ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದ ಇಬ್ಬರ ಬಂಧನ

ಸಿದ್ದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಾಸೀರ್ ಹುಸೇನ್ ಅವರು ಜು. 12ರ ಬೆಳಗ್ಗೆ ರೌಂಡ್ಸ್‌ನಲ್ಲಿದ್ದಾಗ ಶಂಕರನಾರಾಯಣ ಗ್ರಾಮದ ಕೊಂಡಳ್ಳಿ ಬಸ್ ನಿಲ್ದಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಗುಲ್ವಾಡಿ ಗ್ರಾಮದ ನವಾಜ್ (35), ಅಶ್ರಫ್ (38) ಎಂಬಾತನನ್ನು ವಶಕ್ಕೆ ಪಡೆದರು.

ಆರೋಪಿಗಳ ಬಳಿ ಇದ್ದ ಮದ್ಯ ಹಾಗೂ ಇತರ ವಸ್ತುಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
