Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ಜುಟ್ಟು ಹಿಡಿದು ಫೈಟ್: ವಿಡಿಯೋ ವೈರಲ್

Spread the love

ನವದೆಹಲಿ: ಪ್ರಯಾಣದ ಸಂದರ್ಭದಲ್ಲಿ ಬಸ್, ರೈಲು, ಮೆಟ್ರೋದಲ್ಲಿ ಸೀಟ್ ಹಿಡಿಯಲು ಪ್ರಯಾಣಿಕರು ಹರಸಾಹಸಪಡುತ್ತಾರೆ. ಕೆಲವೊಮ್ಮೆ ಕೆಲ ಗಂಟೆ ಕುಳಿತುಕೊಳ್ಳುವ ಆಸನಕ್ಕಾಗಿ ಶಕ್ತಿ ಪ್ರದರ್ಶಿಸಬೇಕಾಗುತ್ತದೆ. ಇಂತಹವುದೇ ಒಂದು ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದ್ದು, ಮಹಿಳೆಯರಿಬ್ಬರು ಒಬ್ಬರ ಮೇಲೊಬ್ಬರು ಬಿದ್ದಂತೆ ಫೈಟ್ ಮಾಡಿದ್ದಾರೆ.

ರಾಜಧಾನಿ ದೆಹಲಿ ಮೆಟ್ರೋದಲ್ಲಿ (Delhi Metro) ಇಂತಹ ಹೊಡೆದಾಟಗಳು ಸಾಮಾನ್ಯವಾಗಿರುತ್ತವೆ. ಪ್ರಯಾಣಿಕರಿಗೆ (Passengers) ತೊಂದರೆ ನೀಡುತ್ತಲೇ ಮೆಟ್ರೋ ರೈಲಿನಲ್ಲಿ ಕೆಲವರು ರೀಲ್ಸ್ (Delhi Metro Viral Reels) ಮಾಡುತ್ತಾರೆ. ಇನ್ನು ಕೆಲವರು ರೈಲಿನೊಳಗೆ ಸ್ಟಂಟ್ ಮಾಡುತ್ತಾರೆ. ಈ ಸಂಬಂಧ ಮೆಟ್ರೋ ರೈಲಿನಲ್ಲಿ ದೂರಗಳು ದಾಖಲಾಗುತ್ತಿರುತ್ತವೆ.

ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಂಗುಬಡಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿಯೂ ಮತ್ತು ಬೇಸರದಿಂದಲೂ ಕಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ತಾಳ್ಮೆ ಇಲ್ಲದಿರೋದೇ ಇವರ ಜಗಳಕ್ಕೆ ಪ್ರಮುಖ ಕಾರಣವಾಗಿರುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಕೂದಲು ಹಿಡಿದು ಮೆಟ್ರೋ ಸೀಟಿನಲ್ಲಿ ಡಿಶುಂ ಡಿಶುಂ

ಘರ್ ಕೆ ಕಲೇಶ್ ಎಂಬ ಜನಪ್ರಿಯ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಮೆಟ್ರೋ ಒಂದು ನಿಲ್ದಾಣದಲ್ಲಿ ನಿಂತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಇಬ್ಬರು ಮಹಿಳೆಯರು ಪರಸ್ಪರ ಕೂದಲು ಹಿಡಿದು ಮೆಟ್ರೋ ಸೀಟಿನಲ್ಲಿ ಬಿದ್ದಿದ್ದಾರೆ. ಇಬ್ಬರೂ ಪರಸ್ಪರ ಕೂದಲು ಹಿಡಿದು ಎಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಮೇಲೆ ಬಿದ್ದಿದ್ದಾಳೆ. ಮೇಲಿರುವ ಮಹಿಳೆ ತನ್ನ ಕಾಲನ್ನು ಕೆಳಗಿರುವ ಮಹಿಳೆಯ ಮೇಲೆ ಇಡುತ್ತಿರುವುದನ್ನು ಕಾಣಬಹುದು.

ಈ ವೇಳೆ, ಇನ್ನೊಬ್ಬ ಮಹಿಳಾ ಪ್ರಯಾಣಿಕ ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸುತ್ತಾಳೆ, ಆದರೆ ಇಬ್ಬರೂ ಜಗಳವಾಡುತ್ತಲೇ ಇರುತ್ತಾರೆ. ಸೀಟಿಗಾಗಿ ಜಗಳ ನಡೆದಿದೆ ಎಂದು ವರದಿಯಾಗಿದೆ, ಆದರೆ ಮೆಟ್ರೋದಲ್ಲಿ ಸೀಟುಗಳು ಖಾಲಿ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.

: ಮಟ್ರೋದಲ್ಲಿ ಯುವತಿ ಕೂಗಾಟ, ಚೀರಾಟ ಕೇಳಿ ಹೌಹಾರಿದ ಪ್ರಯಾಣಿಕರು; ಏನ್ ಮಾಡಿದ್ರೂ ತಣ್ಣಗಾಗದ ಹುಡ್ಗಿ

23 ಸೆಕೆಂಡ್, 12 ಲಕ್ಷಕ್ಕೂ ಅಧಿಕ ವ್ಯೂವ್

ಕೇವಲ 23 ಸೆಕೆಂಡುಗಳ ಈ ವಿಡಿಯೋವನ್ನು ಒಂದೇ ದಿನದಲ್ಲಿ 12 ಲಕ್ಷ ಜನರು ವೀಕ್ಷಿಸಿದ್ದಾರೆ. ಅನೇಕ ಜನರು ವಿಡಿಯೋದ ಕೆಳಗೆ ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೆಹಲಿ ಮೆಟ್ರೋ ಯಾವಾಗಲೂ ಮನರಂಜನೆಯ ತಾಣ ಎಂದು ಒಬ್ಬ ವೀಕ್ಷಕ ಬರೆದಿದ್ದಾರೆ. ನಾಟಕ, ಹಾಸ್ಯ, ಮನರಂಜನೆ ಎಲ್ಲವೂ ದೆಹಲಿ ಮೆಟ್ರೋದಲ್ಲಿ ಸಿಗುತ್ತದೆ. ಪ್ರತಿದಿನ ಕಲೇಶ್ ಮೆಟ್ರೋದಲ್ಲಿ ಸಂಚರಿಸುವಾಗ ಯಾರಿಗೆ ಟಿವಿ ಬೇಕು ಎಂದು ಇನ್ನೊಬ್ಬ ವೀಕ್ಷಕ ಪ್ರಶ್ನಿಸಿದ್ದಾರೆ. ಪ್ರಿಯ ಸ್ನೇಹಿತರೇ, ಇಂತಹ ಘಟನೆಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಬೇಡಿ. ನೀವು ಸಿಕ್ಕಿಹಾಕಿಕೊಳ್ಳಬಹುದು ಮತ್ತು ಜಗಳವಾಡಿದವರು ಸ್ನೇಹಿತರಾಗಬಹುದು ಎಂದು ಒಬ್ಬ ವೀಕ್ಷಕ ಸಲಹೆ ನೀಡಿದ್ದಾರೆ.

ಕೆಲವರು ದೆಹಲಿ ಮೆಟ್ರೋದಲ್ಲಿ ನಿಮಗೆ ಮನರಂಜನೆ ಉಚಿತವಾಗಿ ಸಿಗುತ್ತದೆ. ಇಂತಹ ಗಲಾಟೆಗಳು ನಡೆದ್ರೆ ನಮ್ಮ ನಿಲ್ದಾಣ ಬಂದಿರುವ ವಿಷಯವೇ ನಮಗೆ ಗೊತ್ತಾಗಲ್ಲ ಎಂದು ತಮಾಷೆಯಾಗ ಕಮೆಂಟ್ ಮಾಡಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಯುವತಿಯರಿಬ್ಬರು, ಮೋಹೇಂ ರಂಗ್ ಹಾಡಿಗೆ ಮಾದಕವಾಗಿ ನೃತ್ಯ ಮಾಡಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೆಲ್ಲರನ್ನು ಚಕಿತಗೊಳಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *