ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 8.85 ಲಕ್ಷ ಮೌಲ್ಯದ 60 ಕಳುವಾದ ಮೊಬೈಲ್ ಪತ್ತೆ!

ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8.85 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳ 60 ಮೊಬೈಲ್ಗಳನ್ನು ಪತ್ತೆಹಚ್ಚಿದ ಪೊಲೀಸರು ಅವುಗಳ ವಾರಸುದಾರರಿಗೆ ಮಂಗಳವಾರ ಹಸ್ತಾಂತರಿಸಿದರು.


ಉಡುಪಿಯಲ್ಲಿ ನಡೆದ ಸರಣಿ ಮೊಬೈಲ್ ಕಳ್ಳತದಿಂದ ಉಡುಪಿ ಜನರು ಬೇಸತ್ತು. ಸಿಎಐಆರ್ ಪೋರ್ಟಲ್ ನಲ್ಲಿ ದೂರು ನೀಡಿದರು. ಇದೀಗ ಪೊಲೀಸರು ನಡೆಸಿದ ಕಾರ್ಯಚರಣೆಯಿಂದ ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದಿದ್ದಾರೆ. ನಗರ ಠಾಣೆ ಪೊಲೀಸರಿಂದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಿದ್ದಾರೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ನು ಕಳೆದುಕೊಂಡವರಿಗೆ ವಾಪಸ್ ನೀಡಿದ್ದಾರೆ. ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಈ ದೂರಿನ ಆಧಾರ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಮೊಬೈಲ್ ಹುಡುಕಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ., ನಗರ ಠಾಣೆಯಲ್ಲಿ ಕೆಎಸ್ಪಿ ಆ್ಯಪ್ ಮೂಲಕ ಮೊಬೈಲ್ ಕಳವಾದ ದೂರು ಗಳನ್ನು ಸ್ವೀಕರಿಸಲಾಗಿದ್ದು, ಅನಂತರ ಆ ಮೊಬೈಲ್ಗಳನ್ನು ಭಾರತ ಸರಕಾರದ ಸಿಇಐಆರ್ ಪೋರ್ಟಲ್ ಅಪ್ಲಿಕೇಶನ್ ಅಡಿಯಲ್ಲಿ ಬ್ಲಾಕ್ ಮಾಡಲಾಗಿತ್ತು ಎಂದರು.

ಇದೀಗ ಸಿಇಐಆರ್ ಪೋರ್ಟಲ್ನಲ್ಲಿ ಕಳೆದ 3 ತಿಂಗಳಲ್ಲಿ 60 ಮೊಬೈಲ್ಗಳನ್ನು ಪತ್ತೆಹಚ್ಚಿ ಅವುಗಳ ವಾರಸುದಾರರನ್ನು ಠಾಣೆಗೆ ಕರೆಸಿ ಇಂದು ಅವುಗಳನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಭು ಡಿ.ಟಿ. ನುಡಿದರು.