Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಮನಗರದಲ್ಲಿ ಅನಧಿಕೃತ ಶಾಲೆಗಳ ಹಾವಳಿ: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ, ಪೋಷಕರಿಂದ ಆಕ್ರೋಶ

Spread the love

ರಾಮನಗರದಲ್ಲಿ ನಕಲಿ ಖಾಸಗಿ ಶಾಲೆಗಳ ಹಾವಳಿ: ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ, ಪೋಷಕರು ಆಕ್ರೋಶ

ರಾಮನಗರ: ಶಾಲೆ ಅಂದರೆ ಮಕ್ಕಳ ಪಾಲಿನ ದೇವಸ್ಥಾನವಿದ್ದಂತೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಅದರಲ್ಲೂ ರೇಷ್ಮೆನಗರಿ ರಾಮನಗರದಲ್ಲಿ ಅನುಮತಿ ಪಡೆಯದೇ ನಕಲಿ ಖಾಸಗಿ ಶಾಲೆಗಳನ್ನ ನಡೆಸಲಾಗುತ್ತಿದೆ.

ಅನುಮತಿ ಪಡೆಯದೇ ಆರು, ಏಳನೇ ತರಗತಿ ನಡೆಸುತ್ತಿರುವ ಶಾಲೆ

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಅನಧಿಕೃತ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳ ಹಣದಾಸೆಗೆ ಸಾಕಷ್ಟು ಅಕ್ರಮ ಎಸಗುತ್ತಿವೆ.‌ ಅದಕ್ಕೆ ಸ್ವಷ್ಟ ನಿದರ್ಶನವೆಂಬಂತೆ ರಾಮನಗರದ ಜಿಯಾವುಲ್ಲಾ ಬ್ಲಾಕ್​ನ ಸುಲೆಮಾನ ಹಾಗೂ ಶಬ್ರಿನ್ ತಾಜ್ ಎಂಬುವವರು ತಮ್ಮ ಮಗಳನ್ನ ತಮ್ಮ ಏರಿಯಾದಲ್ಲೇ ಇದ್ದ ನೊಬೆಲ್ ಇಂಗ್ಲಿಷ್ ಶಾಲೆಗೆ ಸೇರಿಸಿದ್ದರು. ಕೇಲವ ಐದನೇ ತರಗತಿವರೆಗೆ ಮಾತ್ರ ಅನುಮತಿಯನ್ನು ಪಡೆದಿರುವ ಶಾಲೆ ಅಕ್ರಮವಾಗಿ ಆರು ಮತ್ತು ಏಳನೇ ತರಗತಿಗಳನ್ನ ನಡೆಸುತ್ತಿರುವುದಾಗಿ ತಮ್ಮ ಮಗಳು ಆರನೇ ತರಗತಿಗೆ ಬಂದ ನಂತರ ಗೊತ್ತಾಗಿದೆ.

ಹೀಗಾಗಿ ಬೇರೆ ಶಾಲೆಗೆ ಸೇರಿಸಲು ಶಾಲೆಯ ಟಿ.ಸಿಯನ್ನ ಕೇಳಿದರೆ ಬೇರೊಂದು ಸರ್ಕಾರಿ ಉರ್ದು ಶಾಲೆಯ ಟಿಸಿ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮಗಳು ಐದನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು ಅದಕ್ಕೆ ಯಾವುದೇ ದಾಖಲೆಗಳನ್ನ ಕೊಟ್ಟಿಲ್ಲವೆಂದು ಶಬ್ರಿನ್ ತಾಜ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ನಗರದ ಗುಡ್ ಹೋಪ್‌ ಎಂಬ ಖಾಸಗಿ ಶಾಲೆ ಸರ್ಕಾರದಿಂದ ಅನುಮತಿಯನ್ನು ಪಡೆಯದೇ ಕಳೆದ ಹಲವು ವರ್ಷದಿಂದ ಶಾಲೆಯನ್ನ ನಡೆಸುತ್ತಿದೆ. ಈ ಶಾಲೆಗೆ ಸೇರಿದ ಪೋಷಕರು ತಮ್ಮ ಮಕ್ಕಳನ್ನ ಬೇರೊಂದು ಶಾಲೆಗೆ ಸೇರಿಸಲು ಆ ಶಾಲೆಯಿಂದ ಆನ್ ಲೈನ್ ಟಿ.ಸಿ ಯನ್ನು ಸಹ ಕೊಟ್ಟಿಲ್ಲ. ಹಣದಾಸೆಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಪೋಷಕರಾದ ಸಲಿಂ ಪಾಷ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಬಿಇಒ ಸೋಮಲಿಂಗಯ್ಯ ಅವರನ್ನ ಕೇಳಿದರೆ, ಈಗಾಗಲೇ ನೊಬಲ್ ಶಾಲೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಡ್ ಹೋಪ್ ಶಾಲೆಯನ್ನ ಮುಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ನಕಲಿ ಖಾಸಗಿ ಶಾಲೆಗಳ ಹಣದಾಹಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವಂತೆ ಆಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *