Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಕ್ರೇನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಶರತ್ತು: ‘ನ್ಯಾಟೋ ಸದಸ್ಯತ್ವ, ಕ್ರಿಮಿಯಾ ವಶಕ್ಕೆ ಕೇಳಬೇಡಿ’

Spread the love

ವಾಷಿಂಗ್ಟನ್‌: “ನ್ಯಾಟೋ ಸದಸ್ಯತ್ವ ಕೇಳಬೇಡಿ. ರಷ್ಯಾದಿಂದ ಕ್ರಿಮಿಯಾವನ್ನು ಮತ್ತೆ ವಶಪಡಿಸಿಕೊಳ್ಳುವ ಬಗ್ಗೆ ಕೇಳಬೇಡಿ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿಗೆ ಟ್ರಂಪ್‌ ಸೂಚನೆ ನೀಡಿದ್ದಾರೆ.

ಉಕ್ರೇನ್‌ ಯುದ್ಧ ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಜೆಲೆನ್‌ಸ್ಕಿ ಮಾತುಕತೆ ನಡೆಸುವುದಕ್ಕೂ ಮೊದಲೇ ಟ್ರಂಪ್‌ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಕ್ರಿಮಿಯಾ ಬಿಕ್ಕಟ್ಟು ಉಂಟಾಗಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಈ ಮೊದಲು ಸಹ ಉಕ್ರೇನ್‌ನ ಡೊನೆಟ್ಸ್‌ ಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡಲು ಟ್ರಂಪ್‌ ಜೆಲೆನ್‌ಸ್ಕಿಗೆ ಸೂಚಿಸಿದ್ದರು. ಆದರೆ ಇದನ್ನು ಜೆಲೆನ್‌ಸ್ಕಿ ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿದ್ದವು.

ರಷ್ಯಾ ವಿರುದ್ಧವಾಗಿ ಉಕ್ರೇನ್‌ನ ಪರ ವಹಿಸಲು ಯುರೋಪ್‌ನ ಹಲವು ರಾಷ್ಟ್ರಗಳ ಮುಖ್ಯಸ್ಥರು ಜೆಲೆನ್‌ಸ್ಕಿ ಜೊತೆಗೆ ಅಮೆರಿಕ ಭೇಟಿ ಕೈಗೊಂಡಿದ್ದಾರೆ. ಫ್ರಾನ್ಸ್‌, ಬ್ರಿಟನ್‌, ಜರ್ಮನಿ, ಇಟಲಿ, ಫಿನ್‌ಲ್ಯಾಂಡ್ ಮತ್ತು ನ್ಯಾಟೋದ ಮುಖ್ಯಸ್ಥರು ಅಮೆರಿಕ ಭೇಟಿ ಕೈಗೊಂಡಿದ್ದಾರೆ. ಉಕ್ರೇನ್‌ನ ಸಾರ್ವಭೌಮತ್ವ ರಕ್ಷಿಸುವ ಬಗ್ಗೆ ಇವರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *