ಸಿಡಿಲು ಬಡಿದು ಹಾವೇರಿಯಲ್ಲಿ ಇಬ್ಬರ ಸಾವು

ಹಾವೇರಿ: ಸಿಡಿಲು ಬಡಿದು ಇಬ್ಬರು ವೃದ್ಧರು ಮೃತಪಟ್ಟಿರುವ ಪ್ರತ್ಯೇಕ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಹಾನಗಲ್ ತಾಲೂಕಿನ ಕೊಂಡೊಜಿ ಗ್ರಾಮದ ಮರಿಯವ್ವ ನಾಯ್ಕರ್ ಮೃತರು. ಮೂಲತಃ ಗದಗ ಜಿಲ್ಲೆ ಬಸಾಪುರ ಗ್ರಾಮದ ನಿವಾಸಿಯಾದ ಮರಿಯವ್ವ ಕಳೆದ ಕೆಲವು ತಿಂಗಳಿನಿಂದ ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದರು. ಇಂದು ಸಂಜೆ ಸಿಡಿಲು ಬಡಿದು ಮರಿಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ನಾಗಪ್ಪ ಕನಸೋಗಿ(62) ಮೃತ ದುರ್ದೈವಿ. ಗ್ರಾಮದ ದೊಡ್ಡ ಕೆರೆಬಳಿ ದನಕಾಯಲು ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ಬಿರುಗಾಳಿ ಸಮೇತ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ.