಿಂದೆ ಹಾಸನ ಜಿಲ್ಲೆಯ 27 ವರ್ಷದ ದಿಗಂತ್ ಎಂಬ ವ್ಯಕ್ತಿಯ ಕೈವಾಡ ಇತ್ತು. ಆತನನ್ನು ಜೂನ್‌ನಲ್ಲಿ ಬಂಧಿಸಲಾಯಿತು. ದಿಗಂತ್, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ದೈನಂದಿನ ಪ್ರಯಾಣದ ಸಮಯದಲ್ಲಿ ಮಹಿಳೆಯರನ್ನು ಚಿತ್ರೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. 5,000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದ ದಿಗಂತ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಫ್ಲ್ಯಾಗ್ ಮಾಡಿದರು ಮತ್ತು ಔಪಚಾರಿಕ ದೂರು ಮತ್ತು ತನಿಖೆಯ ನಂತರ ಅಂತಿಮವಾಗಿ ಆ ಖಾತೆಯನ್ನು ತೆಗೆದುಹಾಕಲಾಯಿತು


Spread the love
Share:

administrator

Leave a Reply

Your email address will not be published. Required fields are marked *