ದೀಪಾವಳಿ ದಿನವೇ ರಾಜ್ಯದಲ್ಲಿ ಇಬ್ಬರು ಪತಿರಾಯರ ಆತ್ಮಹತ್ಯೆ: ‘ಪತ್ನಿಯರ ಕಿರುಕುಳವೇ’ ಸಾವಿಗೆ ಕಾರಣ; ಅಂಕೋಲಾ, ಹಾರೋಹಳ್ಳಿಯಲ್ಲಿ ಪ್ರತ್ಯೇಕ ಘಟನೆ

ಅಂಕೋಲಾ ಬಿಡದಿ: ಕೌಟುಂಬಿಕ ಕಲಹದಿಂದ ಬೇಸತ್ತ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ದೀಪಾವಳಿ ಹಬ್ಬದಂದೆ ಆತ್ಮ೧ಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಪತ್ನಿಯರ ಕಿರುಕುಳವೇ ಕಾರಣ ಎಂದು ತಿಳಿದು ಬಂದಿದೆ.

ಮುನಿಸಿಕೊಂಡಿದ್ದ ಪತ್ನಿಗೆ ಸಮಾಧಾನ ಮಾಡಲಾಗದೆ ಸಾವು:
ಮುನಿಸಿಕೊಂಡಿದ್ದ ಹೆಂಡತಿಯನ್ನು ಸಮಾಧಾನ ಮಾಡಲು ಸಾಧ್ಯವಾಗದೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಶಿವಾನಂದ ಆಗೇರ್ (34) ಎನ್ನುವವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಶಿವಾನಂದರ ಪತ್ನಿ ಮುನಿಸಿಕೊಂಡು ತವರಿಗೆ ಹೋಗಿದ್ದರು. ಹಬ್ಬಕ್ಕೆ ಬರಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಶಿವಾನಂದ ತನ್ನ ನಿರೀಕ್ಷೆ ಹುಸಿಯಾಗಿದ್ದಕ್ಕೆ ಸಾವಿಗೆ ಶರಣಾಗಿದ್ದಾರೆ.
ನನ್ನ ಸಾವಿಗೆ ಹೆಂಡತಿ ಕಾರಣ:
ಇನ್ನು, 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹಾರೋಹಳ್ಳಿಯ ಅಣ್ಣೆದೊಡ್ಡಿ ಗ್ರಾಮದ ರೇವಂತ್ (30) ಎಂಬ ಯುವಕ ರೈಲಿಗೆ ತಲೆಕೊಟ್ಟಿದ್ದಾರೆ. ಸಾಯುವ ಮುನ್ನ ರೇವಂತ್ ವಿಡಿಯೋ ಮಾಡಿದ್ದು, ‘ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಒಂದೇ ದಿನ, ದೀಪಾವಳಿ ಹಬ್ಬದಂದೇ ಇಬ್ಬರು ಪತಿರಾಯರು ತಮ್ಮ ಪತ್ನಿಯರ ಕಿರುಕುಳಕ್ಕೆ ಮುನಿಸಿಗೆ ಬೇಸತ್ತು ಆತ್ಮ೧ಹತ್ಯೆ ಮಾಡಿದ್ದಾರೆ.