ಕೊನೆಗೂ ‘ಟ್ವಿಟರ್ ಕಿಲ್ಲರ್’ಗೆ ನೇಣು: ಆತ್ಮಹತ್ಯಾ ಆಲೋಚನೆ ಇದ್ದವರನ್ನೇ ಬೇಟೆಯಾಡಿ ಕೊಂದಿದ್ದ ಸೈಕೋಗೆ ಮರಣದಂಡನೆ ಜಾರಿ!

ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಖಾತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಹಾಯ ಮಾಡಿ ಎಂದು ಬರೆದುಕೊಂಡಿದ್ದ ಅಥವಾ ಆತ್ಮಹತ್ಯೆ ಭಾವನೆಯುಳ್ಳ 8 ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಂದಿರುವ ಘಟನೆ ಜಪಾನ್ನಲ್ಲಿ ಈ ಹಿಂದೆ ನಡೆದಿದ್ದು, ಇದೀಗ ಈ ಟ್ವಿಟರ್ ಕಿಲ್ಲರ್ಗೆ ಇಂದು(ಜೂ.27) ಗಲ್ಲಿಗೇರಿಸಲಾಗಿದೆ.

ಆರೋಪಿ 2017ರಲ್ಲಿ 8 ಮಹಿಳೆಯರು ಸೇರೆ ಒಬ್ಬ ಪುರುಷನನ್ನು ಅತ್ಯಾಚಾರ ಮಾಡಿ ಕೊಂದು, ಶವಗಳನ್ನು ತುಂಡು-ತುಂಡಾಗಿ ಮಾಡಿ ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟಿದ್ದ. ಪ್ರಕರಣ ಭೇದಿಸಿದ ಪೊಲೀಸರು ಈ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. 2022ರಲ್ಲಿ ಇತನಿಗೆ(ಟ್ವಿಟರ್ ಕಿಲ್ಲರ್) ಕೋರ್ಟ್ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು. ಇದೀಗ ಇಂದು ಗಲ್ಲಿಗೇರಿಸಲಾಗಿದೆ.
ಯಾರೀ ಟ್ವಿಟರ್ ಕಿಲ್ಲರ್..?
ಜಪಾನ್ನಲ್ಲಿ ‘ಟ್ವಿಟರ್ ಕಿಲ್ಲರ್’ ಎಂದೇ ಬಿಂಬಿತವಾಗಿರುವ ಈ ಸೈಕೋನ ಅಸಲಿ ಹೆಸರು ತಕಹಿರೋ ಶಿರೈಶಿ. ಎಕ್ಸ್ ನಂತಹ ವೇದಿಕೆಗಳಲ್ಲಿ ತಮ್ಮ ಪೋಸ್ಟ್‌ಗಳಲ್ಲಿ ಜೀವನದ ಬಗ್ಗೆ ಹತಾಶೆಯನ್ನು ತೋರಿಸಿದ ಅನೇಕ ಜನರಿದ್ದರು. ಅವರ ಪೋಸ್ಟ್‌ಗಳು ಆತ್ಮಹತ್ಯಾ ಮನೋಭಾವದ್ದಾಗಿದ್ದವು.(ಆತ್ಮಹತ್ಯೆಗೆ ಬಯಸಿದ ಬರಹಗಳಾಗಿದ್ದವು) ಇಂತಹವರನ್ನು ಸಂಪರ್ಕಿಸಿದ ಶಿರೈಶಿ, ಅವರನ್ನು ಟೋಕಿಯೋದ ಅಪಾರ್ಟಮೆಂಟ್ನಲ್ಲಿ ಕರೆಯಿಸಿ ಅತ್ಯಾಚಾರ ಮಾಡಿ, ಕೊಲೆ ಮಾಡುತ್ತಿದ್ದ. ಇದನನ್ನು ತಿಳಿದ ತನ್ನ ಸ್ನೇಹಿತನನ್ನು ಕೂಡ ಕೊಂದಿದ್ದಾನೆ.
ಜಪಾನ್‌ನ ನ್ಯಾಯ ಸಚಿವಾಲಯವು ಈ ಮಾಹಿತಿಯನ್ನು ದೃಢಪಡಿಸಿದೆ. 2022ರ ನಂತರ ಜಪಾನ್‌ನಲ್ಲಿ ಯಾರಿಗಾದರೂ ಮರಣದಂಡನೆ ವಿಧಿಸಲಾಗುತ್ತಿರುವುದು ಇದೇ ಮೊದಲು. ಶಿರೈಶಿಯನ್ನು ಟೋಕಿಯೊ ಬಂಧನ ಭವನದಲ್ಲಿ ಅತ್ಯಂತ ಗೌಪ್ಯವಾಗಿ ಗಲ್ಲಿಗೇರಿಸಲಾಯಿತು. ಅವರ ಮರಣದ ನಂತರ ಅಧಿಕಾರಿಗಳು ಈ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ